ಹುತಾತ್ಮರ ಮಕ್ಕಳ ಶಿಕ್ಷಣ ಜವಾಬ್ದಾರಿ ನಮ್ಮದು: ಶಾಹೀನ್ ವಿದ್ಯಾ ಸಂಸ್ಥೆ

By Web DeskFirst Published Feb 21, 2019, 5:13 PM IST
Highlights

ಪುಲ್ವಾಮಾ ಹುತಾತ್ಮರ ಕುಟುಂಬಕ್ಕೆ ನೆರವಿನ ಮಹಾಪೂರ| ಹುತಾತ್ಮರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಬೀದರ್ ನ ಶಾಹೀನ್ ವಿದ್ಯಾ ಸಂಸ್ಥೆ| ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಶಾಹೀನ್ ಶೀಕ್ಷಣ ಸಂಸ್ಥೆ| ಹುತಾತ್ಮರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಟೊಂಕ ಕಟ್ಟಿ ಶಾಹೀನ್ ಸಂಸ್ಥೆ|

ಬೀದರ್(ಫೆ.21): ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ಇಡೀ ದೇಶದಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಇದಕ್ಕೆ ಮತ್ತೊಂದು ಕೊಂಡಿ ಸೇರ್ಪಡೆಯಾಗಿದ್ದು, ಹುತಾತ್ಮರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರುವುದಾಗಿ ಬೀದರ್‌ನ ಶಾಹೀನ್ ವಿದ್ಯಾ ಸಂಸ್ಥೆ ಘೋಷಿಸಿದೆ.

ಹೌದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂಸ್ಥೆಯಾಗಿರುವ ಬೀದರ್‌ನ ಪ್ರಸಿದ್ಧ ಶಾಹೀನ್ ವಿದ್ಯಾ ಸಂಸ್ಥೆ, ಹುತಾತ್ಮರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಟೊಂಕ ಕಟ್ಟಿ ನಿಂತಿದೆ.

ಈ ಕುರಿತು ಮಾಹಿತಿ ನೀಡಿರುವ ಶಾಹೀನ್ ಶಿಕ್ಷಣ ಸಂಸ್ಥೆಯ ಡಾ. ಅಬ್ದುಲ್ ಖದೀರ್, ದೇಶಕ್ಕಾಗಿ ಪರಮೋಚ್ಛ ತ್ಯಾಗ ಮಾಡಿರುವ ವೀರ ಸೈನಿಕರನ್ನು ಸಂಸ್ಥೆ ಸದಾ ಸ್ಮರಿಸಲಿದೆ ಎಂದು ಹೇಳಿದ್ದಾರೆ. 

ಹುತಾತ್ಮರ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರ ಬಲಿದಾನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಅವಕಾಶ ಸಿಕ್ಕರೆ ಅದೇ ನಮ್ಮ ಪಾಲಿನ ಸೌಭಾಗ್ಯ ಎಂದು ಖದೀರ್ ನುಡಿದಿದ್ದಾರೆ. 
 

click me!
Last Updated Feb 21, 2019, 5:25 PM IST
click me!