
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹಾಡಹಗಲೇ ನಡೆದ 7 ಕೋಟಿ 11 ಲಕ್ಷ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳ ಬಂಧನವಾಗಿದೆ. ಈ ಮೂಲಕ ಇದುವರೆಗೂ ಪ್ರಕರಣದಲ್ಲಿ ಆರು ಆರೋಪಿಗಳ ಬಂಧನವಾಗಿದೆ. ಹೈದ್ರಾಬಾದ್ ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಹೈದ್ರಾಬಾದ್ ನ ಲಾಡ್ಜ್ ಒಂದರಲ್ಲಿ ಆರೋಪಿಗಳು ತಲೆಮರಿಸಿಕೊಂಡಿದ್ದರು.ಬಂಧಿತ ಆರೋಪಿಗಳಿಂದ ಒಟ್ಟು 70 ಲಕ್ಷ ಹಣ ರಿಕವರಿ ಮಾಡಲಾಗಿದೆ. ಈ ಮೂಲಕ ಪ್ರಕರಣದಲ್ಲಿ ಇದುವರೆಗೂ 6.45 ಕೋಟಿ ಹಣ ಜಫ್ತಿ ಮಾಡಿದಂತಾಗಿದೆ.
ಸಿದ್ದಾಪುರ ಪೊಲೀಸರು ಮೂವರನ್ನು ಬಂಧಿಸಿದ್ದು, ಹೈದ್ರಾಬಾದ್ ನಿಂದ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಒಟ್ಟು ಆರು ಆರೋಪಿಗಳ ಬಂಧನವಾಗಿದ್ದು, ಇನ್ನು ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಪ್ರಕರಣದಲ್ಲಿ 67 ಲಕ್ಷ ಹಣ ರಿಕವರಿ ಆಗಬೇಕಿದೆ. ನವೀನ್, ನೆಲ್ಸನ್, ಹಾಗೂ ರವಿ ಹೈದ್ರಾಬಾದ್ ನಲ್ಲಿ ಬಂಧನವಾದ ಆರೋಪಿಗಳಾಗಿದ್ದಾರೆ.
CMS ಕಂಪೆನಿಯಲ್ಲಿ ಗೋಪಿ ಎಂಬಾತ ಕೆಲಸಕ್ಕೆ ಇರ್ತಾನೆ. ವೆಹಿಕಲ್ ಅಲರ್ಟ್ ಮಾಡೋ ಕೆಲಸವನ್ನ ಆತ ಮಾಡ್ಕೊಂಡಿದ್ದ. ಈ ಹಿಂದೆ CMS ಕಂಪೆನಿಯಲ್ಲಿ ಓಲ್ಡ್ ಎಂಪ್ಲಾಯ್ ಆಗಿದ್ದವನು ಜೇವಿಯರ್. ಕಮ್ಮನಹಳ್ಳಿಯ ಜೇವಿಯರ್ ಮತ್ತು ಗೋಪಿ ಆತ್ಮೀಯ ಸ್ನೇಹಿತರು. ಪ್ರತೀ ಬಾರಿಯೂ ಎಣ್ಣೆಗೆ ಸಿಟ್ಟಿಂಗ್ ಹಾಕ್ದಾಗ ಜೇವಿಯರ್ ಹಾಗೂ ಗೋಪಿ ಕೋಟಿ ಕೋಟಿ ಹಣದ ಬಗ್ಗೆ ಡಿಸ್ಕಸ್ ಮಾಡ್ತಿದ್ರು. ಹೀಗಿದ್ದ ಜೇವಿಯರ್ ಕಾನ್ಸ್ ಟೇಬಲ್ ಅಣ್ಣಪ್ಪನ ಬಳಿ CMS ವಾಹನವನ್ನು ಹೈಜಾಕ್ ಮಾಡೋಕೆ ಸ್ಕೆಚ್ ಕೇಳಿದ್ದ. ಪಿಸಿ ಅಣ್ಣಪ್ಪ 15 ದಿನಗಳ ಕಾಲ ಸ್ಕೆಚ್ ಹಾಕಿ ನೀಲಿ ನಕ್ಷೆ ರೆಡಿ ಮಾಡಿದ್ದ. ಅದರಂತೆ ಬಾಣಸವಾಡಿಯಲ್ಲಿ ಇನ್ನೋವಾ ಕಾರನ್ನ ಬಾಡಿಗೆಗೆ ಪಡೆಯಲಾಗುತ್ತೆ. ನಂಬರ್ ಪ್ಲೇಟ್ ಗಳನ್ನ ಅರೆಂಜ್ ಮಾಡ್ಕೊಂಡು ಟೀಂ ಕೂಡ ಸೆಟ್ ಆಗುತ್ತೆ.
