ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಬುಕಿಂಗ್‌ ಮಾಡುವವರಿಗೆ ಹೊಸ ಸಂಕಷ್ಟ!

Published : Aug 01, 2024, 02:07 PM IST
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಬುಕಿಂಗ್‌ ಮಾಡುವವರಿಗೆ ಹೊಸ ಸಂಕಷ್ಟ!

ಸಾರಾಂಶ

ಬೆಂಗಳೂರಿನಲ್ಲಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡುವವರಿಗೆ ಹೊಸ ಸಂಕಷ್ಟ ಶುರುವಾಗಿದೆ. ನಂಬರ್ ಪ್ಲೇಟ್ ಬುಕಿಂಗ್ ಮಾಡಿದ ಅಪ್ಡೇಟ್ ಮಾಡಿ ಹಣ ಕಳೆದುಕೊಂಡಿದ್ದಾನೆ.

ಬೆಂಗಳೂರು (ಆ.01): ರಾಜ್ಯದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (HSRP) ಬುಕಿಂಗ್ ಮಾಡುವವರಿಗೆ ಈಗ ಹೊಸದೊಂದು ಸಂಕಷ್ಟ ಆರಂಭವಾಗಿದೆ. ಕೇಂದ್ರ ಸರ್ಕಾರದ ಹೆಚ್‌ಎಸ್‌ಆರ್‌ಪಿ ನಂನರ್ ಪ್ಲೇಟ್ ಬುಂಕಿಂಗ್ ಮಾಡುವ ವೆಬ್‌ಸೈಟ್‌ ಅನ್ನು ನಕಲಿ ಮಾಡಿ ಲಕ್ಷಾಂತರ ರೂ. ಹಣ ವಂಚನೆ ಮಾಡಿವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡಿದ ಬೆಂಗಳೂರು ವ್ಯಕ್ತಿಯೊಬ್ಬ ಬರೋಬ್ಬರಿ 95 ಸಾವಿರ ರೂ. ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಇನ್ನೂ ಶೇ.55ಕ್ಕಿಂತ ಹೆಚ್ಚಿನ ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯುವ ಅವಧಿಯನ್ನು ಈಗಾಗಲೇ 3 ಬಾರಿ ವಿಸ್ತರಣೆ ಮಾಡಲಾಗಿದೆ. ಇನ್ನು ಕೋಟ್ಯಾಂತರ ಜನರು ತಮ್ಮ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಆದರೆ, ಅರ್ಜಿ ಸಲ್ಲಿಕೆ ವೇಳೆ ಸಾರಿಗೆ ಇಲಾಖೆಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್‌ಗಳನ್ನು ಸರಿಯಾಗಿ ಗುರುತಿಸಿ ಅಪ್ಲೈ ಮಾಡಬೇಕು. ಇಲ್ಲವಾದರೆ ಖಾಸಗಿ ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಕೆಗೆ ಮುಂದಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. 

ಮುಡಾ ಪ್ರಾಸಿಕ್ಯೂಷನ್ ಸಂಕಷ್ಟ; ಸಿಎಂ ಸಿದ್ದರಾಮಯ್ಯ ಹೊರಗಿಟ್ಟು ಸಚಿವ ಸಂಪುಟ ಸಭೆ ಆಯೋಜನೆ

ಹೌದು, HSRP ನಂಬರ್ ಪ್ಲೇಟ್ ಹೆಸರಲ್ಲಿ ಸೈಬರ್ ವಂಚಕ ಜಾಲ ಸಕ್ರಿಯವಾಗಿದೆ. ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡ್ತಿದ್ದಂತೆ ನಿಮ್ಮ ಅಕೌಂಟ್‌ನಲ್ಲಿರೊ ಹಣ ಮಾಯವಾಗಲಿದೆ. HSRP ನಂಬರ್ ಪ್ಲೇಟ್ ಬುಕ್ ಮಾಡಿದ್ದ ವಿಜಿತ್ ಕುಮಾರ್ ಗೆ 95 ಸಾವಿರ ವಂಚನೆ ಮಾಡಲಾಗಿದೆ. ತನಗೆ ವಂಚನೆಯಾಗಿರುವ ಬಗ್ಗೆ ವಿಜಿತ್ ಕುಮಾರ್ ಅವರು ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ವಿಜಿತ್ ಕುಮಾರ್ ತಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಬುಕ್ ಮಾಡಲು bookmyhsrp.net ಲಿಂಕ್‌ನಲ್ಲಿ ನಲ್ಲಿ ರಿಜಿಸ್ಟರ್ ಮಾಡಿದ್ದರು.

ಅನ್ನಭಾಗ್ಯ ಯೋಜನೆಗೆ ಗುಡ್‌ನ್ಯೂಸ್; ಕರ್ನಾಟಕ ಕೇಳಿದರೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸಿದ್ಧವಿದೆ!

ಆದರೆ, ಒಂದು ವಾರದ ನಂತರ ನಿಮ್ಮ ಅಡ್ರೆಸ್ ಸರಿ ಇಲ್ಲ, ಕೆಳಗೆ ಕೊಟ್ಟ ಲಿಂಕ್ ಕ್ಲಿಕ್ ಮಾಡಿ ಅಪ್ಡೇಟ್ ಮಾಡಿ ಎಂದು ಮೇಲ್ ಬಂದಿತ್ತು. ಈ ಲಿಂಕ್ ಕ್ಲಿಕ್ ಮಾಡಿ ಅಡ್ರೆಸ್ ಅಪ್ಲೋಡ್ ಮಾಡಿದ್ದನು. ಇದಾದ ನಾಲ್ಕು ದಿನಗಳಲ್ಲಿ ಹಂತ ಹಂತವಾಗಿ ವಿಜಿತ್‌ಕುಮಾರ್ ಕ್ರೆಡಿಟ್ ಕಾರ್ಡ್‌ನಿಂದ 95 ಸಾವಿರ ರೂ. ಹಣ ಕಡಿತವಾಗಿದೆ. ಈ ಸಂಬಂಧಪಟ್ಟಂತೆ ಬಾಗಲೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈಗ ವಿಜಿತ್‌ಕುಮಾರ್‌ನ ಇಮೇಲ್ ಐಡಿ ಮತ್ತು ಬ್ಯಾಂಕ್ ಖಾತೆಯ ವಿವರನ್ನು ಪೊಲೀಸರು ಪಡೆದು, ಹಣ ಕಡಿತವಾಗಿರುವ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!