ಟೋಲ್ ಶುಲ್ಕ ಹೆಚ್ಚಳ: ಎಕ್ಸ್‌ಪ್ರೆಸ್‌ ವೇ ಮಧ್ಯ​ದ​ಲ್ಲಿಯೇ ಸಾರಿಗೆ ಬಸ್‌ ಯೂ ಟರ್ನ್‌!

By Kannadaprabha News  |  First Published Aug 1, 2023, 7:04 AM IST

ಟೋಲ್‌ನಿಂದ ಬಚಾವ್‌ ಆಗಲು ಚಾಲ​ಕ​ನೊಬ್ಬ ಸಾರಿಗೆ ಬಸ್‌ ಅನ್ನು ಬೆಂಗ​ಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇನ ಮಧ್ಯ​ದ​ಲ್ಲಿಯೇ ಯೂ ಟರ್ನ್‌ ಮಾಡಿ ರಾಂಗ್‌ ಸೈಡಿ​ನಲ್ಲಿ ಸಂಚ​ರಿಸಿ ವಾಹನ ಸವಾ​ರ​ರಲ್ಲಿ ಆತಂಕ ಸೃಷ್ಟಿ​ಸಿದ ಘಟನೆ ಬಿಡದಿ ಸಮೀಪ ನಡೆ​ದಿದೆ.


ರಾಮ​ನ​ಗ​ರ (ಆ.1): ಟೋಲ್‌ನಿಂದ ಬಚಾವ್‌ ಆಗಲು ಚಾಲ​ಕ​ನೊಬ್ಬ ಸಾರಿಗೆ ಬಸ್‌ ಅನ್ನು ಬೆಂಗ​ಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇನ ಮಧ್ಯ​ದ​ಲ್ಲಿಯೇ ಯೂ ಟರ್ನ್‌ ಮಾಡಿ ರಾಂಗ್‌ ಸೈಡಿ​ನಲ್ಲಿ ಸಂಚ​ರಿಸಿ ವಾಹನ ಸವಾ​ರ​ರಲ್ಲಿ ಆತಂಕ ಸೃಷ್ಟಿ​ಸಿದ ಘಟನೆ ಬಿಡದಿ ಸಮೀಪ ನಡೆ​ದಿದೆ.

ಬೆಳಗ್ಗೆ 8 ಗಂಟೆ ಸಮ​ಯ​ದಲ್ಲಿ ಕೆ.ಎ.42, ಎಫ್‌ - 2233 ನಂಬ​ರಿನ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಚಾಲಕ ಎಕ್ಸ್‌ಪ್ರೆಸ್‌ ವೇ ಮಧ್ಯ​ದಲ್ಲಿ ಯೂ ಟರ್ನ್‌ ಮಾಡಿಕೊಂಡು ಸಂಚ​ರಿ​ಸು​ತ್ತಿ​ರುವ ವಿಡಿಯೋ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿದೆ. ಟೋಲ…ನ ಹಣ ಉಳಿಸುವ ಕಾರಣಕ್ಕೆ ಬಸ್‌ ಅನ್ನು ಯೂ ಟರ್ನ್‌ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಪ್ರಯಾಣಿಕರ ಪ್ರಾಣ ಸಂಕಟಕ್ಕೆ ತಳ್ಳಿದ ಡ್ರೈವರ್‌ ವಿರುದ್ಧ ಜನರು ಕಿಡಿಕಾರಿದ್ದಾರೆ. ಜೊತೆಗೆ ಬಸ್‌ ಹಿಂದೆ ಬರುತ್ತಿದ್ದ ಇತರೆ ವಾಹನ ಸವಾರರಲ್ಲಿಯೂ ಇದು ಆತಂಕ ಮೂಡಿಸಿದೆ.

Tap to resize

Latest Videos

ಇಂದಿನಿಂದ ಬೈಕ್‌, ರಿಕ್ಷಾಗೆ ಬೆಂ-ಮೈ ಹೈವೇಲಿ ನಿಷೇಧ: ನಿಯಮ ಮೀರಿದ್ರೆ 500 ರೂ. ದಂಡ

ಸದ್ಯ ಸಾಮಾಜಿಕ ಜಾಲತಾಣ(Social media)ದಲ್ಲಿ ವಾಹನ ಸವಾರರು ವಿಡಿಯೋ ಹಂಚಿಕೊಂಡಿದ್ದಾರೆ. ನರಸಿಂಹ ಉಪಾಧ್ಯಾಯ ಈ ಘಟನೆ ಕುರಿತಾಗಿ ಟ್ವೀಚ್‌ ಮಾಡಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ(Bengaluru mysuru expressway)ನಲ್ಲಿ ಸಂಭವಿಸುತ್ತಿರುವ ಅನೇಕ ಅಪಘಾತಗಳಿಗೆ ಯಾರು ಜವಾಬ್ದಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಇಂತಹ ಅರ್ಥಹೀನ ಚಾಲಕರಾ ಎಂದು ಪ್ರಶ್ನಿಸಿದ್ದಾರೆ.

click me!