ಬೆಂಗಳೂರಿನ ವೀರ್ ಸಾವರ್ಕರ್ ಮೇಲ್ಸೇತುವೆ ಫಲಕಕ್ಕೆ ಮಸಿ ಬಳಿದ ಮೂವರು ಆರೋಪಿಗಳ ಬಂಧನ

By Sathish Kumar KH  |  First Published May 28, 2024, 6:37 PM IST

ಬೆಂಗಳೂರಿನ ಯಲಹಂಕದ ವೀರ್ ಸಾವರ್ಕರ್ ಮೇಲ್ಸೇತುವೆಯ ಫಲಕಕ್ಕೆ ಮಸಿ ಬಳಿದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಬೆಂಗಳೂರು (ಮೇ 28): ಭಾರತದ ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಜನ್ಮದಿನದಂದೇ ಬೆಂಗಳೂರಿನ ಯಲಹಂಕ ಮೇಲ್ಸೇತುವೆಯ ವೀರ್ ಸಾವರ್ಕರ್ ಫಲಕಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಫಲಕಕ್ಕೆ ಬಳಿದಿದ್ದ ಮಸಿಯನ್ನು ಬಿಬಿಎಂಪಿ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ.

ಬೆಂಗಳೂರಿನ (Bengaluru) ಯಲಹಂಕ ಮೇಲ್ಸೆತುವೆಯ (Yelahanka veer Savarkar Flyover) ವೀರ ಸಾವರ್ಕರ್ ನಾಮಫಲಕಕ್ಕೆ ಎನ್ಎಸ್‌ಯುಐ (NSUI) ಮೂವರು ಕಾರ್ಯಕರ್ತರು ಮಸಿ ಬಳಿದಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಈ ಘಟನೆಯನ್ನು ಖಂಡಿಸಿ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ (Yalahanka MLA SR Vishwanath) ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನೂ ಮಾಡಿದ್ದರು. ಬಿಜೆಪಿ ಕಾರ್ಯಕರ್ತರೊಂದಿಗೆ ಹಲವು ಹಿಂದೂಪರ ಸಂಘಟನೆಗಳು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದವು.

Tap to resize

Latest Videos

ಈ ವೇಳೆ ಯಲಹಂಕ ಮೇಲ್ಸೇತುವೆ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಟ್ರಾಫಿಕ್ ಜಾಮ್ ಮಾಡಿದ್ದ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಬಂದ ಪೊಲೀಸರು ಎಷ್ಟೇ ಮನವಿ ಮಾಡಿದರೂ ಅಲ್ಲಿಂದ ಯಾರೊಬ್ಬರೂ ತೆರಳಲಿಲ್ಲ. ಇನ್ನು ಯಲಹಂಕ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಸಂಜೆಯೊಳಗೆ ಬಂಧಿಸುವುದಾಗಿ ಭರವಸೆ ನಿಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದಿದ್ದರು.

Shocking Video: ಪುತ್ರನ ಎದೆ ಮೇಲೆ ಕುಳಿತು ತಾಯಿಯಿಂದ ಹಲ್ಲೆ; ದೂರು ಕೊಟ್ಟ ತಂದೆಗೆ ಶಾಕ್ ಕೊಟ್ಟ ಮಗ

ಇನ್ನು ಪೊಲೀಸರು ಭರವಸೆ ಕೊಟ್ಟಂತೆ ವೀರ್ ಸಾವರ್ಕರ್ ಫಲಕಕ್ಕೆ ಮಸಿ ಬಳಿದಿದ್ದ ಎನ್ಎಸ್‌ಯುಐ ಸದಸ್ಯರಾದ ಪ್ರವೀಣ್, ರಕ್ಷ ರಾಜ್, ನಿಶ್ಚಿತ್ ಗೌಡ ಎನ್ನುವವರನ್ನು ವಶಕ್ಕೆ ಪಡೆದಿದ್ದಾರೆ. ಯಲಹಂಕ ನ್ಯೂ ಟೌನ್ ಪೊಲೀಸರಿಂದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ವೀರಸಾವರ್ಕರ್ ಮೇಲು ಸೇತುವೆಗೆ ಮಸಿ ಬಳಿದ ನಂತರ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಬಿಬಿಎಂಪಿ ಸಿಬ್ಬಂದಿ ಮಸಿಯನ್ನು ಒರೆಸಿದ್ದಾರೆ. ಹೀಗೆ ಮಸಿಯನ್ನು ಒರೆಸುವ ವೇಳೆ ಫ್ಲೈ ಓವರ್ ಬಂದ್ ಮಾಡಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ: ಒಬ್ಬ ರಾಷ್ಟ್ರಭಕ್ತನನ್ನು ಅಪಮಾನಿಸಲು ಮತ್ತೊಬ್ಬ ರಾಷ್ಟ್ರಭಕ್ತನ ಭಾವಚಿತ್ರವನ್ನು ಗುರಾಣಿಯಂತೆ ಬಳಸಿಕೊಂಡು ಯಲಹಂಕದ ವೀರ್ ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಎನ್.ಎಸ್.ಯು.ಐ ಕಿಡಿಗೇಡಿಗಳು ಮಸಿಬಳಿದು ಅಪಮಾನ ಮಾಡಿ ವಿಕೃತಿ ಮೆರೆದಿರುವ ಘಟನೆ ಅತ್ಯಂತ ಖಂಡನೀಯ. ರಾಷ್ಟ್ರ ಭಕ್ತರನ್ನು ಅಪಮಾನಿಸುವ ದೇಶ ವಿದ್ರೋಹಿಗಳನ್ನು ರಕ್ಷಿಸುವ ಕಾಂಗ್ರೆಸ್ ಸಂಸ್ಕೃತಿಗೆ ಈ ಘಟನೆ ಕನ್ನಡಿ ಹಿಡಿದಿದೆ.

ಎಲ್ರ್ ಕಾಲೆಳೆಯತ್ತೆ ಕಾಲ.. ಹಿಜಾಬ್‌ ವಿಚಾರ ಕೆದಕಿ ರಘುಪತಿ ಭಟ್‌ಗೆ ಟಾಂಗ್‌ ನೀಡಿದ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ!

ಕಾಂಗ್ರೆಸ್ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶವನ್ನು ಮರೆಮಾಚಿಕೊಳ್ಳುವ ಉದ್ದೇಶದಿಂದ ಕೆಲ ಕಿಡಿಗೇಡಿ ಯುವಕರನ್ನು ಈ ರೀತಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಲು ಛೂ ಬಿಟ್ಟಿರುವುದು ಈ ನಾಡಿನ ದುರ್ದೈವವಾಗಿದೆ. ಸಾರ್ವಕರ್ ಅವರನ್ನು ಅಪಮಾನಿಸುವ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರ ಪ್ರದರ್ಶಿಸಿರುವ ಕಿಡಿಗೇಡಿಗಳು ಇಬ್ಬರೂ ರಾಷ್ಟ್ರಭಕ್ತರನ್ನು ಏಕಕಾಲದಲ್ಲಿ ಅಪಮಾನಿಸಿದ್ದಾರೆ. ಈ ಕೂಡಲೇ ವೀರ ಸಾವರ್ಕರ್ ಅವರನ್ನು ಅಪಮಾನಿಸಿರುವ ಎಲ್ಲರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.

click me!