ಬೆಂಗಳೂರು ಧ್ವಂಸಕ್ಕೆ ಉಗ್ರರ ಸ್ಕೆಚ್‌, ನಾಪತ್ತೆಯಾಗಿರುವ ಜುನೈದ್‌ ಪ್ರಿಯತಮೆ ಬಗ್ಗೆ ಮಾಹಿತಿ ಲಭ್ಯ

By Gowthami KFirst Published Jul 25, 2023, 8:54 AM IST
Highlights

ಬೆಂಗಳೂರಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಎಲ್‌ಇಟಿ ಸಂಘಟನೆಯ ಐವರು ಶಂಕಿತ ಉಗ್ರರ ಬಂಧನದ ಬಳಿಕ ನಾಪತ್ತೆಯಾಗಿರುವ ಕಿಂಗ್‌ಪಿನ್ ಜುನೈದ್‌ಗೆ  ಗರ್ಲ್ ಫ್ರೆಂಡ್ ಇದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು (ಜು.25): ಬೆಂಗಳೂರು ನಗರದಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್‌-ಇ-ತೋಯ್ಬಾ (ಎಲ್‌ಇಟಿ) ಸಂಘಟನೆಯ ಐವರು ಶಂಕಿತ ಉಗ್ರರ ಬಂಧನವಾದ ಬೆನ್ನಲ್ಲೇ ಉಗ್ರರ ಸಂಪರ್ಕ ಜಾಲವನ್ನು ಬೇಧಿಸಲು ಇದೀಗ ಅವರ ಮೊಬೈಲ್‌ನಲ್ಲಿ ಅಡಕವಾಗಿರುವ ‘ರಹಸ್ಯ’ಗಳ ಶೋಧನಾ ಕಾರ್ಯವನ್ನು ಸಿಸಿಬಿ ಆರಂಭಿಸಿದೆ. ಈ ನಡುವೆ ನಾಪತ್ತೆಯಾಗಿರುವ ಜುನೈದ್ ನ ಮಾಹಿತಿಯನ್ನು ತನಿಖಾ ತಂಡ ಕಲೆ ಹಾಕಿದ್ದು, 2021ರಲ್ಲಿ ಜುನೈದ್ ಬೆಂಗಳೂರು ಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಜುನೈದ್‌ಗೆ ಓರ್ವ ಗರ್ಲ್ ಫ್ರೆಂಡ್ ಕೂಡ ಇದ್ದು, ಪ್ರಕರಣಕ್ಕೂ ಮುನ್ನ ಜುನೈದ್ ಆಕೆಯ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದ. ಆದ್ರೆ ಕೇಸ್ ಬೆಳಕಿಗೆ ಬಂದ ಬಳಿಕ ಸಂಪರ್ಕ ಕಡಿತಗೊಳಿಸಿಕೊಂಡಿದ್ದಾನೆ. ಈ ಬಗ್ಗೆ ಯುವತಿ ಬಳಿ ತನಿಖಾ ತಂಡ ಮಾಹಿತಿ ಕಲೆ ಹಾಕಿದೆ. ಯುವತಿಗೆ ಜುನೈದ್ ಉಗ್ರ ಚಟುವಟಿಕೆ ಬಗ್ಗೆ ಮಾಹಿತಿ ಇಲ್ಲ. ಈ ಹಿಂದೆ ಅಕೆಯ ಜೊತೆಗೆ ಜುನೈದ್ ಹೇಗಿದ್ದ, ವರ್ತನೆಗಳು ಹೇಗಿದ್ವು ಎಂದು ಯುವತಿ ಮಾಹಿತಿ ನೀಡಿದ್ದಾಳೆ.

Latest Videos

ಹತ್ಯೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಹಂತಕಿ ಪತ್ನಿ, ಅನೈತಿಕ ಸಂಬಂಧಕ್ಕೆ ಗಂಡನ ಮುಗಿಸಿದ

ಜುನೈದ್ ತನ್ನ ಪಾಸ್ ಪೋರ್ಟ್ ಬಳಸಿಯೇ ವಿದೇಶಕ್ಕೆ ಹಾರಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಸಿಸಿಬಿ  ತನಿಖೆ ವೇಳೆ ಜುನೈದ್ ತನ್ನ ಒರಿಜಿನಲ್ ಪಾಸ್ ಪೋರ್ಟ್ ಮೂಲಕ ಪ್ರಯಾಣ ಮಾಡಿರುವುದು ಬೆಳಕಿಗೆ ಬಂದಿದೆ. 2017ರಲ್ಲಿ  ಕೊಲೆ ಕೇಸ್ ದಾಖಲಾಗುವ ಮೊದಲೇ  ಜುನೈದ್ ಪಾಸ್ ಪೋರ್ಟ್ ಹೊಂದಿದ್ದ. ಆದ್ರೆ ಕೇಸ್ ನಲ್ಲಿ ಯಾವುದೇ ಇಂಟರ್ನ್ಯಾಷನಲ್ ಲಿಂಕ್ ಇಲ್ಲದ ಕಾರಣ ಪಾಸ್ ಪೋರ್ಟ್ ಸೀಜ್ ಮಾಡಿರಲಿಲ್ಲ. ಬಳಿಕ ದುಬೈ ವೀಸಾ ಪಡೆದು ಹೋಗಿದ್ದ. ನಂತ್ರ ದುಬೈ ನಿಂದ ಮಿಡಲ್ ಈಸ್ಟ್ ನಲ್ಲಿಯೇ ಇರುವ ಅಜೆರ್ಬೈಜಾನ್ ದೇಶದ ಬಾಕು ಎಂಬ ನಗರದಲ್ಲಿ ಇದ್ದಾನೆ ಎಂಬ ಬಗ್ಗೆ ಮಾಹಿತಿ ಇದೆ. ಸದ್ಯ ಇಂಟರ್ ಪೋಲ್ ಮೂಲಕ ಜುನೈದ್ ಪತ್ತೆ ಮಾಡಲು ಯತ್ನಿಸಲಾಗುತ್ತಿದೆ.

Bengaluru: ವಿದ್ಯಾರ್ಥಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿಲ್ಲ, ಪಿಇಎಸ್‌ ವಿಶ್ವವಿದ್ಯಾಲಯ

ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾಗ ಹೆಬ್ಬಾಳ ಸಮೀಪದ ಸುಲ್ತಾನ್‌ಪಾಳ್ಯದ ಸೈಯದ್‌ ಸುಹೇಲ್‌ಖಾನ್‌ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆಗ ಸುಹೇಲ್‌, ಪುಲಕೇಶಿ ನಗರದ ಮೊಹಮದ್‌ ಫೈಜಲ್‌ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್‌ ಉಮರ್‌, ಜಾಹೀದ್‌ ತಬ್ರೇಜ್‌ ಹಾಗೂ ಆರ್‌.ಟಿ.ನಗರದ ಸೈಯದ್‌ ಮುದಾಸೀರ್‌ ಪಾಷ ಬಂಧಿಸಿದ ಪೊಲೀಸರು, ಆರೋಪಿಗಳಿಂದ 7 ನಾಡಾ ಪಿಸ್ತೂಲ್‌ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್‌, ಡ್ಯಾಗರ್‌ ಹಾಗೂ 12 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು.   ಈ ವಿಧ್ವಂಸಕ ಕೃತ್ಯದ ಮಾಸ್ಟರ್‌ ಮೈಂಡ್‌ ಎಲ್‌ಇಟಿ ಉಗ್ರ ಮಹಮ್ಮದ್‌ ಜುನೈದ್‌ ಆಗಿದ್ದಾನೆ.

click me!