ಟೆಕ್ಕಿಗಳು ಬೆಂಗಳೂರು ಬಿಡುತ್ತಿರೋದ್ಯಾಕೆ? ಬೇಸರವಾಯ್ತಾ ಗಾರ್ಡನ್‌ ಸಿಟಿ!

By Gowthami K  |  First Published Jul 11, 2024, 6:42 PM IST

ಬೆಂಗಳೂರು ಸಿಟಿ ಜೀವನ ಸಾಧ್ಯವೇ ಇಲ್ಲವೆಂದು ಟೆಕ್ಕಿಗಳ ವಲಸೆ, ಬೇಸರವಾಯ್ತಾ ಗಾರ್ಡನ್‌ ಸಿಟಿ?


ನವದೆಹಲಿ (ಜು.11): ಐಟಿ ಹಬ್‌ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ  ಮನೆ ಬಾಡಿಗೆ ಏರಿಕೆಯತ್ತ ಹೋಗುತ್ತಿದೆ. ಇದರ ಪರಿಣಾಮ ಬೆಂಗಳೂರಿನ ಟೆಕ್ಕಿಗಳು ಐಟಿ ಕಾರಿಡಾರ್‌ಗಳಿಂದ ದೂರ ಸರಿಯುತ್ತಿದ್ದು, ಬಾಡಿಗೆ ಕೈಗೆಟುಕುವ ದರದಲ್ಲಿರುವ ನಗರದ ಹೊರವಲಯ ಪ್ರದೇಶಗಳಿಗೆ ಶಿಫ್ಟ್‌ ಆಗುತ್ತಿದ್ದಾರೆ.

ಇದರ ಪರಿಣಾಮ ವೈಟ್‌ಫೀಲ್ಡ್‌ನಂತಹ ಐಟಿ ಉಪನಗರಗಳಲ್ಲಿ ಕೂಡ  ಬಾಡಿಗೆಗಳು ವರ್ಷದಿಂದ ವರ್ಷಕ್ಕೆ ಕನಿಷ್ಠ 15-20 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಬ್ರೋಕರ್‌ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest Videos

undefined

ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನದಿ ನೀರು ಬಿಡಲು ಕರ್ನಾಟಕಕ್ಕೆ ಶಿಫಾರಸು!

ಇತ್ತೀಚೆಗೆ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳು ಆಗ್ನೇಯ ಬೆಂಗಳೂರಿನ  ಪ್ರಧಾನ ಸರ್ಜಾಪುರ ಪ್ರದೇಶದಿಂದ ಸುಮಾರು 5 ಕಿಮೀ ದೂರದ ಹೊರವಲಯಕ್ಕೆ ಹೋಗಿ ಮನೆ ಬಾಡಿಗೆಗೆ ತೆಗೆದುಕೊಳ್ಳಲು ನಿರ್ಧರಿಸಿದರು.

ಅವರು ಹೇಳುವಂತೆ ,"ನಾವು ಹೊರವಲಯದಲ್ಲಿ ಸುಮಾರು 38,000 ರೂ.ಗಳಿಗೆ 3BHK  ಮನೆ ನೋಡಿದ್ದೇವೆ. ಆದರೆ ಸರ್ಜಾಪುರ ಪ್ರದೇಶದಲ್ಲಿ 2BHK ಮನೆ ಬಾಡಿಗೆಯು 35,000-40,000 ರಿಂದ ಪ್ರಾರಂಭವಾಗುತ್ತದೆ" ಎಂದರು.

ಪೂರ್ವ ಐಟಿ ಕಾರಿಡಾರ್ ವೈಟ್‌ಫೀಲ್ಡ್, ಹೂಡಿ, ಹೊರ ವರ್ತುಲ ರಸ್ತೆ ಮತ್ತು ಸರ್ಜಾಪುರ ರಸ್ತೆಯಂತಹ ಪ್ರದೇಶಗಳನ್ನು ಒಳಗೊಂಡಿದೆ.  ಅದರ ಹೊರವಲಯದಲ್ಲಿ ವರ್ತೂರು, ಕುಂದಲಹಳ್ಳಿ ಮತ್ತು ಚನ್ನಸಂದ್ರದಂತಹ ಸ್ಥಳಗಳು ಇದೆ. ಈ ಪ್ರದೇಶಗಳು  ಕೈಗೆಟುಕುವ ದರದಲ್ಲಿ ಬಾಡಿಗೆ ಮನೆಯನ್ನು ನೀಡುವ ಪ್ರದೇಶವಾಗಿದೆ.

ಮಂಗಳೂರಿನಲ್ಲಿ ಕಾಣೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಜೊತೆ ಪತ್ತೆ, ಯುವಕನ ಹಿನ್ನೆಲೆ ಕೇಳಿ ಶಾಕ್!

