ಗ್ಯಾರಂಟಿಯಿಂದ ಅಭಿವೃದ್ಧಿಯಾಗುತ್ತಿಲ್ಲ. ಪ್ರಯೋಜನ ತಗೊಂಡವರು ಓಟು ಹಾಕುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂದು ಬೀಳಗಿ ಶಾಸಕ ಜೆಟಿ ಪಾಟೀಲ್ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ಬಾಗಲಕೋಟೆ (ಜೂ.10): ಗ್ಯಾರಂಟಿಯಿಂದ ಅಭಿವೃದ್ಧಿಯಾಗುತ್ತಿಲ್ಲ. ಪ್ರಯೋಜನ ತಗೊಂಡವರು ಓಟು ಹಾಕುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂದು ಬೀಳಗಿ ಶಾಸಕ ಜೆಟಿ ಪಾಟೀಲ್ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಗ್ಯಾರಂಟಿ ಯೋಜನೆಗಳ ಬಗ್ಗೆ ಮರುಪರಿಶೀಲನೆ ಮಾಡಬೇಕು. ಲಕ್ಷ್ಮಣ್ ಈಗಾಗಲೇ ಹೇಳಿದ್ದಾರೆ. ಎಂಟ್ಹತ್ತು ಜನರು ನಾವು ಈಗಾಗಲೇ ಈ ಬಗ್ಗೆ ಮಾತಾಡಿದ್ದೇವೆ. ಗ್ಯಾರಂಟಿ ಯಾರಿಗೆ ಕೊಡಬೇಕು ಎಷ್ಟು ಕೊಡಬೇಕು ಎಂದು ಪರಾಮರ್ಶಿಸಬೇಕು. ಏಕೆಂದರೆ ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲೂ ಗ್ಯಾರಂಟಿ ಯೋಜನೆಗಳ ಮೇಲೆ ನಾವು ನಂಬಿಕೆ ಇಟ್ಟಿದ್ದೆವು ಆದರೆ ಪ್ರಯೋಜನ ಪಡೆದವರು ನಮಗೆ ಅನ್ಯಾಯ ಮಾಡಿದರು. ಇದರ ಜೊತೆಗೆ ಜಾತಿ ರಾಜಕಾರಣದಿಂದಲೂ ಬಾಗಲಕೋಟೆಯಲ್ಲಿ ನಾವು ವಿಫಲರಾದೆವು ಹೀಗಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಾಮರ್ಶಿಸಬೇಕು ಎಂದರು.
undefined
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಗೆಲ್ಲಲು ಕೋಮುವಾದ ಕಾರಣ: ದಿನೇಶ್ ಗುಂಡೂರಾವ್
ಈ ಸಂಬಂದ ನಾವು ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚಿಸಲಿದ್ದೇವೆ. ಬಸ್ ಫ್ರೀ ಒಮ್ಮೆಲೇ ತೆಗೆಯಲು ಆಗೊಲ್ಲ. ಯಾರಿಗೆ ಬೇಕು, ಎಷ್ಟು ಫ್ರೀ ಕೊಡಬೇಕು ಎಂದೆಲ್ಲ ಮರುಪರಿಶೀಲನೆ ನಡೆಸಿ ಬಳಿಕ ನಿರ್ಧಾರ ಮಾಡಬೇಕಿದೆ ಎಂದರು. ಆ ಮೂಲಕ ಗ್ಯಾರಂಟಿ ಯೋಜನೆಗಳನ್ನ ಹಂತಹಂತವಾಗಿ ತೆಗೆಯುವ ಬಗ್ಗೆ ಸುಳಿವು ನೀಡಿದ ಶಾಸಕ. ಚುನಾವಣಾ ಪೂರ್ವ ಬಿಜೆಪಿ ನಾಯಕರು ಹೇಳಿದ್ದ ಮಾತು ನಿಜವಾಗುತ್ತಿದೆ. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಲೋಕಸಭಾ ಚುನಾವಣೆವರೆಗೆ ಮಾತ್ರ. ಆ ಬಳಿಕ ಗ್ಯಾರಂಟಿ ಯೋಜನೆ ಆಸೆಗೆ ಮತ ಹಾಕಿದ ರಾಜ್ಯದ ಜನರಿಗೆ ಚೊಂಬು ನೀಡುತ್ತಾರೆ ಎಂದು ಆರೋಪಿಸಿದ್ದರು. ಆದರೀಗ ಕಾಂಗ್ರೆಸ್ ಶಾಸಕ ಸಚಿವರೇ ಒಬ್ಬೊಬ್ಬರಾಗಿ ಗ್ಯಾರಂಟಿ ಯೋಜನೆ ಬಗ್ಗೆ ಅಪಸ್ವರ ಎತ್ತಿರುವುದು ವಿಪಕ್ಷ ನಾಯಕರ ಹೇಳಿಕೆಗಳಿಗೆ ಇಂಬು ಕೊಟ್ಟಂತಾಗಿದೆ.
ಸೋತಿದ್ದೇವೆಂದು ಟಾಟಾ ಬೈಬೈ ಹೇಳೊಲ್ಲ, ಇಲ್ಲಿಯೇ ಇರುತ್ತೇವೆ: ಗೀತಾ ಶಿವರಾಜ್ ಕುಮಾರ್