ರಷ್ಯಾ ಪರ್ವತದಲ್ಲಿ ಕನ್ನಡದ ಬಾವುಟ ನೆಟ್ಟ ಬೆಂಗಳೂರಿಗ!

Kannadaprabha News   | Asianet News
Published : Sep 28, 2021, 07:49 AM IST
ರಷ್ಯಾ ಪರ್ವತದಲ್ಲಿ ಕನ್ನಡದ ಬಾವುಟ ನೆಟ್ಟ ಬೆಂಗಳೂರಿಗ!

ಸಾರಾಂಶ

  ರಷ್ಯಾ ಪರ್ವತದಲ್ಲಿ ಕನ್ನಡದ ಬಾವುಟ ನೆಟ್ಟ ಬೆಂಗಳೂರಿಗ! - ಮೌಂಟ್‌ ಏಲ್‌ಬ್ರಸ್‌ ಏರಿ ಸಾಹಸ ಮೆರೆದ ನವೀನ್‌ ಯೂರೋಪ್‌ನ ಅತಿ ಎತ್ತರದ ಶಿಖರ ಏರಿದ ಸಾಹಸಿ  

ಬೆಂಗಳೂರು (ಸೆ.28):  ಬೆಂಗಳೂರಿನ (Bengaluru) ನಿವಾಸಿ ಮತ್ತು ಟ್ರೆಕ್‌ನೊಮಾಡ್ಸ್‌ ಫೌಂಡೇಶನ್‌ ಸಂಸ್ಥಾಪಕ ನವೀನ್‌ ಮಲ್ಲೇಶ್‌ (Naveen Mallesh) ಅವರು ರಷ್ಯಾದ (Russia) ಅತ್ಯಂತ ಎತ್ತರದ ಶಿಖರ ‘ಮೌಂಟ್‌ ಎಲ್‌ಬ್ರಸ್‌’ (Mount Elbrus) ಏರಿ ಕನ್ನಡದ ಬಾವುಟ ಹಾರಿಸಿದ್ದಾರೆ.

ಯುರೋಪ್‌ ಖಂಡದಲ್ಲೇ ಅತ್ಯಂತ ಎತ್ತರದ 18,510 ಅಡಿ (5,642 ಮೀಟರ್‌) ಶಿಖರವೇರಿದ ನವೀನ್‌ ‘ಕನ್ನಡ ಮತ್ತು ಭಾರತದ ಬಾವುಟ ನೆಟ್ಟಿದ್ದಾರೆ. ರಷ್ಯಾದ ಶಿಖರದಲ್ಲಿ ಕನ್ನಡದ ಹೆಜ್ಜೆ ಮೂಡಿಸಿದ ನವೀನ್‌, ಈ ಹಿರಿಮೆಯನ್ನು ಕೊರೋನಾ (Covid ) ಫ್ರಂಟ್‌ಲೈನ್‌ ವಾರಿಯರ್‌ಗಳಾದ ವೈದ್ಯರು, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಪೊಲೀಸರು (Police), ಪೌರಕಾರ್ಮಿಕರು ಸೇರಿದಂತೆ ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ.

ಅತಿ ಎತ್ತರದ ಕಿಲಿಮಂಜಾರೋ ಪರ್ವತದ ಮೇಲೆ ಸೋನು ಸೂದ್ ಫೋಟೋ; ಅಭಿಮಾನಿಯಿಂದ ಧನ್ಯವಾದ!