ಒಂದು ವರ್ಷದ ಹಿಂದಕ್ಕೆ ಹೋಲಿಸಿದರೆ ನಿರೀಕ್ಷಿತ ಬಾಡಿಗೆದಾರರು ಇಂದು ಹೆಚ್ಚಿನ ಆಯ್ಕೆಗಳನ್ನು ಹೊಂದಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.   ಕೋವಿಡ್‌ ಮತ್ತು ಇನ್ನಿತರ ಕಾರಣಕ್ಕೆ ನೆಲಕಚ್ಚಿದ್ದ ಬೆಂಗಳೂರಿನ  ರಿಯಲ್ ಎಷ್ಟೇಟ್‌ ಕ್ಷೇತ್ರ 2023ರ ಮಧ್ಯ ಭಾಗದಲ್ಲಿ ಅತ್ಯಂತ ಹೆಚ್ಚು ಚೇತರಿಕೆ ಕಂಡುಬಂತು. ಈಗ ನಿರೀಕ್ಷಿತ ಬಾಡಿಗೆದಾರರು ಅವರು  ಅಪಾರ್ಟ್‌ಮೆಂಟ್‌ಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ನಗರದ ಪ್ರಧಾನ ಐಟಿ ಕಾರಿಡಾರ್‌ಗಳಲ್ಲಿ ಸುಮಾರು 20-40 ಪ್ರತಿಶತದಷ್ಟು ಮನೆ ಬಾಡಿಗೆ ಹೆಚ್ಚಳ ಕಂಡುಬಂದಿದೆ.

ಏಪ್ರಿಲ್-ಜೂನ್ 2024 ರಲ್ಲಿ, ದಾಸ್ತಾನುಗಳನ್ನು ಸೇರಿಸುವುದನ್ನು ಮುಂದುವರಿಸುವುದರಿಂದ ನಾವು ಬಾಡಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಬೆಲೆ ತಿದ್ದುಪಡಿಯನ್ನು ಕಂಡಿದ್ದೇವೆ ಎಂದು ರಿಯಾಲ್ಟಿ ಕಾರ್ಪ್‌ನ ಉಪಾಧ್ಯಕ್ಷ ಸುನಿಲ್ ಸಿಂಗ್ ಹೇಳಿದ್ದಾರೆ. 

ಒಂದು ವರ್ಷದ ಹಿಂದೆ, ಬೆಂಗಳೂರಿನಲ್ಲಿ ವಿರಳವಾದ ಅಪಾರ್ಟ್‌ಮೆಂಟ್‌ಗಳನ್ನು ಕಾಯ್ದಿರಿಸಲು ಬಾಡಿಗೆದಾರರು ಒಬ್ಬರ ಮೇಲೊಬ್ಬರು ಮುಗಿಬಿಳುತ್ತಿದ್ದರು.  ಇಂದು ಬಾಡಿಗೆ ದಾಸ್ತಾನುಗಳ ಬೇಡಿಕೆ ಮತ್ತು ಪೂರೈಕೆಯ ನಡುವಿನ  ಸಾಮರಸ್ಯದಿಂದ, ಹಲವಾರು ಭೂಮಾಲೀಕರು ಕೋರಮಂಗಲದಂತಹ ಪ್ರಮುಖ ಸ್ಥಳಗಳಲ್ಲಿಯೂ ಸಹ ಬಾಡಿಗೆಯನ್ನು 10,000-15,000 ರೂ.ಗಳಷ್ಟು ಕಡಿಮೆ ಮಾಡಲು ಪ್ರಾರಂಭಿಸಿದ್ದಾರೆ.

ಉದಾಹರಣೆಗೆ, ಕೋರಮಂಗಲದ 3BHK ಅಪಾರ್ಟ್‌ಮೆಂಟ್‌ಗೆ ತಿಂಗಳಿಗೆ 75,000 ರೂ.ಗೆ ಬಾಡಿಗೆ ನೀಡಲಾಗುತ್ತಿತ್ತು, ಆದರೆ ಯಾರೂ  ಬಾಡಿಗೆಗೆ ಬರದ ಕಾರಣಕ್ಕೆ 65,000 ರೂ.ಗೆ ಇಳಿಸಲು ಮಾಲೀಕರು ನಿರ್ಧರಿಸಿ, ಬಳಿಕ ಬಾಡಿಗೆಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವೈಟ್‌ಫೀಲ್ಡ್‌ನ ಹೊರವಲಯದ ಬೂದಿಗೆರೆಯಲ್ಲಿ, ಮಾಲೀಕರು ಇತ್ತೀಚೆಗೆ 2BHK ಗೆ ಮಾಸಿಕ ಬಾಡಿಗೆಯನ್ನು 45,000 ರೂ.ಗಳಿಂದ 35,000 ರೂ.ಗೆ ಇಳಿಸಿದ್ದಾರೆ. ಜುಲೈ 9 ರಂದು, ಮಾಲೀಕರು ಉಲ್ಲೇಖಿಸುತ್ತಿದ್ದ 40,000 ರೂ.ಗಳಿಂದ ನಾವು ಮೈಸೂರು ರಸ್ತೆಯಲ್ಲಿ ತಿಂಗಳಿಗೆ 30,000 ರೂ.ಗೆ 2BHK ಬಾಡಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ತ್ರೈಮಾಸಿಕದಲ್ಲಿ ಇನ್ನಷ್ಟು ಕಠಿಣವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

click me!