ಗೇ ಡೇಟಿಂಗ್ ಆ್ಯಪ್‌ನಲ್ಲಿ ಗಂಡನ ಪ್ರೊಫೈಲ್..! ಆಮೇಲೆ ?

By Suvarna News  |  First Published Jul 26, 2021, 9:09 PM IST
  • ಡೇಟಿಂಗ್ ಆ್ಯಪ್‌ನಲ್ಲಿ ಗಂಡನ ಪ್ರೊಫೈಲ್..!
  • ಬೆಂಗಳೂರು ಟೆಕ್ಕಿ ಮಹಿಳೆ ಶಾಕ್

ದೆಹಲಿ(ಜು.26): ಕರ್ನಾಟಕದ ಬೆಂಗಳೂರಿನಲ್ಲಿ ಸಲಿಂಗಕಾಮಿ ಡೇಟಿಂಗ್ ಆ್ಯಪ್‌ಗಳಲ್ಲಿ ತನ್ನ ಗಂಡನ ಪ್ರೊಫೈಲ್‌ಗಳನ್ನು ಕಂಡುಹಿಡಿದ 28 ವರ್ಷದ ಟೆಕ್ಕಿ ಮಹಿಳೆ ಪತಿಯಿಂದ ವಿಚ್ಛೇದನೆ ಕೋರಿದ್ದಾರೆ.

ಅವರು ಮಹಿಳಾ ಸಹಾಯವಾಣಿಗೆ ದೂರು ನೀಡಿದ್ದು, ಬಸವನಗುಡಿ ಪೊಲೀಸರು ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ದಂಪತಿಗಳಿಗೆ ಕೌನ್ಸೆಲಿಂಗ್ ಸೆಷನ್‌ಗಳನ್ನು ನಡೆಸಲಾಗಿದ್ದರೂ, ಮಹಿಳೆ ನ್ಯಾಯಾಲಯದಲ್ಲಿ ವಿಚ್ಛೇದನೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

38ರ ಆಂಟಿಗೆ 19 ವರ್ಷದ ಇಬ್ಬರು ಬಾಯ್‌ಫ್ರೆಂಡ್ಸ್..! ಸೋಂಬೇರಿ ಪತಿ ಮರ್ಡರ್

ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ 2018 ರ ಜೂನ್‌ನಲ್ಲಿ 31 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಇದು ತನ್ನ ಪತಿಗೆ ಎರಡನೇ ವಿವಾಹವಾಗಿತ್ತು. ಪತಿ ತನ್ನ ಲೈಂಗಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಡಿ ತನ್ನನ್ನು ಮೋಸ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಹಿರಿಯರು ಮದುವೆ ಮಾಡಿದ್ದು ವ್ಯಕ್ತಿ ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗಳು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ ನಂತರ,  ವ್ಯಕ್ತಿ ತನ್ನ ಹೆಂಡತಿಯಿಂದ ದೂರವಿದ್ದ. ಪ್ರಶ್ನಿಸಿದಾಗಲೆಲ್ಲಾ ಮೊದಲ ಹೆಂಡತಿ ತನಗೆ ಮೋಸ ಮಾಡಿದ್ದಾಳೆ. ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ ಎಂದು ಹೇಳುತ್ತಿದ್ದ.

ವರದಕ್ಷಿಣೆಗಾಗಿ ಸಾಕಷ್ಟು ಹಣವನ್ನು ತರದ ಕಾರಣ ವ್ಯಕ್ತಿ ಮಹಿಳೆ ಮೇಲೆ ಕೂಗಾಡಲು ಪ್ರಾರಂಭಿಸಿದ್ದ. ಪತ್ನಿ ವಿರುದ್ಧ ಸಿಲ್ಲಿ ಆರೋಪಗಳನ್ನು ಮಾಡುತ್ತಿದ್ದ. ಮೊದಲ ಲಾಕ್‌ಡೌನ್ ಸಮಯದಲ್ಲಿ ತನ್ನ ಪತಿ ಯಾವಾಗಲೂ ಮೊಬೈಲ್ ಫೋನ್‌ನಲ್ಲಿ ಚಾಟ್ ಮಾಡುತ್ತಿರುವುದನ್ನು ಮಹಿಳೆ ಗಮನಿಸಿದ್ದಾಳೆ.

ಎರಡನೇ ಲಾಕ್‌ಡೌನ್ ಸಮಯದಲ್ಲಿ ಪತಿ ಬಗ್ಗೆ ಹೆಚ್ಚು ಅನುಮಾನ ವ್ಯಕ್ತಪಡಿಸಿದ ನಂತರ ಅವನ ಫೋನ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದಳು. ತನ್ನ ಪತಿ ಸಲಿಂಗಕಾಮಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ತನ್ನ ಪ್ರೊಫೈಲ್ ಅನ್ನು ಇರಿಸಿಕೊಂಡಿದ್ದಾನೆ. ಬಹಳಷ್ಟು ಜನರೊಂದಿಗೆ ಚಾಟ್ ಮಾಡುತ್ತಿರುವುದು ಪತ್ನಿ ಗಮನಕ್ಕೆ ಬಂದಿದೆ.

ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಆಕೆ ತನ್ನ ಪತಿಯ ವಿರುದ್ಧ ಮಹಿಳೆಯ ಸಹಾಯವಾಣಿಗೆ ದೂರು ನೀಡಿದ್ದಳು. ಆರಂಭಿಕ ಹಂತಗಳಲ್ಲಿ ತನ್ನ ಲೈಂಗಿಕ ದೃಷ್ಟಿಕೋನವನ್ನು ಸ್ವೀಕರಿಸಲು ಆತ ನಿರಾಕರಿಸಿದರೂ ನಂತರ ಒಪ್ಪಿಕೊಂಡಿದ್ದಾನೆ.

click me!