ಬೆಂಗಳೂರು ನಗರದಲ್ಲಿ 1963ರಿಂದ 2004ರವರೆಗಿನ ಅವಧಿಯಲ್ಲಿ ಒಟ್ಟು 42 ಕೆರೆಗಳನ್ನು ಮುಚ್ಚಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಈ ಮಾಹಿತಿ ನೀಡಿದ್ದಾರೆ.
ವಿಧಾನಸಭೆ (ಸೆ.20): ಬೆಂಗಳೂರು ನಗರದಲ್ಲಿ 1963ರಿಂದ 2004ರವರೆಗಿನ ಅವಧಿಯಲ್ಲಿ ಒಟ್ಟು 42 ಕೆರೆಗಳನ್ನು ಮುಚ್ಚಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಈ ಮಾಹಿತಿ ನೀಡಿದ್ದಾರೆ. ಸೋಮವಾರ ಅತಿವೃಷ್ಟಿ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆಯುತ್ತಿರುವ ವೇಳೆ ಸಚಿವರು ಮುಚ್ಚಿರುವ 42 ಕೆರೆಗಳ ದಾಖಲೆಗಳನ್ನು ಸದನದ ಮುಂದಿಟ್ಟರು. ಬಿಡಿಎ 28 ಕೆರೆ, ಬಿಬಿಎಂಪಿ 5, ಕರ್ನಾಟಕ ಗೃಹ ಮಂಡಳಿ 1, ಬಿಡಿಎ ಅನುಮೋದಿತ ಖಾಸಗಿ ಬಡಾವಣೆ 1, ಖಾಸಗಿ ಒತ್ತುವರಿಯಿಂದ 7 ಕೆರೆಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ಬಹುತೇಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಕೆರೆಗಳನ್ನು ಮುಚ್ಚಲಾಗಿದೆ. ಬೆಂಗಳೂರು ಕೆರೆಗಳನ್ನು ಮುಚ್ಚಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಜೆ.ಜಾರ್ಗ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು.
ದೇವೇಗೌಡರ ಮನೆಗೆ ಅಶೋಕ್: ಫೋನ್‌ನಲ್ಲಿ ಸಿಎಂ ಬೊಮ್ಮಾಯಿ ಕೂಡ ಮಾತು
ಎರಡು ಪಕ್ಷಗಳ ನಡುವೆ ವಾಗ್ವಾದ ಶುರುವಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯಪ್ರವೇಶಿಸಿ, 2018ರಲ್ಲಿ ಜಲ ಬತ್ತಿ ಹೋಗಿರುವ ಕೆರೆಗಳ ನಕ್ಷೆಯನ್ನು ತೆಗೆದುಹಾಕುವ ಪ್ರಯತ್ನ ನಡೆಸಲಾಗಿತ್ತು ಎಂದು ಹೇಳಿದಾಗ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಕಾಲದಲ್ಲಿ ಕೆರೆ ಮುಚ್ಚುವ ಕೆಲಸ ನಡೆದಿರಲಿಲ್ಲ. ಈ ಹಿಂದೆ ಅಭಿವೃದ್ಧಿಗಾಗಿ ಕೆರೆಗಳನ್ನು ಮುಚ್ಚಲಾಗಿದೆ. ಇನ್ನು ಮುಂದೆ ಈ ರೀತಿಯಾಗಬಾರದು ಎಂಬುದು ಸ್ವಾಗತಾರ್ಹ. ತನಿಖೆ ನಡೆಸಿ ಒಳ್ಳೆಯದು ಹೇಳಿದರು.
