ಪಾಸ್‌ಪೋರ್ಟ್ ಅಪ್ಲೈ ಮಾಡಿರೋ ಸುಂದರ ಯುವತಿಗೆ 'ಹಗ್ ಮಾಡೋ ಆಫರ್' ಕೊಟ್ಟ ಪೊಲೀಸಪ್ಪ!

By Sathish Kumar KH  |  First Published Dec 2, 2024, 6:55 PM IST

ಬೆಂಗಳೂರಿನಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆಂದು ಹೋದ ಪೊಲೀಸ್ ಕಾನ್‌ಸ್ಟೇಬಲ್ ಓರ್ವ ಯುವತಿಗೆ ತನ್ನನ್ನು ಅಪ್ಪಿಕೊಳ್ಳುವಂತೆ ಕಿರುಕುಳ ನೀಡಿದ್ದಾನೆ. ಯುವತಿಯ ದೂರಿನ ಮೇರೆಗೆ ಪೊಲೀಸಪ್ಪನನ್ನು ಅಮಾನತುಗೊಳಿಸಲಾಗಿದೆ.


ಬೆಂಗಳೂರು (ಡಿ.02): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾಸ್ ಪೋರ್ಟ್ ಅಪ್ಲೈ ಮಾಡಿದ್ದ ಇಂಜಿನಿಯರ್ ಯುವತಿಯ ಮನೆಗೆ ಪಾಸ್ ಪೋರ್ಟ್ ವೆರಿಫಿಕೇಷನ್‌ಗೆ ಹೋದ ಪೋಲಿ ಪೋಲೀಸಪ್ಪ ಯುವತಿಗೆ ಅಪ್ಪಿಕೋ ಆಫರ್ ಕೊಟ್ಟಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಬೆನ್ನಲ್ಲಿಯೇ ಪೋಲಿ ಪೊಲೀಸಪ್ಪನನ್ನು ಅಮಾನತು ಮಾಡಲಾಗಿದೆ.

ಹೌದು, ಬ್ಯಾಟರಾಯನಪುರ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಕಿರಣ್ ಪಾಸ್ ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಮಹಿಳಾ ಟೆಕ್ಕಿಯನ್ನ ತಬ್ಬಿಕೊಂಡಿದ್ದಾರೆ ಎಂಬ ಆರೋಪ ಮೇಲೆ ಕೇಳಿಬಂದಿದೆ. ಯುವತಿ ಕೊಟ್ಟ ದೂರಿನ ಆಧಾರದಲ್ಲಿ ಕಾನ್‌ಸ್ಟೇಬಲ್ ಕಿರಣ್‌ನನ್ನು ಅಮಾನತು ಮಾಡಲಾಗಿದೆ. ಪಾಸ್ ಪೋರ್ಟ್ ವರಿಫಿಕೇಶನ್‌ಗೆ ಹೋಗಿದ್ದ ವೇಳೆ ಸುಂದರ ಯುವತಿಯನ್ನು ನೋಡಿ ನೀನು ಒಂದೇ ಒಂದು ಹಗ್ ಮಾಡು ಯಾರಿಗು ಹೇಳುವುದಿಲ್ಲ ಅಂತಾ ಟೆಕ್ಕಿಗೆ ಹಿಂಸೆ ಕೊಟ್ಟಿದ್ದಾರಂತೆ. ಟೆಕ್ಕಿ ಯುವತಿ ಜೊತೆ ಅಸಭ್ಯ ವರ್ತನೆ ತೋರಿ ಇದೀಗ ಅಮಾನತ್ತಾಗಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ.

Tap to resize

Latest Videos

ಬಾಪೂಜಿನಗರದ ಯುವತಿಯೊಬ್ಬಳು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪಾಸ್ ಪೋರ್ಟ್ ವರಿಫಿಕೇಷನ್ ಅಂತಾ ಯುವತಿಯ ಮನೆಗೆ ಹೋಗಿದ್ದ ಕಾನ್‌ಸ್ಟೇಬಲ್ ಕಿರಣ್ 2-3 ಬಾರಿ ಯುವತಿಯ ಮನೆಗೆ ಹೋಗಿದ್ದಾನೆ. ಆಗಲೂ ವರಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಳಿಸದೇ ಹಲವು ಸುತ್ತಿನ ವಿಚಾರಣೆಯನ್ನು ಮಾಡಿದ್ದಾರೆ. ಮನೆಯಲ್ಲಿನ ಎಲ್ಲ ಸದಸ್ಯರ ಬಗ್ಗೆ ಮಾಹಿತಿ ಪಡೆದುಕೊಂಡು ಅವರ ಮನೆಗೆ ಹೋದ ಪೊಲೀಸ್ ಕಾನ್‌ಸ್ಟೇಬಲ್ ಕಿರಣ್ ಯುವತಿ ಮನೆಯಲ್ಲಿರುವಾಗ ಮನೆಯೊಳಗೆ ಹೋಗಿ ಅರ್ಧ ಬಾಗಿಲು ಮುಚ್ಚಿದ್ದಾರೆ.

