ಬರ ಪರಿಹಾರಕ್ಕಾಗಿ ಗೌರ್ನರ್‌ಗೆ ಬಿಜೆಪಿ ಮೊರೆ..!

Published : Jan 10, 2024, 09:51 AM IST
ಬರ ಪರಿಹಾರಕ್ಕಾಗಿ ಗೌರ್ನರ್‌ಗೆ ಬಿಜೆಪಿ ಮೊರೆ..!

ಸಾರಾಂಶ

ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ 

ಬೆಂಗಳೂರು(ಜ.10):  ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ನಿಯೋಗದಲ್ಲಿ ಮಾಜಿ ಸಿಎಂಗಳಾದ ಡಿ.ಎ.ಸದಾನಂದಗೌಡ, ಬೊಮ್ಮಾಯಿ ಸೇರಿದಂತೆ ಬೆಂಗಳೂರು ನಗರದ ಹಲವು ಶಾಸಕರು ಉಪಸ್ಥಿತರಿದ್ದರು.

ಬೇಡಿಕೆಗಳೇನು?

• ಪ್ರತಿ ರೈತರಿಗೆ ಘೋಷಿಸಿರುವ 2000ರು. ಬರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು
• ರೈತರು ಕೃಷಿ ಚಟುವಟಿಕೆಗಾಗಿ ಪಡೆದಿರುವ ಸಾಲದ ಬಡ್ಡಿ ಮನ್ನಾದ ಬದಲು 2 ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡಬೇಕು.

ಪ್ರಧಾನಿ ಮೋದಿ ಭೇಟಿಯಾಗಿ 18,177 ಕೋಟಿ ರೂ. ಬರ ಪರಿಹಾರಕ್ಕಾಗಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ

• ಕುಡಿಯುವ ನೀರಿನ ಸಮಸ್ಯೆ ಎದು ರಿಸುತ್ತಿರುವ ಗ್ರಾಮಗಳಿಗೆ ಕೊಳವೆ ಬಾವಿ ಕೊರೆಸಲು ಅನುದಾನ ನೀಡಬೇಕು. ಶಾಸಕರ ಅಧ್ಯಕ್ಷತೆಯ ಟಾಸ್ಕ್ ಪೋರ್ಸ್‌ಗೆ ಪರಮಾಧಿಕಾರ ನೀಡಿ, ಪ್ರತಿ ತಾಲೂಕಿಗೆ 5 ಕೋಟಿ ರು. ಬರ ಪರಿಹಾರ ನೀಡಬೇಕು. • ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಬರಗಾಲದ ವೇಳೆ ಗ್ರೇಷಿ ಯಸ್ ರಿಲೀಫ್ ಅನ್ವಯ ಪ್ರತಿ ಕುಟುಂಬದ ತಲಾ ಇಬ್ಬರಿಗೆ ಆರ್ಥಿಕ ನೆರವು ನೀಡಬೇಕು.
• ಜಾನುವಾರುಗಳಿಗೆ ಬರುವ ಮಾರ ಣಾಂತಿಕ ಕಾಯಿಲೆಗಳಿಗೆ ಅಗತ್ಯವಿ ರುವ ವ್ಯಾಕ್ಸಿನೇಷನ್ ನೀಡಬೇಕು.
• ಅವಶ್ಯವಿರುವ ಕಡೆ 2022ರಲ್ಲಿ ನೀಡಿದ ಆಹಾರ ಕಿಟ್ ಮಾದರಿಯಲ್ಲಿಯೇ ಇಂದು ಬರದಿಂದ ಬಳಲಿದ ಕುಟುಂಬಗಳಿಗೆ ನೀಡಬೇಕು. ಅತೀವೃಷ್ಟಿಯಾದ ಸಮಯದಲ್ಲಿ ಅಂದಿನ ಸರ್ಕಾರ ರಾಜ್ಯ ಸರ್ಕಾರದ ಖಜಾನೆಯಿಂದ ನೇರವಾಗಿ ನೆರೆ ನಿರ್ವಹಣೆಗೆ ಅನುದಾನ ನೀಡಿದ ರೀತಿಯಲ್ಲಿಯೇ ಬರ ಪರಿಹಾರಕ್ಕೆ ವಿಶೇಷ ಅನುದಾನ ನೀಡಬೇಕು.
• ಹಿಂದಿನ ಸರ್ಕಾರ ಎಸ್‌ಡಿಆರ್‌ಎಫ್ ಅನುದಾನಕ್ಕಿಂತ ಎರಡು ಪಟ್ಟು ಪರಿಹಾರ ನೀಡಿತ್ತು. ಕೇಂದ್ರದ ಹಣ ಬಿಡುಗಡೆಗೆ ಕಾಯದೆ ರಾಜ್ಯ ಸರ್ಕಾರ ತುರ್ತಾಗಿ ಹಣ ಬಿಡುಗಡೆ ಮಾಡಿತ್ತು. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್