ಅಫೆನ್ಸ್ ಮಾಡೋ ದಿನ ರವಿ, ರಾಕೇಶ, ನವೀನ ಸೇರಿ ಒಟ್ಟು 5 ಮಂದಿ ರಾಬರಿಗೆ ರೆಡಿಯಾಗ್ತಾರೆ. ಅದರಂತೆ CMS ವಾಹನವನ್ನ ತಡೆದು RBI ಅಧಿಕಾರಿಗಳೆಂದು 7.11 ಕೋಟಿ ರಾಬರಿ ಮಾಡ್ತಾರೆ. CMS ವಾಹನದಲ್ಲಿ ಪ್ರತೀ ವಾರದ ಬುಧವಾರ, ಗುರುವಾರ 5 ಕೋಟಿ ಹಣ ಸಾಗಿಸಲಾಗುತ್ತೆ ಎಂಬ ಮಾಹಿತಿ ಗೋಪಿ ಕೊಟ್ಟಿದ್ದ. ಅದರಂತೆ ಬುಧವಾರವೇ ಪ್ಲ್ಯಾನ್ ಪಕ್ಕಾ ಆಗಿ ರಾಬರಿ ಮಾಡಲಾಗುತ್ತೆ.
ಇಲ್ಲಿ ರವಿ ಹಾಗೂ ರಾಕೇಶ್ ಇಬ್ರೂ ರಿಟೈರ್ಡ್ ಮಿಲಿಟರಿ ಆಫೀಸರ್ ಮಕ್ಕಳು. ರವಿ ಹಾಗೂ ರಾಕೇಶ್ ಆಂಧ್ರದ ಚಿತ್ರಪಲ್ಲಿಯವರಾಗಿದ್ದಾರೆ. ಆಂದ್ರದ ಚಿತ್ರಪಲ್ಲಿಯ ರವಿ ಮನೆಯಲ್ಲಿ ಹಣವನ್ನ ಇಡೋಕೆ ಪ್ಲ್ಯಾನ್ ರೂಪಿಸಲಾಗಿತ್ತು. ಸ್ಕೈಪ್ ನಲ್ಲೇ ಕಾಲ್ ನಲ್ಲೇ ಅಣ್ಣಪ್ಪನನ್ನ ರವಿ ಕಾಂಟ್ಯಾಕ್ಟ್ ಮಾಡ್ತಿದ್ದ. ಹೊಸಕೋಟೆ ಟೋಲ್ ಮೂಲಕ ಹೋಗದೆ ಬೂದಿಗೆರೆ ಕ್ರಾಸ್ ನ ಮೂಲಕ ಆಂಧ್ರಕ್ಕೆ ಪಲಾಯನ ಮಾಡಿದ್ರು.
ಆದ್ರೆ, ಪೊಲೀಸರ ಭಯದಲ್ಲಿ ಚಿತ್ತೂರು ಬಳಿಯೇ ಕಾರನ್ನ ಬಿಟ್ಟು ಎಸ್ಕೇಪ್ ಆದ್ರು, ಇನ್ನು ರವಿ ಪೊಲೀಸರ ಹಾದಿ ತಪ್ಪಿಸಲು ಚೆನ್ನೈ ನ ಮೆಟ್ರೋ ನಿಲ್ದಾಣದ ಬಳಿ ಮೊಬೈಲ್ ಸ್ವಿಚ್ ಆಫ್ ಮಾಡ್ತಾನೆ. ಅಲ್ಲಿಂದ ರಾಕೇಶನ ಜೊತೆಗೆ ಆಂಧ್ರಕ್ಕೆ ಎಸ್ಕೇಪ್ ಆಗಿದ್ದ. ಚಿತ್ತೂರಿನ ಕಾಡಿನಲ್ಲಿ ಖಾಲಿ ಟ್ರಂಕನ್ನ ಎಸೆದು ರವಿ ಟೀಂ ಪರಾರಿಯಾಗಿತ್ತು. ಇದೀಗ 6 ಆರೋಪಿಗಳನ್ನ ಬಂಧಿಸಿ 6.45 ಕೋಟಿ ಹಣ ಪೊಲೀಸರು ರಿಕವರಿ ಮಾಡಿದ್ದಾರೆ. CCB ಹಾಗೂ ದಕ್ಷಿಣ ವಿಭಾಗದ ಪೊಲೀಸರು ಆರೋಪಿಗಳನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಈ ಪ್ರಥಮ ಬಾರಿಗೆ ಬಂಧಿಸಲಾಗಿದ್ದ, ಮೂವರು ಆರೋಪಿಗಳನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಸಿದ್ದಾಪುರ ಪೊಲೀಸರು ಆರೋಪಿಗಳನ್ನು ಕಾರ್ಪೋರೇಷನ್ ಸರ್ಕಲ್ ಬಳಿಯ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸ್ ಪೇದೆ ಅಣ್ಣಪ್ಪ ನಾಯಕ, ಕ್ಸೇವಿಯರ್ ಹಾಗೂ ಮತ್ತೊಬ್ಬ ಆರೋಪಿ ಗೋಪಿ ಕೋರ್ಟ್ ಗೆ ಹಾಜರು ಪಡಿಲಾಯ್ತ. ನ್ಯಾಯಾಲಯ ಡಿಸೆಂಬರ್ 1ರವರೆಗೆ ಆರೋಪಿಗಳಿಗೆ ಪೊಲೀಸ್ ಕಸ್ಟಡಿ ವಿಧಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