ಸದ್ಯ ಪರ್ವತದ ಪ್ರಯಾಣ ಕುರಿತು ಫೋಟೊ ಮತ್ತು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನವೀನ್‌ ತಾವೇ ರೂಪಿಸಿದ ಅಲೆಮಾರಿ ಚಾರಣಿಗರು ಯೋಜನೆಯ 7ನೇ ಆವೃತ್ತಿಯಲ್ಲಿ ‘ಮೌಂಟ್‌ ಎಲ್‌ಬ್ರಸ್‌’ ಹತ್ತಲು ಸೆಪ್ಟೆಂಬರ್‌ ಮೊದಲ ವಾರ ನಿರ್ಧರಿಸಿದ್ದರು. ವಿಸಾ ಸಿಗುವುದು ತಡವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ಮೂರನೇ ವಾರ ಯೋಜನೆ ಆರಂಭವಾಯಿತು. ಗೈಡ್‌ನ ಸಹಾಯದಿಂದ ಫೌಂಡೇಶನ ಸದಸ್ಯರ ಜೊತೆ ಸೆ.17ಕ್ಕೆ ಶಿಖರವೇರುವ ಕಾರ್ಯ ಆರಂಭವಾಯಿತು. ಈವರೆಗೂ ನಾನು ಏರಿದ ಪರ್ವತಗಳ ಪೈಕಿ ಈ ಎಲ್‌ಬ್ರಸ್‌ ಕಠಿಣ ಹಾದಿ. ಅತಿ ಚಳಿ ಜೊತೆಗೆ ದೇಹ ವಾತಾವರಣಕ್ಕೆ ಹೊಂದಿಕೊಳ್ಳದ ಸ್ಥಿತಿ ಎದುರಿಸಿ ಚಾರಣ ಯಶಸ್ವಿಯಾಗಿ ಕೊನೆಗೊಳಿಸಿದೆವು ಎಂದು ನವೀನ್‌ ಬರೆದುಕೊಂಡಿದ್ದಾರೆ.

ನವೀನ್‌ ನಗರದ ಡಾ.ಅಂಬೇಡ್ಕರ್‌ ತಾಂತ್ರಿಕ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಲಖನೌನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ. ಜತೆಗೆ ಜವಾಹರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್‌ ಆ್ಯಂಡ್‌ ವಿಂಟರ್‌ ಸ್ಪೋಟ್ಸ್‌ರ್‍ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.

4 ದಿನದಲ್ಲಿ 17 ಪರ್ವತಾರೋಹಣ ಮಾಡಿ ಗಿನ್ನಿಸ್‌ ದಾಖಲೆ

 4 ದಿನದಲ್ಲಿ 17 ಪರ್ವತಾರೋಹಣ ಮಾಡಿ ಗಿನ್ನಿಸ್‌ ದಾಖಲೆಯ (Guinness Record )ಸಾಧನೆಗೈದಿರುವ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ವೀರ ಯೋಧ ವೀರೇಶ ಗಾದಿಗನೂರು ಮಂಗಳವಾರ ಸ್ವಗ್ರಾಮಕ್ಕೆ ಆಗಮಿಸಿದ್ದು ಅವರನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿ, ಮನೆಗೆ ಕಳುಹಿಸಿಕೊಟ್ಟರು.

ವೀರೇಶ ಮೈಲಾಪುರ ಗ್ರಾಮದ ಪಂಪನಗೌಡ ಗಾದಿಗನೂರು ಅವರ ಪುತ್ರ. 2011ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡು ಆಂಧ್ರಪ್ರದೇಶ, ಜಮ್ಮು ಕಾಶ್ಮೀರ, ಆಸ್ಸಾಂ, ಪಂಜಾಬ್‌, ಸಿಕ್ಕಿಂ, ಅರುಣಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಯುದ್ಧ, ಭಯೋತ್ಪಾದಕರ ಜೊತೆಗಿನ ಗುಂಡಿನ ಚಕಮಕಿಗಳಲ್ಲಿ ಪಾಲ್ಗೊಂಡಿದ್ದಾರೆ. ಬಿ.ಎ. ಪದವೀಧರರಾಗಿರುವ ವೀರೇಶ ರೈತ ಕುಟುಂಬದಲ್ಲಿ ಕಷ್ಟಜೀವನ ನಡೆಸಿ ಶಿಕ್ಷಣ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