
ವಿಜಯಪುರ (ಮಾ.27): ಯತ್ನಾಳ ಉಚ್ಚಾಟನೆ ಬೆನ್ನಲ್ಲೆ ವಿಜಯಪುರದಲ್ಲಿ ರಾಜೀನಾಮೆಯ ಮಹಾಪರ್ವವೇ ಶುರುವಾಗಿದೆ. ನಿನ್ನೆ 8-10 ಮುಖಂಡರ ರಾಜೀನಾಮೆಯೊಂದಿಗೆ ಶುರುವಾಗಿದ್ದ ಪರ್ವ, ಈಗ ರಾಜೀನಾಮೆ ನೀಡೋರ ಸಂಖ್ಯೆ ಶತಕ ದಾಟುವ ಮೂಲಕ ಮಹಾಪರ್ವವಾಗಿ ಬದಲಾಗಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವ ಕೇಂದ್ರ ಹೈಕಮಾಂಡ್ ನಿಲುವನ್ನು ಖಂಡಿಸಿ ವಿಜಯಪುರ ನಗರ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲ ಮೋರ್ಚಾಗಳ 174 ಪದಾಧಿಕಾರಿಗಳು ಅಧಿಕೃತವಾಗಿ ಗುರುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಯತ್ನಾಳ್ ಉಚ್ಚಾಟನೆ ಖಂಡಿಸಿ 174 ಪದಾಧಿಕಾರಿಗಳ ರಾಜೀನಾಮೆ..!
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೆ ಸಾಲು ಸಾಲು ರಾಜೀನಾಮೆ ಶುರುವಾಗಿದೆ. ಬಿಜೆಪಿಯಲ್ಲಿನ ಯತ್ನಾಳ ಬಣ ಕಂಗಾಲಾಗಿದ್ದು ಸುಮಾರು 174 ಮುಖಂಡರು ರಾಜೀನಾಮೆ ನೀಡಿದ್ದಾರೆ. ಕೇಂದ್ರ ಹೈಕಮಾಂಡ್ ನಿಲುವನ್ನು ಖಂಡಿಸಿ, ಜಿಲ್ಲಾಧ್ಯಕ್ಷ ಅವರಿಗೆ ರಾಜೇನಾಮೆ ಪತ್ರ ರವಾನಿಸಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಸಾಲು ಸಾಲು ರಾಜೀನಾಮೆ, ವಿಜಯಪುರ ಬಿಜೆಪಿ ನಗರ ಮಂಡಲವೇ ಖಾಲಿ ಖಾಲಿ!
ಇದನ್ನೂ ಓದಿ: 'ಬಿಜೆಪಿ ಆ ಮುತ್ತುರತ್ನಗಳನ್ನ..' ಯತ್ನಾಳ್ ಉಚ್ಚಾಟನೆ ಬಗ್ಗೆ ಡಿಕೆ ಶಿವಕುಮಾರ ಫಸ್ಟ್ ರಿಯಾಕ್ಷನ್!
ಇದನ್ನೂ ಓದಿ: ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಬೆಂಬಲಿಗರ ರಾಜೀನಾಮೆ ಪರ್ವ!
ನಗರ ಮಂಡಲ, ಮೋರ್ಚಾ ಹುದ್ದೆಗಳ ಖಾಲಿ ಖಾಲಿ!
ಅದೇ ರೀತಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳು 2, ಉಪಾಧ್ಯಕ್ಷರು 6, ಕಾರ್ಯದರ್ಶಿಗಳು 5, ಸಾಮಾಜಿಕ ಜಾಲತಾಣದ ಸಂಚಾಲಕರು, ಸಹ ಸಂಚಾಲಕರು 3, ಮಾಧ್ಯಮ ಪ್ರಮುಖರು 2, ಕಾರ್ಯಾಲಯ ಕಾರ್ಯದರ್ಶಿ 1, ಕಾನೂನು ಪ್ರಕೋಷ್ಟ 1, ಕೋಶಾಧ್ಯಕ್ಷರು 1, ಕಾರ್ಯಕಾರಿಣಿ ಸದಸ್ಯರು 60 ಜನ ಪದಾಧಿಕಾರಿಗಳು ಹಾಗೂ ಯುವ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ ಕಾರ್ಯದರ್ಶಿಗಳು ಸೇರಿ 12, ಎಸ್.ಸಿ.ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ ಕಾರ್ಯದರ್ಶಿಗಳು ಸೇರಿ 15, ರೈತ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ ಕಾರ್ಯದರ್ಶಿಗಳು ಸೇರಿ 14, ಎಸ್.ಟಿ ಮೋರ್ಚಾ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ ಕಾರ್ಯದರ್ಶಿಗಳು 11, ಮಹಿಳಾ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ ಕಾರ್ಯದರ್ಶಿಗಳು ಸೇರಿ 13, ಓಬಿಸಿ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ ಕಾರ್ಯದರ್ಶಿಗಳು 12, ಅಲ್ಪಸಂಖ್ಯಾತ ಮೋರ್ಚಾದ 10 ಜನ ಪದಾಧಿಕಾರಿಗಳು ಸೇರಿ ಒಟ್ಟು 174 ಪದಾಧಿಕಾರಿಗಳು ನನಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