ಹಾಸನ ಪೊಲೀಸ್ ಜೀಪ್ ಆಕ್ಸಿಡೆಂಟ್; ಡ್ರೈವರ್ ಬದುಕಿದರೂ, ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಮಾತ್ರ ಸತ್ತಿದ್ದೇಕೆ?

By Sathish Kumar KH  |  First Published Dec 2, 2024, 4:00 PM IST

ಹಾಸನದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಜೀಪ್ ಅಪಘಾತದಲ್ಲಿ ಮೃತಪಟ್ಟಿದ್ದು, ಜೀಪಿನಲ್ಲಿ ಸುರಕ್ಷತಾ ವ್ಯವಸ್ಥೆ ಕೊರತೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಚಾಲಕನಿಗೆ ಮಾತ್ರ ಏರ್‌ಬ್ಯಾಗ್ ಇದ್ದ ಕಾರಣ ಚಾಲಕ ಬದುಕುಳಿದರೆ, ಐಪಿಎಸ್ ಅಧಿಕಾರಿಗೆ ಏರ್‌ಬ್ಯಾಗ್ ಇಲ್ಲದ ಕಾರಣ ಮೃತಪಟ್ಟಿದ್ದಾರೆ.


ಹಾಸನ (ಡಿ.02): ಕರ್ನಾಟಕದ ಐಪಿಎಸ್ ಅಧಿಕಾರಿ ಡಿವೈಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಲು ಪೊಲೀಸ್ ಜೀಪಿನಲ್ಲಿ ಹೊರಟ ದಿನವೇ ಅರೆಮಲೆನಾಡು ಹಾಸನದಲ್ಲಿ ನಡೆದ ಜೀಪು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಆದರೆ, ಈ ಜೀಪಿನಲ್ಲಿದ್ದ ಡ್ರೈವರ್ ಬದುಕಿದ್ದು, ಆ ಜೀಪಿನಲ್ಲಿದ್ದ ಐಪಿಎಸ್ ಅಧಿಕಾರಿ ಮಾತ್ರವೇ ಸಾವನ್ನಪ್ಪಿದ್ದು ಹೇಗೆ? ಇದರ ಹಿಂದೆ ಯಾರ ಕೈವಾಡಿವಿದೆ ಎಂಬುದು ಬಹಿರಂಗವಾಗಿದೆ..

ಹೌದು, ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಸಮಾಜ ಕಾಯುವ ಆರಕ್ಷಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಐದು ವರ್ಷಕ್ಕೊಮ್ಮೆ ಬಂದು ಓಟು ಹಾಕಿಸಿಕೊಂಡು ನಾಪತ್ತೆ ಆಗುವ ಎಲ್ಲ ರಾಜಕಾರಣಿಗಳಿಗೆ ಸಿಗುವ ಐಷಾರಾಮಿ, ಸುರಕ್ಷಿತ ಕಾರುಗಳು ಮಾತ್ರ ಅಧಿಕಾರಿಗಳಿಗೆ ಸಿಗುವುದಿಲ್ಲ. ಅತೀ ಕಡಿಮೆ ಬೆಲೆಗೆ ಯಾವುದು ಬರುತ್ತದೆಯೋ, ಕನಿಷ್ಠ ಮೂಲ ಸೌಕರ್ಯ ಯಾವುದರಲ್ಲಿ ಇರುತ್ತದೆಯೋ ಅಂತಹ ವಾಹನಗಳನ್ನು ಕೊಟ್ಟು ಸುಮ್ಮನಾಗುತ್ತಾರೆ. ಅದೇ ರೀತಿ ಹಾಸನದಲ್ಲಿ ಐಪಿಎಸ್ ಅಧಿಕಾರಿಯ ಸಾವಿಗೆ ಈ ಜೀಪಿನಲ್ಲಿದ್ದ ಕನಿಷ್ಠ ಸೌಕರ್ಯವೇ ಕಾರಣ ಎಂಬುದು ಬಹಿರಂಗವಾಗಿದೆ.

Latest Videos

undefined

ರಾಜ್ಯದಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್‌ಐ ಸೇರಿ ಹಲವು ಅಧಿಕಾರಿಗಳು ಕೆಲಸ ಮಾಡಲು ಓಡಾಡುವ ವಾಹನಗಳಿಗೆ ಕನಿಷ್ಠ ಸುರಕ್ಷತೆಯೂ ಇಲ್ಲ. ರಾಜ್ಯದ ಬಹುತೇಕ ಐಪಿಎಸ್ ಉತ್ತೀರ್ಣರಾಗಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸಿಪಿಐ ಹಾಗೂ ಕೆಲ‌ ಡಿವೈಎಸ್ಪಿಗಳು ಬೊಲೇರೊ ಜೀಪುಗಳಲ್ಲಿ ‌ಓಡಾಡುತ್ತಾರೆ. ಈ ಬಹುತೇಕ ಬೊಲೆರೋ ವಾಹನಗಳು ಬೇಸಿಕ್ ಮಾಡೆಲ್ ಆಗಿದ್ದು, ಇಂತಹ ಕನಿಷ್ಠ ಮೂಲ ಸೌಕರ್ಯ ಹೊಂದಿರುವ ಕಡಿಮೆ ಬೆಲೆಯ ವಾಹಗಳನ್ನು ಮಾತ್ರ ಸರ್ಕಾರ ಖರೀದಿ ಮಾಡಿ ಸರ್ಕಾರಿ ಅಧಿಕಾರಿಗಳ ಸೇವೆಗೆ ನೀಡುತ್ತದೆ. ಈ ಬೇಸಿಕ್ ಮಾಡೆಲ್ ವಾಹನಗಳಲ್ಲಿ ಸುರಕ್ಷತೆಗೆ ಆದ್ಯತೆ ಇರುವುದಿಲ್ಲ.

ಇದನ್ನೂ ಓದಿ: ಹಾಸನದ ಯುವ IPS ಅಧಿಕಾರಿ ಅಪಘಾತದಲ್ಲಿ ಸಾವು, ಡ್ಯೂಟಿ ರಿಪೋರ್ಟ್‌ಗೆ ಬಂದ ದಿನವೇ ದುರಂತ!

ಅದೇ ರೀತಿ ನಿನ್ನೆ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕೂಡ ಇಂತಹದೇ ಬೇಸಿಕ್ ಮಾಡೆಲ್ ಕೆಎ-13 ಜಿ-1386 ಜೀಪಿನಲ್ಲಿ ಹಾಸನದಲ್ಲಿ ಮೊದಲ ದಿನದ ಡ್ಯೂಟಿ ಜಾಯಿನಿಂಗ್‌ಗೆ ಹೋಗುತ್ತಿದ್ದರು. ಆದರೆ, ಈ ಜೀಪು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದಾಗ ಕೇವಲ ಚಾಲಕನ ಬದಿಗೆ ಮಾತ್ರ ಇದ್ದ ಏರ್ ಬ್ಯಾಗ್ ತೆರೆದುಕೊಂಡಿದೆ. ಆದರೆ, ಅವರ ಪಕ್ಕದ ಸೀಟಿನಲ್ಲಿ ಹಾಗೂ ಹಿಂಬದಿಯ ಯಾವುದೇ ಸೀಟುಗಳಿಗೆ ಏರ್ ಬ್ಯಾಗ್ ಸುರಕ್ಷತೆ ಇಲ್ಲ. ರಾಜ್ಯದಲ್ಲಿನ ಬಹುತೇಕ ಪೊಲೀಸ್ ಅಧಿಕಾರಿಗಳು ಬಳಸುವ ವಾಹನಗಳು ಬೇಸಿಕ್ ಮಾಡೆಲ್ ಆಗಿದ್ದು, ತುರ್ತು ಸಂದರ್ಭದಲ್ಲಿಯೂ ಈ ವಾಹನಗಳಲ್ಲಿ ಸುರಕ್ಷತೆ ಸಿಗುವುದಿಲ್ಲ. ಅಂದರೆ, ರಾಜ್ಯದ ಪೊಲೀಸ್ ಅಧಿಕಾರಿಗಳು ಕನಿಷ್ಠ ಸುರಕ್ಷತೆ ಇಲ್ಲದೆ ವಾಹನಗಳಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಿನ್ನೆ ಜೀಪ್ ಅಪಘಾತದಲ್ಲಿ ಮೃತಪಟ್ಟಿರೊ ಯುವ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಅವರು ಏರ್ ಬ್ಯಾಗ್ ಸುರಕ್ಷತೆ ಇದ್ದರೆ ಜೀವ ಉಳಿಯುವ ಸಾಧ್ಯತೆ ಹೆಚ್ಚಾಗಿತ್ತು ಎಂದು ಹೆಸರೇಳಲಿಚ್ಛಿಸದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

click me!