ಕೊತ್ವಾಲ್ ರಾಮಚಂದ್ರನ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತೆ? ರಮೇಶ್ ಜಾರಕಿಹೊಳಿ ವಾಗ್ದಾಳಿ

By Kannadaprabha News  |  First Published Dec 6, 2023, 4:08 AM IST

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ. ಕೊತ್ವಾಲ್ ರಾಮಚಂದ್ರನ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತದೆ‌‌? ಆದ್ದರಿಂದ ಬಿಜೆಪಿ ಮುಖಂಡನ ಮೇಲಿನ ಹಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.


ಬೆಳಗಾವಿ (ಡಿ.6) :  ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ. ಕೊತ್ವಾಲ್ ರಾಮಚಂದ್ರನ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತದೆ‌‌? ಆದ್ದರಿಂದ ಬಿಜೆಪಿ ಮುಖಂಡನ ಮೇಲಿನ ಹಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಟರಿ ಮಂತ್ರಿ, ಲಾಟರಿ ಎಂಎಲ್ಎ ಸದ್ಯದಲ್ಲೆ ಅವರು ಮಾಜಿ ಆಗುತ್ತಾರೆ. ಇನ್ನು ಪೃಥ್ವಿ ಸಿಂಗ್ ಬೆನ್ನಿಗೆ ನೂರಕ್ಕೆ ನೂರು ನಾನು ನಿಲ್ಲುತ್ತೇನೆ. ಒಂದು ವೇಳೆ ಪೃಥ್ವಿ ಸಿಂಗ್ ತಪ್ಪು ಮಾಡಿದ್ದರೆ ನಾನು ಅವನ ವಿರುದ್ಧ ಎಂದ ಅವರು, ಲ್ಯಾಂಡ್ ಮಾಫಿಯಾ ಜೋರಾಗಿದೆ ಎಂಬ ವಿಚಾರಕ್ಕೆ ಪಾರಿಶ್ವಾಡದಲ್ಲಿ ಮಹಿಳೆಯರೇ ಗೂಂಡಾಗಿರಿ ಮಾಡುತ್ತಿದ್ದಾರೆ. ಬೇಲಿ ಹಚ್ಚಿ ರಸ್ತೆ ಬಂದ್ ಮಾಡಿ, ಹೊಲ ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಿಜವಾಗಿ ಯಾರಿಗಾದರೂ ಅನ್ಯಾಯವಾದರೆ ಅವರ ಪರವಾಗಿ ನಾನು ನಿಲ್ಲುತ್ತೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಕನಕಪುರ ಆಗುತ್ತಿದೆ ಎಂದು ಹರಿಹಾಯ್ದರು.

Tap to resize

Latest Videos

 

ಬೆಳಗಾವಿಯಲ್ಲಿ ಬಿಜೆಪಿಗನಿಗೆ ಇರಿತ: ಸಚಿವೆ ಹೆಬ್ಬಾಳಕರ ಸಹೋದರ, ಬೆಂಬಲಿಗರಿಂದ ಹಲ್ಲೆ

ಬೆಳಗಾವಿ ಗ್ರಾಮೀಣದಲ್ಲಿ ಲ್ಯಾಂಡ್ ಮಾಫಿಯಾ ಅತೀ ಹೆಚ್ಚು ನಡೆಯುತ್ತಿದೆ. ಬಹಳಷ್ಟು ಬಡವರ ಜಮೀನನ್ನು ಕಬ್ಜಾ ಮಾಡಿಕೊಂಡು ಉತಾರದಲ್ಲಿ ತಮ್ಮ ಹೆಸರು ಸೇರಿಸುವುದು ಮತ್ತು ಕೋರ್ಟ್ ಮೂಲಕ ಆದೇಶ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಲಿತರು, ಬಡವರ ಮೇಲೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದರು.

ರವಿ ಪೂಜಾರಿಯಂತ ಭೂಗತ ಪಾತಕಿಯಿಂದ ಹಲವು ಬಾರಿ ನನಗೂ ಜೀವ ಬೆದರಿಕೆ ಬಂದಿದೆ ಎಂದ ಅವರು, ಪೃಥ್ವಿ ಸಿಂಗ್ ಬೋಗಸ್ ವ್ಯಕ್ತಿ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳೆದು ಬಂದಿರುವುದು ಬೆಳಗಾವಿಯ ಮೂಲೆ ಮೂಲೆಗೂ ಗೊತ್ತಿದೆ ಎಂದು ಲೇವಡಿ ಮಾಡಿದರು.

ದುರ್ದೈವದ ಸಂಗತಿ ಎಂದರೆ ಪೊಲೀಸರು ಮಾಡುವ ಕೃತ್ಯ ನನಗೆ ಬಹಳ ಕೆಟ್ಟ ಅನಿಸುತ್ತಿದೆ. ಬಿಹಾರದಲ್ಲೂ ಈ ರೀತಿ ಆಗಲ್ಲ. ಘಟನೆ ನಡೆದು ಇಷ್ಟೊತ್ತಾದರೂ ಎಫ್ಐಆರ್ ಆಗಲಿಲ್ಲ. ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಪೊಲೀಸರಿಗೆ ನಾನು ಎಚ್ಚರಿಕೆ ಕೊಡುತ್ತೇನೆ ನಿಜಸಂಗತಿ ಹೊರಗೆ ಬರಬೇಕು. ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು. ಆಕಸ್ಮಾತ್ ಪೊಲೀಸರು ಹೀಗೆ ತಮ್ಮ ವರ್ತನೆ ಮುಂದುವರಿಸಿದರೆ, ಪೊಲೀಸರ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಮೊರೆ ಹೋಗುತ್ತೇವೆ. ಎಫ್ಐಆರ್ ಮಾಡುವುದು ತಪ್ಪಲ್ಲ ಮತ್ತು ಅದು ಫೈನಲ್ ಅಲ್ಲ. ಪ್ರಕರಣ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸ್ಥಳೀಯವಾಗಿ ತನಿಖೆ ಆಗಲಿ, ಆದಷ್ಟು ಬೇಗನೆ ನ್ಯಾಯ ಸಿಗಲಿ ಎಂದು ಆಶಿಸಿದರು.

ಸತೀಶ್‌ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್‌ ಮಧ್ಯೆ ಕೋಲ್ಡ್‌ವಾರ್‌ ಇಲ್ಲ: ಚನ್ನರಾಜ

ಪೃಥ್ವಿ ಸಿಂಗ್ ಯಾರದೋ ಮಾತು ಕೇಳಿ ಹೀಗೆ ಮಾಡಿದ್ದಾರೆ ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ‌ ಮನಸ್ಸಿನಲ್ಲಿ ರಮೇಶ ಜಾರಕಿಹೊಳಿ ಇರಬಹುದು‌. ಪೃಥ್ವಿ ಸಿಂಗ್ ನನ್ನ ಶಿಷ್ಯ ಇದ್ದಿದ್ದಕ್ಕೆ ಈ ರೀತಿ ತಿಳಿದಿರಬಹುದು. ಆದರೆ ನಾನು ಅಂತಹ ಕೀಳು ರಾಜಕಾರಣ ಮಾಡಲ್ಲ. ಜಾರಕಿಹೊಳಿ ಕುಟುಂಬ ಚಿಲ್ಲರೆ ರಾಜಕಾರಣ ಮಾಡುವುದಿಲ್ಲ ಎಂದು ತಿರುಗೇಟು ಕೊಟ್ಟರು.

click me!