ಬಡಾವಣೆ ಮುಚ್ಚಿದ ವರ್ಷ
ದೊಮ್ಮಲೂರು ಕೆರೆ 1977
ಎಚ್‌ಎಎಲ್ 3ನೇ ಹಂತ 1978
ಎನ್‌ಎಎಲ್ 2ನೇ ಹಂತ 1978
ಎಚ್‌ಎಸ್‌ಆರ್ ಬಡಾವಣೆ 1986
ವಿಶ್ವೇಶ್ವರಯ್ಯ ಬಡಾವಣೆ 2002
ಆರ್.ವಿ.ಎಡನೇ ಹಂತ 2001
ಕೋರಮಂಗಲ 1965
ಈಸ್ಟ್ ಆಫ್ ಎನ್‌ಜಿಎಫ್ 2000
ಎಚ್‌ಆರ್‌ಬಿ 1ನೇ ಹಂತ 1986
ಎಚ್‌ಆರ್‌ಬಿ 2ನೇ ಹಂತ 2000
ಡಾಲರ್ಸ್ ಕಾಲೋನಿ 1973
ಬಿಟಿಎಂ ಬಡಾವಣೆ 1995
ಬನಶಂಕರಿ 1975
ತಮಿಳ್ನಾಡಿಗೆ ಹರಿದುಹೋದ 425 ಟಿಎಂಸಿ ನೀರು: ರಾಜ್ಯದಲ್ಲಿ ಅಂತರ್ಜಲ ಮಟ್ಟಹೆಚ್ಚಳವಾಗಿದ್ದು, 18 ಜಿಲ್ಲೆಗಳಲ್ಲಿ ಶೇ.100ರಷ್ಟುಏರಿಕೆಯಾಗಿದೆ. ಸೋಮವಾರ ವಿಧಾನಸಭೆಯಲ್ಲಿ ಅತಿವೃಷ್ಟಿಕುರಿತ ಚರ್ಚೆಗೆ ಉತ್ತರ ನೀಡುವ ವೇಳೆ ಕಂದಾಯ ಸಚಿವ ಆರ್.ಅಶೋಕ್ ಅವರು ಈ ಮಾಹಿತಿ ನೀಡಿದರು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿತ್ರದುರ್ಗ, ದಾವಣಗೆರೆ, ಧಾರವಾಡ ಸೇರಿದಂತೆ 18 ಜಿಲ್ಲೆಯಲ್ಲಿ ಅಂತರ್ಜಲ ಮಟ್ಟಹೆಚ್ಚಳವಾಗಿದೆ. 125 ತಾಲೂಕುಗಳಲ್ಲಿ 4 ಮೀಟರ್‌ನಷ್ಟು, 39 ತಾಲೂಕುಗಳಲ್ಲಿ 2-4ಮೀಟರ್, 26 ತಾಲೂಕುಗಳಲ್ಲಿ 0-2ರಷ್ಟುಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
Bengaluru Flood: ಕೆರೆ ಮುಚ್ಚಲು ಅನುಮತಿ ಕೊಟ್ಟವರಿಗೆ ಶಿಕ್ಷೆ ಆಗಬೇಕಲ್ಲವೇ?: ಸಚಿವ ಅಶೋಕ್
ಕಳೆದ ಮೂರು ತಿಂಗಳಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ 425 ಟಿಎಂಸಿ ನೀರು ಹರಿದಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ನೀರಿಗಾಗಿ ಸಂಘರ್ಷ ನಡೆಯುವ ಪರಿಸ್ಥಿತಿ ನಿವಾರಣೆಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಕಾವೇರಿ ನದಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಗಳ ನಡುವೆ ಪದೇ ಪದೇ ಕಚ್ಚಾಟ ನಡೆಯುತ್ತದೆ. ಆದರೆ, ಕಳೆದ ಮೂರು ವರ್ಷದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿಲ್ಲ. ಕಳೆದ ಜೂನ್ ತಿಂಗಳಿಂದ ಈವರೆಗೆ 425 ಟಿಎಂಸಿ ನೀರು ಹರಿದು ಹೋಗಿದೆ. 1974ರ ಕಾವೇರಿ ಒಪ್ಪಂದದ ನಂತರ ಈ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗಿರಲಿಲ್ಲ ಎಂದರು.