ನಾಗೇಂದ್ರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರೇ?

By Suvarna News  |  First Published Jun 1, 2024, 3:31 PM IST

ಪರಿಶಿಷ್ಟ ಜಾತಿ, ಪಂಗಡದವರ ಕೆಲಸ ಮಾಡುತ್ತೇನೆ ಎನ್ನುವ ಸಿಎಂ ಸಿದ್ದರಾಮಯ್ಯ, ಅವರದ್ದೇ ಸರ್ಕಾರದಲ್ಲಿ ಬಡವರ ಹಣ ಇವತ್ತು ಕಂಪನಿಗಳ ಖಾತೆಗೆ ಹೋಗಿದೆ. ಆದರೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದ್ದಾರೆ.


ಉಡುಪಿ (ಜೂ.1): ಪರಿಶಿಷ್ಟ ಜಾತಿ, ಪಂಗಡದವರ ಕೆಲಸ ಮಾಡುತ್ತೇನೆ ಎನ್ನುವ ಸಿಎಂ ಸಿದ್ದರಾಮಯ್ಯ, ಅವರದ್ದೇ ಸರ್ಕಾರದಲ್ಲಿ ಬಡವರ ಹಣ ಇವತ್ತು ಕಂಪನಿಗಳ ಖಾತೆಗೆ ಹೋಗಿದೆ. ಆದರೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ? ತಕ್ಷಣ ಸಚಿವರ ರಾಜೀನಾಮೆ ಪಡೆಯಲು ನಿಮಗೆ ಏನು ತೊಂದರೆ? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದ್ದಾರೆ.

ಅವರು ಶನಿವಾರ, ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಬಿಜೆಪಿ, ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರೂ, ರಾಜ್ಯ ಸರಕಾರ ಎಸ್ಐಟಿ ನೇಮಕ ಮಾಡಿ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದರು. 

Tap to resize

Latest Videos

undefined

ವಾಲ್ಮೀಕಿ ನಿಗಮದ ಬಹುಕೋಟಿ ಹಣ ಗುಳುಂ ಆರೋಪ; ಅಮಿತ್ ಶಾಗೆ ಪತ್ರ ಬರೆದ ಯತ್ನಾಳ್!

ಪ್ರಕರಣದ ಕುರಿತಾಗಿ ಯೂನಿಯನ್ ಬ್ಯಾಂಕ್ ಸಿಬಿಐಗೆ ಪತ್ರ ಬರೆದು ತನಿಖೆ ಮಾಡುವಂತೆ ಹೇಳಿದ್ದು, ವಾಲ್ಮೀಕಿ ನಿಗಮದ 87 ಕೋಟಿ ರೂಪಾಯಿ ಹೈದರಾಬಾದ್ ಮೂಲದ 9 ಕಂಪೆನಿಗಳಿಗೆ ಹೋಗಿದೆ. ರಾಜ್ಯವನ್ನು ಮೀರಿ ನಡೆದ ಹಗರಣ ಇದಾಗಿದೆ. ಹೀಗಾಗಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದೇವೆ ಎಂದರು. 

ನನಗಿರುವ ಮಾಹಿತಿಯ ಅನುಸಾರ ಮುಖ್ಯಮಂತ್ರಿಗಳು ಸಚಿವ ನಾಗೇಂದ್ರರನ್ನು ಕರೆದು ರಾಜಿನಾಮ ಕೇಳಿದ್ದಾರೆ. ಆದರೆ ಸಚಿವರು ನನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದಿಗ್ಧತೆಯಲ್ಲಿದ್ದಾರೆ ಎಂದ ಅವರು, ಒಂದು ವಾರದ ಗಡುವು ನೀಡಿದ್ದೇವೆ. ಸಚಿವರ ರಾಜಿನಾಮೆ ಪಡೆಯದೇ ಇದ್ದಲ್ಲಿ, ಸಿಎಂ ಅವರ ರಾಜೀನಾಮೆಗೂ ನಾವು ಆಗ್ರಹಿಸಬೇಕಾಗುತ್ತದೆ ಎಂದರು. 

ಪ್ರಧಾನಿ ಮೋದಿ ಧ್ಯಾನ - ವಿಪಕ್ಷಗಳ ಆಕ್ಷೇಪ ವಿಚಾರ

ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರಯಾಣ, ಐಷಾರಾಮಿ ಜೀವನದ ಬಗ್ಗೆ ವಿಪಕ್ಷಗಳಿಗೆ ಆಸಕ್ತಿಯಿದೆ. ಭಾರತೀಯ ಸಂಸ್ಕೃತಿಯ ಧ್ಯಾನ ಅವರ ಮನಸ್ಸಿಗೆ ಒಪ್ಪಿಗೆ ಆಗುವುದಿಲ್ಲ. ದೇಶಕ್ಕೋಸ್ಕರ ದುಡಿಯುವ ಪ್ರಧಾನಿಯನ್ನು ಕಂಡು ಬೇರೆನು ಟೀಕೆ ಮಾಡಲು ಸಾಧ್ಯವಾಗಿಲ್ಲ‌. ಅಸಹಾಯಕರಾಗಿ ಧ್ಯಾನವನ್ನು ಕೂಡ ಟೀಕೆ ಮಾಡಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಒಪ್ಪದೇ ಇರುವಷ್ಟು ಕೆಟ್ಟ ಪರಂಪರೆಗೆ ಕಾಂಗ್ರೆಸ್ ಇಳಿದಿದೆ ಎಂದು ಟೀಕಿಸಿದರು. 

ವಾಲ್ಮೀಕಿ ನಿಗಮದ ಬಹುಕೋಟಿ ಹಣ ಗುಳುಂ: ಈ ಪ್ರಕರಣದಲ್ಲಿ ಯಾರನ್ನ ಬಿಡುವುದಿಲ್ಲ: ಪ್ರಿಯಾಂಕ್ ಖರ್ಗೆ

ಕೇರಳದಲ್ಲಿ ಶತ್ರು ಭೈರವಿಯಾಗ ಡಿಕೆಶಿ ಆರೋಪ ವಿಚಾರ

ಡಿ.ಕೆ ಶಿವಕುಮಾರ್ ಅವರಿಗೆ ದ್ವಾರಕನಾಥ್ ಅಂತ ಗುರುಗಳಿದ್ದಾರೆ. ಅವರ ಬಳಿ ಈ ವಿಚಾರ ಕೇಳಿದರೆ ಒಳ್ಳೆಯದು. ಮಾಟ, ಮಂತ್ರ ಮಾಡುವ ಸಂಸ್ಕೃತಿ ನಮ್ಮದಲ್ಲ, ಅದರ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆ ನಮಗಿಲ್ಲ. ಅವರ ಗುರುಗಳತ್ರ ಕೇಳಿದರೆ ಸರಿಯಾದ ಉತ್ತರ ಸಿಗಬಹುದು ಎಂದು ವ್ಯಂಗಿಸಿದರು.

click me!