
ಬೆಂಗಳೂರು (ಆ.30): ಒಂದೆಡೆ ದರ್ಶನ್ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರೆ, ಇದೇ ದೊಡ್ಡ ಸಾಹಸ ಎನ್ನುವಂತೆ ಆತನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ದರ್ಶನ್ ಅಭಿನಯದ ಕರಿಯಾ ಚಿತ್ರ ರೀರಿಲೀಸ್ ಆಗಿದೆ. ಈ ವೇಳೆ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ಎದುರು ಅಭಿಮಾನಿಗಳ ದಾಂಧಲೆ ಮಾಡಿದ್ದರು. ಕಾಣೋತನಕ ಕಂಡ ಪೊಲೀಸರು, ಅಭಿಮಾನಿಗಳ ವರ್ತನೆ ಮಿತಿಮೀರುತ್ತಿದ್ದಂತೆ ಜ್ವರ ಬರೋಹಾಗೆ ಲಾಠಿ ಚಾರ್ಜ್ ಮಾಡಿದ್ದಾರೆ. ಗಲಾಟೆ ಮಾಡದಂತೆ ದರ್ಶನ್ ಅಭಿಮಾನಿಗಳಿಗೆ ಖಾಕಿ ಖಡಕ್ ವಾರ್ನಿಂಗ್ ನೀಡಿದರೂ, ಅದಕ್ಕೆ ಬೆಲೆ ಕೊಟ್ಟಿರಲಿಲ್ಲ. ಇದ್ದಬದ್ದವರಿಗೆಲ್ಲಾ ಘೋಷಣೆ ಕೂಗಿ,ಕಿರುಚಾಡುತ್ತಿದ್ದ ಫ್ಯಾನ್ಸ್ ವಿರುದ್ಧ ಪೊಲೀಸರ ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರ ಎಚ್ಚರಿಕೆಗೂ ಬಗ್ಗದೇ ದರ್ಶನ್ ಅಭಿಮಾನಿಗಳ ಹುಚ್ಚಾಟ ಮೆರೆದಿದ್ದರು. ಈ ವೇಳೆ ಪೊಲೀಸರು ಮೈಕ್‌ನಲ್ಲಿ ‘ನಿಮ್ಮಂಥ ಕೆಟ್ಟ ಅಭಿಮಾನಿಗಳಿಂದಲೇ ನಟ ದರ್ಶನ್ಗೆ ಕೆಟ್ಟ ಹೆಸರು ಬಂದಿದೆ. ನಿಜವಾದ ಅಭಿಮಾನಿಗಳು ಈ ರೀತಿ ವರ್ತಿಸುವುದಿಲ್ಲ. ಹುಚ್ಚಾಟ ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ಪೊಲೀಸರ ಎಚ್ಚರಿಕೆ ನೀಡಿದ್ದರು.
ಆದರೆ, ಯಾವುದೇ ಎಚ್ಚರಿಕೆ, ಒಳ್ಳೆಯ ಮಾತುಗಳಿಗೂ ಬಗ್ಗದ ಕರಿಯನ ಅಭಿಮಾನಿಗಳಿಗೆ ಬಳಿಕ ಪೊಲೀಸರು ಲಾಠಿರುಚಿ ತೋರಿಸಿದ್ದಾರೆ. ಥಿಯೇಟರ್ನಲ್ಲಿಯೇ ಕಿರಿಕ್ ಮಾಡ್ತಿದ್ದ ಅಭಿಮಾನಿಯನ್ನೂ ಕೂಡ ಖಾಕಿ ವಶಕ್ಕೆ ಪಡೆದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಂಧಾಭಿಮಾನಿ ಹುಚ್ಚಾಟ ಮೆರೆದಿದ್ದ. ಲಾಠಿ ಚಾರ್ಜ್ ನಂತರ ಮಾಧ್ಯಮದ ಎದುರೇ ದರ್ಶನ್ ಅಭಿಮಾನಿ ಕ್ಷಮೆ ಕೋರಿದ್ದಾರೆ.‘ದರ್ಶನ್ ಸಿನಿಮಾ ನೋಡೋ ಜೋಶ್ನಲ್ಲಿ ನಾನು ಮಾತನಾಡಿದೆ’ ಎಂದು ಮಾಧ್ಯಮಗಳಿಗೆ ಕೈಮುಗಿದಿ ದರ್ಶನ್ ಅಭಿಮಾನಿ ಕ್ಷಮೆಯಾಚಿಸಿದ್ದಾನೆ.
ಇನ್ನೊಂದಡೆ ಬಳ್ಳಾರಿಯಲ್ಲಿ ನಟ ದರ್ಶನ್ ಅಂಧಾಭಿಮಾನಿಗಳ ದುರಹಂಕಾರ ಮಿತಿಮೀರಿದೆ. ಕನಕದುರ್ಗಮ್ಮ ವಿಗ್ರಹದ ಮೇಲೆ ಕಾಲಿಟ್ಟು ಹಾರ ಹಾಕಿ ದುರ್ವರ್ತನೆ ತೋರಿಸಿದ್ದಾರೆ. ದೇವಿ ತಲೆ ಮೇಲೆಯೇ ದರ್ಶನ್ ದುರಹಂಕಾರಿ ಅಭಿಮಾನಿ ಕಾಲಿಟ್ಟಿದ್ದಾನೆ. ದರ್ಶನ್ಗಾಗಿ ಕನಕದುರ್ಗಮ್ಮ ದೇವತೆ ವಿಗ್ರಹದ ಮೇಲೆ ಕಾಲಿಟ್ಟಿದ್ದಾರೆ. ದೇಗುಲದಲ್ಲಿ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಒಡೆದಿದ್ದ ಫ್ಯಾನ್ಸ್. ಬಳಿಕ ದುರ್ಗಮ್ಮ ವಿಗ್ರಹದ ಮೇಲೆ ಕಾಲಿಟ್ಟು ಅಭಿಮಾನಿಯೊಬ್ಬ ಹಾರ ಹಾಕಿದ್ದ. ದರ್ಶನ್ ಅಭಿಮಾನಿಗಳ ವಿರುದ್ಧ ಬಳ್ಳಾರಿಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
'ಬಾಸ್ ತಪ್ಪು ಮಾಡಿಲ್ಲ.. ಜತೆಗೆ ಇರುವವರು ತಪ್ಪು ಮಾಡಿದ್ದಾರೆ. ಬೇರೆಯವರು ಮಾಡಿದ ತಪ್ಪು ನಟ ದರ್ಶನ್ ಮೇಲೆ ಬಂದಿದೆ. ದರ್ಶನ್ ಗೆ ಶೀಘ್ರದಲ್ಲೇ ಬೇಲ್ ಸಿಗಲಿದೆ ಅನ್ನುವ ವಿಶ್ವಾಸವಿದೆ. ನಮ್ಮ ಬಾಸ್ ತಪ್ಪು ಮಾಡಿಲ್ಲ'ಎಂದು ಅಂಧಾಭಿಮಾನ ತೋರಿದಿದ್ದಾರೆ.
ಜೈಲ್ ದರ್ಬಾರ್ಗೆ ದರ್ಶನ್ ಕೊಟ್ಟಿದ್ದು 2 ಕೋಟಿ..?
ನಟ ದರ್ಶನ್ ಬಳ್ಳಾರಿಗೆ ಹೋದರೂ ನಿಲ್ಲದ ಫ್ಯಾನ್ಸ್ ಕ್ರೇಜ್ ಮಾತ್ರ ನಿಲ್ಲುತ್ತಿಲ್ಲ. ರಾತ್ರೋರಾತ್ರಿಯೇ ಬಳ್ಳಾರಿ ಕೈದಿ ನಂ-511 ಟ್ರೆಂಡ್ ಆಗಿದೆ. ಬಳ್ಳಾರಿಕೈದಿ 511 ಎಂದು ಅಭಿಮಾನಿಗಳು ಬರೆಸಿಕೊಳ್ಳುತ್ತಿದ್ದಾರೆ. ಆಟೋ ಮೇಲೆ ಕೈದಿ ನಂಬರ್ ಬರೆಸಿ ಅಭಿಮಾನಿ ಹುಚ್ಚಾಟ ಮೆರೆದಿದ್ದಾನೆ. ಪರಪ್ಪನ ಅಗ್ರಹಾರದ ಕೈದಿ ನಂ. 6106 ಟ್ರೆಂಡ್ ಆಗಿತ್ತು. ಬೈಕ್,ಆಟೋ,ಬಟ್ಟೆಗಳ ಮೇಲೆ ಕೈದಿ ನಂಬರ್ ಹಾಕಿಸಿದ್ದರು. ಈಗ ಬೆಳಗಾಗೋದರಲ್ಲೇ ಬಳ್ಳಾರಿ ಕೈದಿ 511 ಟ್ರೆಂಡಿಂಗ್ ಆಗಿದೆ. ಆಟೋ ಹಿಂದೆ ಕೈದಿ ನಂ 511 ಹಾಕಿಸಿ ಅಂಧಾಭಿಮಾನ ತೋರಿದ್ದಾರೆ.
suvarnanews exclusive: ರೌಡಿ ವಿಲ್ಸನ್ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್ ಸಿಗರೇಟ್ ಸೇದುವ ಫೋಟೋ ವೈರಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