ನವಾಜ್ ಹೆಸರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ವಿಡಿಯೋ ಪೋಸ್ಟ್ ಮಾಡಿದ ರಮೇಶ ಅರೆಸ್ಟ್!

Published : May 13, 2025, 08:25 PM IST
ನವಾಜ್ ಹೆಸರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ವಿಡಿಯೋ ಪೋಸ್ಟ್ ಮಾಡಿದ ರಮೇಶ ಅರೆಸ್ಟ್!

ಸಾರಾಂಶ

ಪ್ರಧಾನಿ ಮೋದಿ ವಿರುದ್ಧ ಪ್ರಚೋದನಾತ್ಮಕ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರು ರಮೇಶ್ ಬಾನೋತ್‌ನನ್ನು (ನಕಲಿ ಹೆಸರು: ನವಾಜ್) ಬಂಧಿಸಿದ್ದಾರೆ. ಬಂಡೇಪಾಳ್ಯ ನಿವಾಸಿಯಾದ ಈತ, "Public Servant" ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಮೋದಿಯವರ ಮನೆ ಮೇಲೆ ಬಾಂಬ್ ದಾಳಿಗೆ ಕರೆ ನೀಡಿದ್ದ. ಈತನ ವಿರುದ್ಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಬೆಂಗಳೂರು (ಮೇ 13): ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಾತ್ಮಕ ಮತ್ತು ದೇಶದ್ರೋಹೀಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರ ತಂಡ ಬಂಧಿಸಿದೆ. ನವಾಜ್ ಎಂಬ ಹೆಸರಿನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಆರೋಪಿ, ನಿಜವಾಗಿ ರಮೇಶ್ ಬಾನೋತ್ ಎಂಬಾತನಾಗಿದ್ದು, ಬಂಡೇಪಾಳ್ಯ ಪೊಲೀಸರು ಬಂಧನ ಮಾಡಿದ್ದಾರೆ.

ಆರೋಪಿ ವಿವರ:
ಹೆಸರು: ರಮೇಶ್ ಬಾನೋತ್ (ನಕಲಿ ಹೆಸರು-ನವಾಜ್)
ನಿವಾಸ: ಮಂಗನಮ್ಮನ ಪಾಳ್ಯ, ಬಂಡೇಪಾಳ್ಯ, ಬೆಂಗಳೂರು
ವೃತ್ತಿ: ಕಂಪ್ಯೂಟರ್ ಮೆಕ್ಯಾನಿಕ್
ಹಿಂದಿನ ದಾಖಲಾತಿ: ತುಮಕೂರಿನಲ್ಲಿ ಎನ್.ಡಿ.ಪಿ.ಎಸ್ ಪ್ರಕರಣದಲ್ಲಿ ಆರೋಪಿ

ಆರೋಪಿ ರಮೇಶ್, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ 'Public Servant' ಎಂಬ ಐಡಿಯನ್ನು ಬಳಸಿಕೊಂಡು ಪ್ರಚೋದನಾತ್ಮಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದನು. ಈ ವಿಡಿಯೋಗಳಲ್ಲಿ ರಮೇಶ್, ಭಾರತ ಮತ್ತು ಪಾಕಿಸ್ತಾನ ಸೈನಿಕರ ಸಂಘರ್ಷದ ಸಂದರ್ಭದಲ್ಲಿಯೇ ಪ್ರಧಾನಿ ಮೋದಿಯವರ ಮನೆ ಮೇಲೆ ಬಾಂಬ್ ಬೀಳಬೇಕೆಂದು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿದ್ದನು. ಜನರು ಸುಮ್ಮನೆ ಇರುವವರನ್ನ ತೊಂದರೆ ಮಾಡುತ್ತಿರುವ ಮೋದಿ ಮನೆ ಮೇಲೆ ಯಾಕೆ ಬಾಂಬ್ ಬೀಳುತ್ತಿಲ್ಲ? ಮೊದಲು ಮೋದಿಯವರ ಮನೆ ಮೇಲೆ ಬಾಂಬ್ ಹಾಕಬೇಕು" ಎಂಬಂತೆಯೇ ಅಪಾರಧಾಯಕ ಹೇಳಿಕೆ ನೀಡಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿತ್ತು.

ಪೊಲೀಸರ ಕ್ರಮ: ಈ ವಿಷಯ ಕುರಿತು ಹಲವು ದೂರುಗಳು ಬಂದ ಬಳಿಕ, ಬಂಡೇಪಾಳ್ಯ ಪೊಲೀಸ್ ಠಾಣೆ ಪೊಲೀಸರು ತನಿಖೆ ಆರಂಭಿಸಿದರು. ಈತನ ಇನ್‌ಸ್ಟಾಗ್ರಾಂ ಪೋಸ್ಟ್ ಆಧರಿಸಿ ಆರೋಪಿಗೆ ಸರಿಯಾಗಿ ಪತ್ತೆ ಹಚ್ಚಿ ಬಂಧಿಸಿದರು. ಜಂಟಿ ಆಯುಕ್ತರು ಈ ಪ್ರಕರಣದ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ. ಈಗ ರಮೇಶ್‌ನ್ನು ಪರಪ್ಪನ ಅಗ್ರಹಾರ ಜೈಲುಗೆ ಕಳುಹಿಸಲಾಗಿದ್ದು, ಮುಂದಿನ ತನಿಖೆ ಜಾರಿಯಲ್ಲಿದೆ. ಸೋಶಿಯಲ್ ಮೀಡಿಯಾದ ದುರುಪಯೋಗ, ನಕಲಿ ಹೆಸರು ಬಳಸಿ ದೇಶದ ಪ್ರಧಾನಿಯ ವಿರುದ್ಧ ಹತ್ಯಾ ಬೆದರಿಕೆ ಮತ್ತು ಪ್ರಚೋದನೆ ನೀಡುವಂತಹ ವಿಷಯಗಳು ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ ಸಾಧ್ಯತೆ ಇದೆ. ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದು, ಕಾನೂನು ಪ್ರಕಾರ ಈತನ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್