ಫೆ.21ರಿಂದ ಮಂಗಳೂರು - ಬೆಂಗಳೂರು ರಾತ್ರಿ ರೈಲು ಸಂಚಾರ

By Web DeskFirst Published Feb 20, 2019, 9:25 AM IST
Highlights

ಮಂಗಳೂರು- ಬೆಂಗಳೂರು ನಡುವೆ ವಾರದಲ್ಲಿ ಮೂರು ದಿನ ರಾತ್ರಿ ರೈಲು ಸಂಚಾರ ಫೆ.21ರಿಂದ ಆರಂಭವಾಗಲಿದೆ. 

ಮಂಗಳೂರು: ಮಂಗಳೂರು ಸೆಂಟ್ರಲ್‌ ಮತ್ತು ಯಶವಂತಪುರ ನಡುವೆ ರಾತ್ರಿ ರೈಲಿಗೆ ಫೆ.21ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಚಾಲನೆ ನೀಡಲಿದ್ದಾರೆ.

ವಾರದ ಮೂರು ದಿನದಲ್ಲಿ ಅಂದರೆ, ಭಾನುವಾರ, ಮಂಗಳವಾರ, ಗುರುವಾರ ಸಂಜೆ 4.30ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ ತಲುಪಲಿದೆ. ಅದೇ ರೀತಿ ಮಂಗಳೂರಿನಿಂದ ಸೋಮವಾರ, ಬುಧವಾರ, ಶುಕ್ರವಾರ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಯಶವಂತಪುರ ತಲುಪಲಿದೆ.

ಸಂಸದರ ಕೋರಿಕೆ ಮೇರೆಗೆ ಮಂಗಳೂರು- ಬೆಂಗಳೂರು ನಡುವೆ ವಾರದಲ್ಲಿ ಮೂರು ದಿನ ರಾತ್ರಿ ರೈಲಿಗೆ ನೈಋುತ್ಯ ರೈಲ್ವೆಯು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಯಶವಂತಪುರದಿಂದ ಪ್ರತಿ ಭಾನುವಾರ, ಮಂಗಳವಾರ, ಶುಕ್ರವಾರ ಸಂಜೆ 4.30ಕ್ಕೆ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ ತಲುಪುವಂತೆ ವೇಳಾಪಟ್ಟಿಆರಂಭದಲ್ಲಿ ಸಿದ್ಧಪಡಿಸಲಾಗಿತ್ತು. ಬಳಿಕ ಹೊರಡಿಸಿದ ಅಧಿಸೂಚನೆಯಲ್ಲಿ ಶುಕ್ರವಾರದ ಬದಲು ಗುರುವಾರ ಎಂದು ಬದಲಿಸಲಾಗಿದೆ. ರಾತ್ರಿ ರೈಲು ಆರಂಭವಾಗಿದ್ದರಿಂದ ದ.ಕ.ಜಿಲ್ಲೆಯ ಜನರ ಬಹುಮುಖ್ಯ ಬೇಡಿಕೆಯೊಂದು ಈಡೇರಿದಂತಾಗಿದೆ.

click me!