ಇದನ್ನೂ ಓದಿ: ಹಾಸನ ಪೊಲೀಸ್ ಜೀಪ್ ಆಕ್ಸಿಡೆಂಟ್; ಡ್ರೈವರ್ ಬದುಕಿದರೂ, ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಮಾತ್ರ ಸತ್ತಿದ್ದೇಕೆ?

ಮನೆಯೊಳಗೆ ಪೊಲೀಸರು ಬಂದಿದ್ದಕ್ಕೆ ಗಾಬರಿಗೊಂಡ ಯುವತಿಗೆ ನೀನು ನನಗೆ ಸಹಕರಿಸಬೇಕು, ನಿಮ್ಮಣ್ಣ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್ ಪೋರ್ಟ್ ಕ್ಯಾನ್ಸಲ್ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಮುಂದುವರೆದು ನೀನೇ ಡೋರ್ ಕ್ಲೋಸ್ ಮಾಡಿ ಬಾ ಎಂದು ಯುವತಿಗೆ ಪೊಲೀಸಪ್ಪ ಕಿರಣ್ ಆಗ್ರಹ ಮಾಡಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಡೋರ್ ಕ್ಲೋಸ್ ಮಾಡಿ ಬಂದು ಒಂದ್ ಸಲ ಹಗ್ ಮಾಡೋಣ ಎಂದು ಕೇಳಿಕೊಂಡಿದ್ದಾರೆ.

ಇದಕ್ಕೆ ಒಪ್ಪದಿದ್ದಾಗ ಪ್ಲೀಸ್ ಯಾರಿಗೂ ಹೇಳಬೇಡ ಒಂದೇ ಒಂದ್ ಸಲ ಹಗ್ ಮಾಡುತ್ತೇನೆ ಎಂದು ಯುವತಿಯ ಬಳಿ ಹೋಗಿ ಕಿರುಕುಳ ನೀಡಿದ್ದಾರೆ. ಆ ಬಳಿಕ ಯುವತಿಯ ಅಣ್ಣ ರೂಮಿನಲ್ಲಿರೋದನ್ನ ನೋಡಿದ್ದ ಪೇದೆ, ನೀನು ಒಳಗೆ ಇದ್ದೀಯ ಅಂತಾನೆ ನಾನೆ ಹಿಂಗೆ ಮಾತಾಡಿದ್ದು. ನಿನ್ ತಂಗಿ ನನ್ ತಂಗಿ ಇದ್ದ ಹಾಗೆ ಅಂದಿದ್ದ ಪೊಲೀಸಪ್ಪ. ಈ ಬಗ್ಗೆ ಟೆಕ್ಕಿ ಯುವತಿ ಪಶ್ಚಿಮ ವಿಭಾಗ ಡಿಸಿಪಿಗೆ ದೂರು ನೀಡಿದ್ದರು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದಾಗ ಕಿರಣ್ ದುರ್ನಡತೆ ಸಾಬೀತಾಗಿದ್ದರಿಂದ ಡಿಸಿಪಿ ಗಿರೀಶ್ ಅವರು ಪೇದೆ ಕಿರಣ್‌ನನ್ನು ಸಸ್ಪೆಂಡ್ ಮಾಡಿದ್ದಾರೆ.

ಇದನ್ನೂ ಓದಿ: ಒಕ್ಕಲಿಗ ಸ್ವಾಮೀಜಿಗೆ ಮಾರಕ ಕ್ಯಾನ್ಸರ್ ಕಾಯಿಲೆ; ಮಠ ಬಿಟ್ಟು ಎಲ್ಲಿಗೂ ಹೋಗಲಾಗಲ್ಲ!

click me!