Omicron In Karnataka: 2ನೇ ಅಲೆಯಲ್ಲಿ ಸೋಂಕು ತಗಲಿತ್ತು, 2 ಡೋಸ್‌ ಲಸಿಕೆ ಪಡೆದಿದ್ದೆ. ಆದರೂ ಒಮಿಕ್ರಾನ್ ಬಂತು!

By Kannadaprabha News  |  First Published Dec 16, 2021, 4:35 AM IST

* ದಕ್ಷಿಣ ಆಫ್ರಿಕಾದಿಂದ ಬಂದ ಬೆಂಗಳೂರು ವ್ಯಕ್ತಿಗೆ ಒಮಿಕ್ರೋನ್‌

* 10 ದಿನದ ನಂತರ ಡಿಸ್‌ಚಾಜ್‌ರ್‍

* ಹಿಂದಿನ ಡೆಲ್ಟಾಸೋಂಕಿನಷ್ಟುಸುಸ್ತು, ರೋಗಲಕ್ಷಣ ಇರಲಿಲ್ಲ

* ಆಸ್ಪತ್ರೆಯಿಂದಲೇ 1 ವಾರ ಕೆಲಸ ಮಾಡಿದೆ


 ಬೆಂಗಳೂರು(ಡಿ.16): ‘ಕೊರೋನಾ ಎರಡನೇ ಅಲೆಯಲ್ಲಿ)Covid Second Wave) ಒಮ್ಮೆ ಸೋಂಕು ತಗಲಿತ್ತು. ಅಲ್ಲದೆ, ಕೊರೋನಾ ಲಸಿಕೆಯ 2 ಡೋಸ್‌ ಪಡೆದಿದ್ದೆ (Second Dose Of Vaccine). ಆದರೂ, ಒಮಿಕ್ರೋನ್‌ ಸೋಂಕು (Omicron Infection) ತಗಲಿತು. ಸಮಾಧಾನಕರ ಅಂಶವೆಂದರೆ ಈ ಹಿಂದಿನ ಸೋಂಕಿನಂತೆ ಒಮಿಕ್ರೋನ್‌ ಹೆಚ್ಚು ಬಾಧಿಸಲಿಲ್ಲ.’

- ಇದು ಒಮಿಕ್ರೋನ್‌ ಗುಣಮುಖ ವ್ಯಕ್ತಿಯ ಮಾತು.

Tap to resize

Latest Videos

undefined

10 ದಿನಗಳ ಚಿಕಿತ್ಸೆ ಬಳಿಕ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಅವರು ತಮ್ಮ ಆಸ್ಪತ್ರೆಯ ದಿನಗಳು ಹಾಗೂ ಚಿಕಿತ್ಸೆ ಬಗ್ಗೆ ಮಾತನಾಡಿ, ‘ಈ ಹಿಂದೆ ಎರಡನೇ ಅಲೆ ಆರಂಭವಾದಾಗ ಏಪ್ರಿಲ್‌ನಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಆಗ ಮನೆಯಲ್ಲಿಯೇ ಐಸೋಲೇಷನ್‌ (Isolation) ಆಗಿ ಗುಣಮುಖರಾದ ನಂತರ ಎರಡೂ ಡೋಸ್‌ ಲಸಿಕೆ ಪಡೆದಿದ್ದೆ. ಆದರೂ, ವಿದೇಶ ಪ್ರವಾಸದ ಬಳಿಕ ಒಮಿಕ್ರೋನ್‌ ತಗಲಿದೆ. ಏಪ್ರಿಲ್‌ನಲ್ಲಿ ಡೆಲ್ಟಾರೂಪಾಂತರಿ (Delta Varient) ತಗಲಿದ್ದಾಗ ಇದ್ದ ಗಂಟಲು ಕೆರೆತ, ಕೆಮ್ಮು ಈ ಬಾರಿಯೂ ಇತ್ತಾದರೂ ಅಲ್ಪ ಪ್ರಮಾಣದಲ್ಲಿತ್ತು. ಮೊದಲ ಬಾರಿಗೆ ಹೋಲಿಸಿದರೆ ಸುಸ್ತು ಸಾಕಷ್ಟು ಕಡಿಮೆ ಇತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರಲಿಲ್ಲ’ ಎಂದು ತಿಳಿಸಿದರು.

Omicron variant : ಬೆಂಗಳೂರಿನ ಒಮಿಕ್ರೋನ್‌ ಸೋಂಕಿತ ಗುಣಮುಖ

ಆಸ್ಪತ್ರೆಯಿಂದಲೇ ಕೆಲಸ ಮಾಡಿದ್ದೆ:

‘ನನಗೆ ಡೆಲ್ಟಾ, ಒಮಿಕ್ರೋನ್‌ ಎರಡೂ ರೂಪಾಂತರಿ ಸೋಂಕಿನ ಅನುಭವವಿದೆ. ಪ್ರತ್ಯೇಕ ಚಿಕಿತ್ಸೆ, ಆಹಾರ ಪದ್ಧತಿ ಇಲ್ಲ. ವಿಟಮಿನ್‌ ಸಿ (Vitamin C) ಮಾತ್ರೆ, ಆ್ಯಂಟಿಬಯೋಟಿಕ್‌ ಕೊಟ್ಟಿದ್ದರು. ಈ ಬಾರಿ ಸೋಂಕಿನ ಲಕ್ಷಣಗಳು ಸಾಕಷ್ಟುಕಡಿಮೆ ಇದ್ದು, ಸುಸ್ತು ಇಲ್ಲದ ಕಾರಣ ಆಸ್ಪತ್ರೆಯಿಂದಲೇ ಒಂದು ವಾರ ಕೆಲಸ ಮಾಡಿದ್ದೇನೆ’ ಎಂದರು.

ಹೆಚ್ಚು ಆತಂಕ ಆಗಲಿಲ್ಲ:

‘ನವೆಂಬರ್‌ ಕೊನೆಯ ವಾರ ದಕ್ಷಿಣ ಆಫ್ರಿಕ ಪ್ರವಾಸ (South Africa Tour) ಬಳಿಕ ಬೆಂಗಳೂರಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಕೊರೊನಾ ನೆಗೆಟಿವ್‌ ಬಂದಿತ್ತು. ಹೋಂ ಕ್ವಾರಂಟೈನ್‌ನಲ್ಲಿದ್ದ (Home Quarantine) ಮೂರನೇ ದಿನ ಗಂಟಲು ಕೆರೆತ, ಕೆಮ್ಮು ಕಾಣಿಸಿಕೊಂಡಿತು. ಒಮಿಕ್ರೋನ್‌ ಬಗ್ಗೆ ಮಾಹಿತಿ ಇದ್ದ ಕಾರಂಣ ಅನುಮಾನದಿಂದಲೇ ಖಾಸಗಿ ಪ್ರಯೋಗಾಲಯದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿದ್ದು, ಕೊರೋನಾ ದೃಢಪಟ್ಟಿತ್ತು. ಬಿಬಿಎಂಪಿಯಿಂದ ರೂಪಾಂತರ ಪರೀಕ್ಷೆ ನಡೆಸಿದಾಗ ಒಮಿಕ್ರೋನ್‌ ಎಂದು ಪತ್ತೆಯಾಯಿತು. ಸೋಂಕಿನ ಬಗ್ಗೆ ಮೊದಲೇ ತಿಳಿದಿದ್ದರಿಂದ ಹೆಚ್ಚು ಆತಂಕವಾಗಲಿಲ್ಲ. ಸರ್ಕಾರದ ನಿಯಮದಂತೆ ಆಸ್ಪತ್ರೆಗೆ ದಾಖಲಾದೆ. ಆರ್‌ಟಿಪಿಸಿಆರ್‌ ಎರಡು ಬಾರಿ ನೆಗೆಟಿವ್‌ ಬಂದ ಬಳಿಕ ರಕ್ತ ಪರೀಕ್ಷೆ, ಎಕ್ಸರೇ ಮಾಡಿ ಆರೋಗ್ಯವಾಗಿದ್ದೇನೆ ಎಂದು ಖಾತರಿಯಾದ ಬಳಿಕ ವೈದ್ಯರು ಬಿಡುಗಡೆ ಮಾಡಿದರು’ ಎಂದರು.

