ತುಮಕೂರು: ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ!

By Ravi Janekal  |  First Published May 9, 2024, 7:06 PM IST

ಮಳೆ ಕೈಕೊಟ್ಟ ವರ್ಷ ಗ್ರಾಮಸ್ಥರೆಲ್ಲ ಸೇರಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದನ್ನು ನೋಡಿದ್ದೀರಿ, ಕೆಲವು ಹಳ್ಳಿಗಳ್ಳಿ ಮಳೆಗಾಗಿ ಸತತ ಏಳು ದಿನಗಳ ಕಾಲ ಭಜನೆ ಮಾಡುವುದನ್ನು ಕೇಳಿದ್ದೀರಿ ಆದರೆ ತುಮಕೂರಿನ ಜಯಪುರ ಬಡಾವಣೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ ಮಾಡಿ ವಿಶೇಷ ಆಚರಣೆ ಮಾಡಿರುವುದು ಗಮನ ಸೆಳೆದಿದೆ.


ತುಮಕೂರು (ಮೇ.9): ಮಳೆ ಕೈಕೊಟ್ಟ ವರ್ಷ ಗ್ರಾಮಸ್ಥರೆಲ್ಲ ಸೇರಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದನ್ನು ನೋಡಿದ್ದೀರಿ, ಕೆಲವು ಹಳ್ಳಿಗಳ್ಳಿ ಮಳೆಗಾಗಿ ಸತತ ಏಳು ದಿನಗಳ ಕಾಲ ಭಜನೆ ಮಾಡುವುದನ್ನು ಕೇಳಿದ್ದೀರಿ ಆದರೆ ತುಮಕೂರಿನ ಜಯಪುರ ಬಡಾವಣೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ ಮಾಡಿ ವಿಶೇಷ ಆಚರಣೆ ಮಾಡಿರುವುದು ಗಮನ ಸೆಳೆದಿದೆ.

ಮಕ್ಕಳಿಗೆ ಮದುವೆ ಮಾಡಿದರೆ ಮಳೆ ಬರತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಹಳ್ಳಿ ಜನರಲ್ಲಿದೆ. ಹಳ್ಳಿ ಜನರೇ ಇದೀಗ ನಗರ ಸೇರಿರುವುದರಿಂದ ಆಚರಣೆ ಮುಂದುವರಿಸಿದ್ದಾರೆ. ಇಬ್ಬರು ಮಕ್ಕಳಿಗೆ ವಧು-ವರರಿಗೆ ತರುವಂತೆ ಹೊಸ ಬಟ್ಟೆ ತೊಡಿಸಿ ವಧು-ವರನ ರೀತಿಯಲ್ಲೇ ಸಿಂಗರಿಸಿ ಮದುವೆಯಂತೆ ಆಚರಿಸಿದ್ದಾರೆ. 

Tap to resize

Latest Videos

undefined

ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: 18 ಜಿಲ್ಲೆಗಳಿಗಿಂದು ಯಲ್ಲೋ ಅಲರ್ಟ್

ಕಳೆದೆರಡು ದಿನಗಳ ಹಿಂದೆಯಷ್ಟೇ ತಿಪಟೂರು ತಾಲೂಕಿನ ಅಲ್ಬೂರಿನ ಗ್ರಾಮಸ್ಥರು ಕತ್ತೆಗಳಿಗೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದರು. ಇದೀಗ ತುಮಕೂರಿನ ಜಯನಗರ ಬಡಾವಣೆಯ ಜನರು ಮಕ್ಕಳಿಗೆ ಮದುವೆ ಮಾಡಿ ಮಳೆಗೆ ಪ್ರಾರ್ಥಿಸಿದ್ದಾರೆ. ಮಕ್ಕಳನ್ನು ವಧು-ವರರನ್ನಾಗಿ ಕುರ್ಚಿಯಲ್ಲಿ ಆರತಿ ಎತ್ತಿ ಮಹಿಳೆಯರು ಹಾರೈಸಿದ್ದಾರೆ, ಇನ್ನು ಕೆಲವರು ಮುಯ್ಯಿ ನೀಡಿ ಅಕ್ಷತೆ ನೀಡಿರುವುದ ವಿಡಿಯೋದಲ್ಲಿ ಕಾಣಬಹುದಾಗಿದೆ.

click me!