ಸಿಎಂ ಮನೆಗೆ ಆಟೋ ಬುಕ್‌ ಮಾಡಿ ಚಾಲಕನ ಮೂಲಕ ಬಾ*ಬ್‌ ಬೆದರಿಕೆ! ಬ್ಯಾಡರಹಳ್ಳಿ ನಿವಾಸಿ ಕಾರ್ತಿಕ್ ಅರೆಸ್ಟ್

Kannadaprabha News   | Kannada Prabha
Published : Nov 28, 2026, 07:29 AM IST
CM DKS house bomb threate

ಸಾರಾಂಶ

ಆನ್‌ಲೈನ್‌ನಲ್ಲಿ ಆಟೋ ಬುಕ್ ಮಾಡಿ, ಚಾಲಕನ ಮೊಬೈಲ್ ಮೂಲಕ ಸಿಎಂ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಕಾರ್ತಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹುಸಿ ಬೆದರಿಕೆ ಹಾಕಿದ್ದ ಈತನನ್ನು ತಾಂತ್ರಿಕ ಕಾರ್ಯಾಚರಣೆ ಮೂಲಕ ಸದಾಶಿವನಗರ ಪೊಲೀಸರು ಸೆರೆಹಿಡಿದಿದ್ದಾರೆ.

ಬೆಂಗಳೂರು (ನ.28): ಆನ್‌ಲೈನ್‌ನಲ್ಲಿ ಆಟೋ ಬುಕ್ ಮಾಡಿ ಚಾಲಕನ ಮೊಬೈಲ್‌ನಿಂದಲೇ ಪೊಲೀಸರಿಗೆ ಮುಖ್ಯಮಂತ್ರಿ ಅವರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾ*ಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಕಿಡಿಗೇಡಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ನಿವಾಸಿ ಕಾರ್ತಿಕ್ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸದ ಸಮೀಪ ನಡೆದಿದ್ದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಕಳುಹಿಸಿ ಬೆದರಿಕೆ ಹಾಕಿದಾತನನ್ನು ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.

ಆನ್‌ಲೈನ್‌ನಲ್ಲಿ ಆಟೋ ಬುಕ್ ಮಾಡಿ ಸಿಎಂ ಮನೆಗೆ ಬೆದರಿಕೆ!

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌, ಬ್ಯಾಡರಹಳ್ಳಿ ಸಮೀಪ ಪಿಜಿಯಲ್ಲಿ ವಾಸವಾಗಿದ್ದ. ನ.5 ರಂದು ಆರ್‌.ಟಿ.ನಗರಕ್ಕೆ ತೆರಳಲು ಆನ್‌ಲೈನ್‌ನಲ್ಲಿ ಆಟೋ ಮಾಡಿ ಬುಕ್ ಕಾರ್ತಿಕ್ ಲೋಕೇಷ್‌ನ್ ಕಳುಹಿಸಿದ್ದಾನೆ. ಅಂತೆಯೇ ಆಟೋ ಚಾಲಕ ಪ್ರಯಾಣಿಕನನ್ನು ಪಿಕ್‌ ಮಾಡಲು ತೆರಳಿದರೆ ಅದು ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆ ದಾರಿ ತೋರಿಸಿದೆ. ಆಗ ಕಾರ್ತಿಕ್‌ಗೆ ಕರೆ ಮಾಡಿ ತಾನು ನೀವು ಶೇರ್ ಮಾಡಿರುವ ಲೋಕೇಷನ್‌ಗೆ ಬಂದಿರುವುದಾಗಿ ಚಾಲಕ ಹೇಳಿದ್ದಾನೆ. ಈ ಮಾತಿಗೆ ಕಾರ್ತಿಕ್‌, ನಿಮ್ಮ ಮೊಬೈಲ್‌ ಅನ್ನು ಮುಖ್ಯಮಂತ್ರಿ ಅವರ ನಿವಾಸದ ಮುಂದೆ ಭದ್ರತೆಯಲ್ಲಿರುವ ಪೊಲೀಸರಿಗೆ ಕೊಡುವಂತೆ ಹೇಳಿದ್ದಾನೆ.

ಅಂತೆಯೇ ಅಲ್ಲೇ ಭದ್ರತೆಯಲ್ಲಿದ್ದ ಪೊಲೀಸರಿಗೆ ಆಟೋ ಚಾಲಕ ಮೊಬೈಲ್ ನೀಡಿದ್ದಾನೆ. ಮೊಬೈಲ್ ಕರೆ ಸ್ವೀಕರಿಸಿದ ಕೂಡಲೇ ಕಾರ್ತಿಕ್‌, ತಾನು ಮುಖ್ಯಮಂತ್ರಿ ಅವರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿದ್ದೇನೆ. ಮುಖ್ಯಮಂತ್ರಿ ಅವರು ಬೆಂಗಾವಲು ವಾಹನದಲ್ಲಿ ಹೋಗುವಾಗಲೇ ಸ್ಫೋಟವಾಗಲಿದೆ ಎಂದಿದ್ದಾನೆ.

ಹುಸಿ ಬೆದರಿಕೆ

ಈ ಮಾತು ಕೇಳಿ ಗಾಬರಿಗೊಂಡ ಪೊಲೀಸರು, ಕೂಡಲೇ ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳಿಗೂ ಮಾಹಿತಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಅವರ ನಿವಾಸ ಹಾಗೂ ವಿಧಾನಸೌಧದಲ್ಲಿ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಹುಸಿ ಬೆದರಿಕೆ ಎಂದು ಖಚಿತವಾಗಿದೆ. ಬಳಿಕ ಚಾಲಕನಿಗೆ ಬಂದಿದ್ದ ಮೊಬೈಲ್ ಕರೆ ಆಧರಿಸಿ ಆರೋಪಿಯನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೇಕೆದಾಟು ತಕರಾರು: ತಮಿಳುನಾಡಿನ ಮುಂದೂಡಿಕೆ ನೆಪಕ್ಕೆ ಸುಪ್ರೀಂಕೋರ್ಟ್‌ ಗರಂ, “ಪ್ರಕರಣ ಬಹುತೇಕ ಮುಗಿದಿದೆ” ಎಂದ ಪೀಠ!
ಇನ್ಮುಂದೆ ವಿದ್ಯುತ್ ಬಿಲ್ ಲೆಕ್ಕಾಚಾರ ಬದಲು! ಹಗಲು, ರಾತ್ರಿ ಬಳಕೆಗೆ ಪ್ರತ್ಯೇಕ ದರ, 2027ರಿಂದ ಕೇಂದ್ರದ ಹೊಸ ನಿಯಮ ಜಾರಿ