Omicron Variant ಲಸಿಕೆ ಪರಿಣಾಮ ಬೀರಲ್ಲ, ಬೂಸ್ಟರ್ ಅಗತ್ಯವಿಲ್ಲ, ಎಚ್ಚರ ತಪ್ಪಿದರೆ ಓಮಿಕ್ರಾನ್ ಅಪಾಯ!

ಕ್ವಾರಂಟೈನ್‌ ಪಾಲಿಸಿ:

‘ವಿದೇಶದಿಂದ ಬಂದ ನಂತರ ಅಂತರ ಕಾಯ್ದುಕೊಂಡ ಕಾರಣ ನಮ್ಮ ಕುಟುಂಬಸ್ಥರಿಗೆ ಯಾರಿಗೂ ಸೋಂಕು ಬರಲಿಲ್ಲ. ಹೀಗಾಗಿ, ವಿದೇಶದಿಂದ ಬಂದವರು ಕಟ್ಟುನಿಟ್ಟಾಗಿ ಕ್ವಾರಂಟೈನ್‌ ನಿಯಮ ಪಾಲಿಸಬೇಕು. ಸೋಂಕಿನ ಲಕ್ಷಣ ಬಂದಾಗ ನಿರ್ಲಕ್ಷ್ಯಮಾಡದೇ ಪರೀಕ್ಷೆಗೆ ಒಳಗಾಗಬೇಕು. ಆರೋಗ್ಯ ಸಿಬ್ಬಂದಿ, ವೈದ್ಯರಿಗೆ ಸೂಕ್ತ ಮಾಹಿತಿ ನೀಡಬೇಕು. ಇಂತಹ ಮುಂಜಾಗ್ರತಾ ಕ್ರಮದಿಂದ ಮನೆಯವರಿಗೆ ಅಥವಾ ಸುತ್ತಮುತ್ತಲಿನವರಿಗೆ ಸೋಂಕು ತಗಲದಂತೆ ಎಚ್ಚರ ವಹಿಸಬಹುದು’ ಎಂದು ಸಲಹೆ ನೀಡಿದರು.

ಕರ್ನಾಟಕದಲ್ಲಿ ಒಂದೂ ಒಮಿಕ್ರೋನ್‌ ಕೇಸಿಲ್ಲ, ಬ್ರಿಟನ್‌ನಲ್ಲಿ ಕೋವಿಡ್ ಸ್ಫೋಟ!

ರಾಜ್ಯದ ಮೊದಲ ಒಮಿಕ್ರೋನ್‌(Karnataka Omicron case) ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಬುಧವಾರ ನಗರದ ಬೌರಿಂಗ್‌ ಆಸ್ಪತ್ರೆಯಿಂದ(Hospital) ಬಿಡುಗಡೆಯಾಗಿದ್ದಾರೆ. ಮಂಗಳವಾರವಷ್ಟೇ 2ನೇ ಸೋಂಕಿತ ಗುಣವಾಗಿದ್ದರು. ಇನ್ನೊಬ್ಬ ಸೋಂಕಿತ ಈ ಹಿಂದೆಯೇ ವಿದೇಶಕ್ಕೆ ಪರಾರಿಯಾಗಿದ್ದಾನೆ. ಹೀಗಾಗಿ ರಾಜ್ಯದಲ್ಲೀಗ ಒಂದೂ ಒಮಿಕ್ರೋನ್‌ ಸಕ್ರಿಯ ಪ್ರಕರಣ ಇಲ್ಲದಂತಾಗಿದೆ.

7 ವರ್ಷದ ಬಾಲಕ ಸೇರಿ 7 ಜನರಿಗೆ ಒಮಿಕ್ರೋನ್‌
ಭಾರತದಲ್ಲಿ(India Omicron Case) ಬುಧವಾರ ಮತ್ತೆ 7 ಜನರಲ್ಲಿ ಹೊಸದಾಗಿ ಒಮಿಕ್ರೋನ್‌ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 68ಕ್ಕೆ ತಲುಪಿದೆ. ಬುಧವಾರ ಮಹಾರಾಷ್ಟ್ರದಲ್ಲಿ 4, ತೆಲಂಗಾಣದಲ್ಲಿ 2, ಪಶ್ಚಿಮ ಬಂಗಾಳದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈ ಪೈಕಿ ಪಶ್ಚಿಮ ಬಂಗಾಳದ ಪ್ರಕರಣದಲ್ಲಿ 7 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ತೆಲಂಗಾಣದಲ್ಲಿ ಇಬ್ಬರು ವಿದೇಶಿಯರಲ್ಲಿ ಸೋಂಕು ಪತ್ತೆಯಾಗಿದೆ.

Omicron Variant ಕಂಡು ಕೇಳರಿಯದ ವೇಗದಲ್ಲಿ ಹಬ್ಬುತ್ತಿದೆ ಓಮಿಕ್ರಾನ್, ತಪ್ಪು ಅಭಿಪ್ರಾಯ ಬೇಡ, WHO ಎಚ್ಚರಿಕೆ!

ಬ್ರಿಟನ್ನಲ್ಲಿ ಕೋವಿಡ್‌ ಸ್ಫೋಟ:
ಬ್ರಿಟನ್‌ನಲ್ಲಿ(Britain Covid 19) ಕೊರೋನಾ ಸ್ಫೋಟಗೊಂಡಿದ್ದು ಗುರುವಾರ 78,610 ಹೊಸ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕದ ಆರಂಭದಿಂದಲೂ ಒಂದೇ ದಿನ ದಾಖಲಾದ ಪ್ರಕರಣಗಳಲ್ಲಿ ಇದು ಗರಿಷ್ಟವಾಗಿದೆ. ಈ ಹಿಂದೆ ಜ.8ರಂದು 68,053 ಮಂದಿಗೆ ಸೋಂಕು ಹಬ್ಬಿದ್ದು, ಈವರೆಗಿನ ಅತಿಹೆಚ್ಚು ದೈನಂದಿನ ಕೇಸ್‌ ಆಗಿತ್ತು. ಒಮಿಕ್ರೋನ್‌ ಹಾಗೂ ಡೆಲ್ಟಾರೂಪಾಂತರಿಯ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಕೊರೋನಾ ಪ್ರಕರಣಗಳ ಸಂಖ್ಯೆ ವೇಗವಾಗಿ ದ್ವಿಗುಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಹಾಮಾರಿ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಎಚ್ಚರಿಕೆ ನೀಡಿದ್ದಾರೆ.

ದೇಶದ 6.7 ಕೋಟಿ ಜನರ ಪೈಕಿ 1.1 ಕೋಟಿ ಜನಕ್ಕೆ ಸೋಂಕು
ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಇದರಿಂದ ಎಚ್ಚೆತ್ತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸ್‌ನ್‌ ಬೂಸ್ಟರ್‌ ಡೋಸ್‌ ನೀಡುವ ಅಭಿಯಾನ ಚುರುಕುಗೊಳಿಸಲು ನಿರ್ಧರಿಸಿದ್ದಾರೆ. ಬ್ರಿಟನ್‌ನಲ್ಲಿ ಬುಧವಾರ 656,711 ಬೂಸ್ಟರ್‌ ಡೋಸ್‌ಗಳನ್ನು ನೀಡಲಾಗಿದೆ. ಒಟ್ಟಾರೆ 6.7 ಕೋಟಿ ಜನಸಂಖ್ಯೆ ಹೊಂದಿದ ಬ್ರಿಟನ್‌ನಲ್ಲಿ ಈವರೆಗೆ 1.1 ಕೋಟಿ ಜನ ಸೋಂಕಿಗೆ ತುತ್ತಾಗಿದ್ದು, 1.46 ಲಕ್ಷ ಜನರನ್ನು ಸೋಂಕು ಬಲಿತೆಗೆದುಕೊಂಡಿದೆ.

Corona Third Wave: ರಾಜ್ಯದಲ್ಲಿ 3ನೇ ಅಲೆ ಭೀತಿ, ತಜ್ಞರ ಶಿಫಾರಸ್ಸುಗಳು ಇಲ್ಲಿವೆ

ಮುಂಬೈನಲ್ಲಿ ಕಠಿಣ ನಿರ್ಬಂಧ ಜಾರಿ,
ಒಮಿಕ್ರೋನ್‌ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ(Maumbai) ಗುರುವಾರದಿಂದ ಜಾರಿಗೆ ಬರುವಂತೆ ಸೆ.144ರಡಿ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

click me!