
ನವದೆಹಲಿ (ನ.22) ಕರ್ನಾಟಕ ರಾಜ್ಯ ರಾಜಕಾರಣ ದೇಶದಲ್ಲೇ ಸದ್ದು ಮಾಡುತ್ತಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಬದಲಾವಣೆ, ಎರಡು ಬಣಗಳ ನಾಯಕರ ಸತತ ಸಭೆ, ಹೈಕಮಾಂಡ್ ಭೇಟಿಗಳಿಂದಾಗಿ ದೇಶದಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಹಲವರು ಕೂತೂಹಲ ಕಣ್ಣಿನಿಂದ ನೋಡುತ್ತಿದ್ದಾರೆ. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದಿದ್ದಾರ, ಮತ್ತೊಂದೆಡೆ ಡಿಕೆ ಶಿವಕುಮಾರ್ ದೊಡ್ಡವರು ಹೇಳಿದ ಮೇಲೆ ಚಿಕ್ಕವರಾದ ನಾವು ನಮ್ರತೆಯಿಂದ ಇರಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಈ ಕುರಿತು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನವದೆಹಲಿಯಲ್ಲಿ ಸ್ಪಷ್ಟೆ ನೀಡಿದ್ದಾರೆ.
ರಾಜ್ಯದಲ್ಲಿನ ಕ್ಷಿಪ್ರ ಬೆಳವಣಿಗೆ, ಕಾಂಗ್ರೆಸ್ ಸತತ ಸಭೆಗಳ ನಡುವೆ ಡಿಕೆ ಶಿವಕುಮಾರ್ ಜೊತೆ ಅಮಿತ್ ಶಾ ಸಂಪರ್ಕದಲ್ಲಿದ್ದಾರೆ ಅನ್ನೋ ಮಾತನ್ನು ಬಿವೈ ವಿಜಯೇಂದ್ರ ಅಲ್ಲಗೆಳೆದಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ. ಈ ರೀತಿಯ ಯಾವುದೆೆ ಬೆಳವಣಿಗೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಪಷ್ಪಪಡಿಸಿದ್ದಾರೆ.
ವಾರದಲ್ಲಿ ಮೂರು ದಿನ ಸಿಎಂ ಸಿದ್ದರಾಮಯ್ಯ ಹಾಗೂ ನಾಲ್ಕು ದಿನ ಡಿಸಿಎಂ ಡಿಕೆ ಸಿವಕುಮಾರ್ ದೆಹಲಿಯಲ್ಲಿ ಇರುತ್ತಾರೆ. ಜನರ ಹಿತ ಮರೆತು ಬಣ ಬಡಿದಾಟ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿತ ಕಂಡಿದೆ. ರಾಜ್ಯದ ಜನರು ಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಸಿಎಂ ಖುರ್ಚಿ ಯ ಬಗ್ಗೆ ತಲೆ ಕಡೆಸಿಕೊಂಡಷ್ಟು ತಮ್ಮ ಇಲಾಖೆಯ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ಸಿಎಂ ಆಗಲು ದೆಹಲಿಗೆ ಎಷ್ಟು ಬಾರಿ ಬಂದಿದ್ದಾರೋ ಅಷ್ಟು ಬಾರಿ ತುಂಗಭದ್ರಾ ಕಡೆ ಹೋಗಿ, ಆಂಧ್ರ, ತೆಲಂಗಾಣ ಸಭೆ ಕರೆದಿದ್ರೆ ಸಮಸ್ಯೆ ಪರಿಹಾರ ಆಗುತ್ತಿತ್ತು. ರಾಜ್ಯ ಸರ್ಕಾರದ ಬೇಜವಾಬ್ದಾರಿ ಯಿಂದ ರೈತರ ಬದುಕು ಹದಗೆಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎರಡೂವರೆ ವರ್ಷ ಪೂರೈಸಿದೆ. ಜನತೆ ಹೇಳುವಂತೆ ಎರಡೂವರೆ ಪೂರೈಸಿದ್ದೆ ಕಾಂಗ್ರೆಸ್ ಸಾಧನೆಯಾಗಿದೆ. ಯುವಜನ, ರೈತರು ಸೇರಿದಂತೆ ಯಾವ ವರ್ಗಕ್ಕೂ ನ್ಯಾಯ ಕೊಡಲು ಯಶಸ್ವಿಯಾಗಿಲ್ಲ. ಜನ ಬಳಕೆ ವಸ್ತುಗಳ ಮೇಲೆ ನಿರಂತರ ಬೆಲೆ ಏರಿಕೆ ಮಾಡಿದ್ದಾರೆ. ರೈತರ ಬಗ್ಗೆ ನಿರ್ಲಕ್ಷ್ಯ, ಕಬ್ಬು ಬೆಳಗಾರರು ಹೋರಾಟ ಮಾಡಿದ್ರೆ ಉಸ್ತುವಾರಿ ಸಚಿವರು ಸ್ಥಳಕ್ಕೆ ಹೋಗಿಲ್ಲ, ಬಿಜೆಪಿ ಹೋರಾಟದ ಪರಿಣಾಮ ಸರ್ಕಾರ ಸಭೆ ನಡೆಸಿತು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಉಗ್ರರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೋಜು ಮಾಡುತ್ತಿದ್ದಾರೆ. ಗುತ್ತಗೆದಾರರು, ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಜನರಿಗೆ ಹೆಂಡ ಕುಡಿಸಿ ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ ಕೆಲಸ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಗೆ ಈ ಬಾರಿ 40 ಸಾವಿರ ಕೋಟಿ ಗುರಿ ನೀಡಲಾಗಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಬೆಳವಣಿಗೆಯಲ್ಲಿ ನಮಗೆ ಆಸಕ್ತಿ ಇಲ್ಲ. ರಾಜ್ಯದ ಆಡಳಿತ ಯಂತ್ರ ಕುಸಿದಿದೆ, ಯುವಕರಿಗೆ ಉದ್ಯೋಗ ಇಲ್ಲ. ಅಂಗನವಾಡಿ ಕಾರ್ಯಕರ್ತೆಯ ಗೌರವಧನ ಹೆಚ್ಚಿಲ್ಲ. ಯಾರು ಸಿಎಂ ನಮ್ಮಗೆ ಮುಖ್ಯವಲ್ಲ, ನಾವು ಬಯಸುವುದು ರಾಜ್ಯದ ಅಭಿವೃದ್ಧಿ ಎಂದು ಬಿವೈ ವಿಜಯೇಂದ್ರ ಹೇಳಿದ್ದರೆ.
ಇದೇ ವೇಳೆ ಬಿಜೆಪಿ ಆಂತರಿಕ ವಿಚಾರಗಳ ಕುರಿತು ವಿಜಯೇಂದ್ರ ಮಾತನಾಡಿದ್ದಾರೆ. ಬಸವನಗೌಡ ಪಾಟೀಲ್ ಹೇಳಿಕೆ ಗಮನಿಸಿದ್ದೇವೆ. ಯಡಿಯೂರಪ್ಪ ಬಗ್ಗೆ ಏಕವಚನದಲ್ಲಿ ಮಾತನಾಡವುದು ಬಿಡಬೇಕು. ಏಕವಚನದಲ್ಲಿ ಮಾತನಾಡಲು ಇವರು ಯಾರು, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಏನು ಯೋಗತ್ಯೆ ಇದೆ. ಭ್ರಷ್ಟಾಚಾರ, ಬಿಎಸ್‌ವೈ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ ಎಂದು ವಿಜಯೇಂದ್ರ ವಾರ್ನಿಂಗ್ ನೀಡಿದ್ದಾರೆ. ನನ್ನ ಬಗ್ಗೆ ಮಾತನಾಡಲಿ, ಸಮಸ್ಯೆ ಇಲ್ಲ. ಅವರು ಪಕ್ಷ ಕಟ್ಟುವುದಾದರೆ ಕಟ್ಟಲಿ, ಸಿಂಬಲ್ ರೆಡಿ ಮಾಡಿಕೊಂಡಿದ್ದಾರಲ್ಲ. 500 ಜನ ಸೇರಿ ಗಣಪತಿ ಮೆರವಣಿಗೆ ಮಾಡಿದರೆ ಅಲ್ಲಿಗೆ ಬರ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