ಬೆಂಗಳೂರು ನಗರ, ಗ್ರಾಮಾಂತರ ಸೇರಿ ವಿವಿಧೆಡೆ ಮುಂದಿನ ಮೂರು ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು (ಮೇ.9): ಬೆಂಗಳೂರು ನಗರ, ಗ್ರಾಮಾಂತರ ಸೇರಿ ವಿವಿಧೆಡೆ ಮುಂದಿನ ಮೂರು ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಸಂಜೆ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆಗೆ ನಗರದ ವಿವಿಧೆಡೆ ಚರಂಡಿ ನೀರು ರಸ್ತೆಗೆ ನುಗ್ಗಿ ಸಂಚಾರ ಅಸ್ತವ್ಯಸ್ತವಾಯಿತು. ಪ್ರಾರಂಭದ ಮಳೆಯ ಅರ್ಭಟಕ್ಕೆ ನಡುಗಿ ಹೋದ ಸಿಲಿಕಾನ್ ಸಿಟಿ ಮಂದಿ. ಒಂದೆರಡು ತಾಸು ಸುರಿದ ಮಳೆಗೆ ಕೆಆರ್ ಮಾರ್ಕೆಟ್, ಅವೆನ್ಯೂ ರಸ್ತೆ ತುಂಬೆಲ್ಲಾ ನೀರೋ ನೀರು. ಮಳೆ ನೀರು ಮೋರಿಗೆ ಹೋಗದೆ ರಸ್ತೆ ಮೇಲೆ ಮೂರು ಅಡಿ ನೀರು ನಿಂತು ಅಧ್ವಾನವಾಯಿತು. ವಾಹನ ಸವಾರರು ನಿಂತ ಮಳೆ ನೀರಿನಿಂದ ತೊಂದರೆ ಅನುಭವಿಸಿದರು. ಚರಂಡಿ ನೀರು ಸಹ ರಸ್ತೆ ನುಗ್ಗಿದ್ದರಿಂದ ಕೊಳಚೆ ನೀರಲ್ಲೇ ಜನರು, ಬೀದಿ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಯಿತು.
undefined
ಇಂದು ನಾಳೆ ಮಳೆ ಅಲರ್ಟ್:
ಬೆಂಗಳೂರು ನಗರ, ಗ್ರಾಮಾಂತರ, ಧಾರವಾಡ, ಗದಗ, ವಿಜಯನಗರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಗುಡುಗು ಮಿಂಚು ಸಹಿತ
ಭಾರೀ ಮಳೆಯಾಗಲಿದೆ. 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಬಿಸಿಗಾಳಿ ಜೊತೆಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ!