Bengaluru Vegetable Prices: ಗಗನಕ್ಕೇರಿದ ತರಕಾರಿ ಬೆಲೆ; ರೇಟ್ ಕೇಳಿ ಗ್ರಾಹಕರು ಸುಸ್ತು! ಯಾವ್ಯಾವ ಬೆಲೆ ಎಷ್ಟಿದೆ?

Published : Jun 09, 2025, 11:53 AM ISTUpdated : Jun 09, 2025, 11:56 AM IST
Bengaluru rain effect Vegetable price hike

ಸಾರಾಂಶ

ನಿರಂತರ ಮಳೆಯಿಂದಾಗಿ ತೋಟದಲ್ಲೇ ಹಾಳಾಗುತ್ತಿರುವ ಬೆಳೆಯಿಂದ ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿವೆ. ಪೂರೈಕೆ ಕೊರತೆಯಿಂದಾಗಿ ನುಗ್ಗೆಕಾಯಿ ₹200, ಡಬಲ್ ಬೀನ್ಸ್ ₹300 ಮತ್ತು ಬಟಾಣಿ ₹400 ದಾಟಿದೆ.

ಬೆಂಗಳೂರು(ಜೂ.9): ಕಳೆದ 20 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಟದಲ್ಲೇ ಹಾಳಾಗುತ್ತಿರುವ ಬೆಳೆ ಇದರ ಪರಿಣಾಮವಾಗಿ ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿವೆ. ಕೆ.ಆರ್.ಮಾರ್ಕೆಟ್‌ಗೆ ಅಗತ್ಯಕ್ಕೆ ತಕ್ಕಷ್ಟು ತರಕಾರಿಗಳು ಆಗಮಿಸದ ಹಿನ್ನೆಲೆ ಪೂರೈಕೆ ಕೊರತೆಯಿಂದ ದರಗಳು ಗಗನಕ್ಕೇರಿವೆ. 

ನುಗ್ಗೆಕಾಯಿ ₹200 ಗಡಿ ದಾಟಿದರೆ, ಡಬ್ಬಲ್ ಬಿನ್ಸ್ ಕೆಜಿಗೆ ₹300 ಗಡಿ ದಾಟುವ ಸಾಧ್ಯತೆಯಿದೆ. ಇನ್ನು ಬಟಾಣಿ ಈಗಾಗಲೇ ₹400 ಗಡಿ ದಾಟಿದೆ. ತರಕಾರಿ ಬೆಲೆ ಕೇಳಿ ಗ್ರಾಹಕರು ಸುಸ್ತಾಗಿದ್ದಾರೆ.

ಆಗಿದ್ರೆ ಯಾವ ತರಕಾರಿ ಬೆಲೆ ಎಷ್ಟಿದೆ(ಪ್ರತಿ ಕೆ.ಜಿ)?

ಬೀನ್ಸ್- 80- 100

ಕ್ಯಾರೆಟ್-60-80

ಊಟಿ ಕ್ಯಾರೆಟ್- 100

ಬದನೆಕಾಯಿ-60

ಬಿಳಿ ಬದನೆಕಾಯಿ- 80

ಬೆಂಡೆಕಾಯಿ- 50-60

ತೊಂಡೆಕಾಯಿ- 60

ಬಿಟ್ರೂಟ್- 40

ಚಪ್ಪರದವರೆಕಾಯಿ- 100

ನುಗ್ಗೆಕಾಯಿ- 200

ಬಟಾಣಿ- 400

ಹೀರೇಕಾಯಿ- 60

ಹಾಗಲಕಾಯಿ-80

ಸೌತೆಕಾಯಿ - 60

ಸೋರೆಕಾಯಿ- 60

ಹೂಕೋಸು- 40

ಈರುಳ್ಳಿ- 25

ಬೆಳ್ಳುಳ್ಳಿ- 100

ಮೆಣಸಿನಕಾಯಿ- 60

ಕ್ಯಾಪ್ಸಿಕಂ- 80

ನವಿಲುಕೋಸು- 80

ಡಬ್ಬಲ್ ಬೀನ್ಸ್- 300

ಮಂಗಳೂರು ಸೌತೆ- 60

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !