ಹೊಸ ಬೆಂಗಳೂರು-ಮೈಸೂರು ರಸ್ತೆಯು 100 ಕಿಮೀ ವೇಗದ ಮಿತಿ ಹೊಂದಿರುವ ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇದು ಗಂಟೆಗೆ 120 ಕಿಮೀ ಗರಿಷ್ಠ ವೇಗ ಅನುಮತಿಸುವ ಎಕ್ಸ್‌ಪ್ರೆಸ್‌ವೇ ಅಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸ್ಪಷ್ಟಪಡಿಸಿದೆ.
ಬೆಂಗಳೂರು (ಆಗಸ್ಟ್ 4, 2023):: ನೂತನ ಬೆಂಗಳೂರು - ಮೈಸೂರು ರಸ್ತೆಯನ್ನು ಎಕ್ಸ್‌ಪ್ರೆಸ್ ವೇ ಎಂದೇ ಕರೆಯಲಾಗುತ್ತಿತ್ತು. ಬೆಂಗಳೂರಿಂದ ಮೈಸೂರಿಗೆ ಬೇಗ ಹೋಗಬಹುದೆಂದು ಅತಿ ವೇಗದಲ್ಲಿ ಹೋಗಿ ಈ ರಸ್ತೆಯಲ್ಲಿ ಅಪಘಾತಗಳೂ ಹೆಚ್ಚಾಗಿ ಸಂಭವಿಸುತ್ತಿದ್ದವು. ಈ ಹಿನ್ನೆಲೆ ಅತಿಯಾದ ವೇಗಕ್ಕೆ ದಂಡ ಹಾಕಲಾಗುತ್ತಿದೆ. 100 ಕಿ.ಮೀ. ಗೂ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದವರಿಗೆ ದಂಡ ಹಾಕಲಾಗ್ತಿದೆ. ಈ ಹಿನ್ನೆಲೆ ಎಕ್ಸ್‌ಪ್ರೆಸ್‌ವೇ ನಲ್ಲಿ ಈ ರೀತಿ ದಂಡ ಹಾಕುತ್ತಿರುವುದಕ್ಕೆ ಹಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಈ ಗೊಂದಲಕ್ಕೆ ಎನ್‌ಎಚ್‌ಎಐ ತೆರೆ ಎಳೆದಿದೆ.
ಹೊಸ ಬೆಂಗಳೂರು-ಮೈಸೂರು ರಸ್ತೆಯು 100 ಕಿಮೀ ವೇಗದ ಮಿತಿ ಹೊಂದಿರುವ ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇದು ಗಂಟೆಗೆ 120 ಕಿಮೀ ಗರಿಷ್ಠ ವೇಗ ಅನುಮತಿಸುವ ಎಕ್ಸ್‌ಪ್ರೆಸ್‌ವೇ ಅಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸ್ಪಷ್ಟಪಡಿಸಿದೆ.
undefined
ಇದನ್ನು ಓದಿ: ನಾಳೆಯಿಂದ ಬೆಂಗಳೂರು- ಮೈಸೂರು ದಶಪಥದಲ್ಲಿ ಬೈಕ್, ಆಟೋ ನಿಷೇಧ: ನಿಯಮ ಉಲ್ಲಂಘಿಸಿದರೆ 500 ರೂ. ದಂಡ
ರಸ್ತೆ ಅಪಘಾತಗಳನ್ನು ತಡೆಯುವ ಕ್ರಮವಾಗಿ ರಸ್ತೆಯಲ್ಲಿ 100 ಕಿಮೀ ವೇಗವನ್ನು ದಾಟುವ ವಾಹನ ಚಾಲಕರಿಗೆ ದಂಡ ವಿಧಿಸಲು ಅಧಿಕಾರಿಗಳು ಆರಂಭಿಸಿದ ಬೆನ್ನಲ್ಲೇ ಈ ಸ್ಪಷ್ಟನೆ ಬಂದಿದೆ. ಕೆಲವು ವಾಹನ ಚಾಲಕರು ರಸ್ತೆ ಎಕ್ಸ್‌ಪ್ರೆಸ್‌ವೇ ಆಗಿದ್ದರೆ, ಗರಿಷ್ಠ ಅನುಮತಿಸುವ ವೇಗದ ಮಿತಿ 120kmph ಆಗಿರಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಿರುವುದು ಹೀಗೆ..
"ನಮ್ಮ ಅಧಿಸೂಚನೆಗಳು ಇದು ಪ್ರವೇಶ ನಿಯಂತ್ರಿತ-ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇ ಅಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. ಹೆದ್ದಾರಿಯನ್ನು 100kmph ಗರಿಷ್ಠ ವೇಗ ಮಿತಿಗಾಗಿ ವಿನ್ಯಾಸಗೊಳಿಸಲಾಗಿದೆ, 120kmph ಅಲ್ಲ. ಮೂಲಸೌಕರ್ಯವು ಎಕ್ಸ್‌ಪ್ರೆಸ್‌ವೇಯಂತೆ ಕಾಣುವುದರಿಂದ, ಜನರು ಇದನ್ನು ಆ ಹೆಸರಿನಿಂದ ಕರೆಯುತ್ತಿರಬಹುದು. ಆದರೆ, ಪ್ರವೇಶ-ನಿಯಂತ್ರಿತ ಹೆದ್ದಾರಿಗೆ ಅನ್ವಯವಾಗುವಂತೆ ಜಾರಿ ಸಂಸ್ಥೆಗಳು ವೇಗದ ಮಿತಿಗಳ ನಿಯಮಗಳನ್ನು ಜಾರಿಗೊಳಿಸುತ್ತಿವೆ. ಆಟೋ, ಬೈಕ್‌ಗಳು ಮತ್ತು ಇತರ ನಿಧಾನವಾಗಿ ಚಲಿಸುವ ವಾಹನಗಳನ್ನು ನಿರ್ಬಂಧಿಸಲು ಹೊರಡಿಸಲಾದ ಇತ್ತೀಚಿನ ಅಧಿಸೂಚನೆಯು ಮುಖ್ಯ ಕ್ಯಾರೇಜ್‌ವೇ ಅನ್ನು ಬಳಸುವ ವೇಗದ ಮಿತಿಯು 80 mph ನಿಂದ ಗಂಟೆಗೆ 100 ಕಿಮೀ ವೇಗದವರೆಗೆ ಇರುತ್ತದೆ ಎಂದು NHAI ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ
ಎಕ್ಸ್‌ಪ್ರೆಸ್‌ವೇಗಳು ಹೆದ್ದಾರಿಗಳಿಗಿಂತ ವಿಶಾಲವಾದ ಲೇನ್‌ಗಳನ್ನು ಹೊಂದಿವೆ ಮತ್ತು ಉತ್ತಮವಾದ ವಿಶೇಷಣಗಳಿಗೆ ನಿರ್ಮಿಸಲಾಗಿದೆ. ಈ ಹಿನ್ನೆಲೆ ಎಕ್ಸ್‌ಪ್ರೆಸ್‌ವೇಗಳ ವೇಗದ ಮಿತಿ ಗಂಟೆಗೆ 120 ಕಿಮೀ ಆಗಿದ್ದರೆ, ಹೆದ್ದಾರಿಗಳಲ್ಲಿ ವೇಗದ ಮಿತಿ ಗಂಟೆಗೆ 100 ಕಿಮೀ ಎಂದು ತಿಳಿಸಿದೆ.
ಮಾರ್ಚ್ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಮತ್ತು ಮೈಸೂರು ನಡುವಿನ ಹೊಸ ರಸ್ತೆ ಮೂಲಸೌಕರ್ಯವನ್ನು ಪ್ರಾರಂಭಿಸುವ ಒಂದು ದಿನದ ಮೊದಲು, ಪ್ರಧಾನಿಯವರ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ 'ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ' ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಮತ್ತು ಇದು ಸಂಪರ್ಕವನ್ನು ಹಾಗೂ ಸಾಮಾಜಿಕ-ಆರ್ಥಿಕ ಬೆಳವಣಿಗೆಹೆ ಚ್ಚಿಸುತ್ತದೆ ಎಂದು ಪೋಸ್ಟ್ ಮಾಡಿತ್ತು. ರಸ್ತೆ ಉದ್ಘಾಟನೆಗೂ ಮುನ್ನ ಹಿಂದಿನ ಬಿಜೆಪಿ ಸರ್ಕಾರವು ಪ್ರಕಟಿಸಿದ ಜಾಹೀರಾತುಗಳಲ್ಲಿ ಇದು ಎಕ್ಸ್‌ಪ್ರೆಸ್‌ವೇ ಎಂದೇ ಉಲ್ಲೇಖಿಸಿತ್ತು.
ಇದನ್ನೂ ಓದಿ: ಶಾಸಕರಿಗೆ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ಸಿಬ್ಬಂದಿ ಅವಾಜ್: ನಿಮ್ಮನ್ನ ಹೈವೆಯಲ್ಲಿ ಬಿಟ್ಟಿಯಾಗಿ ಬಿಡ್ತೀವಿ