ನಾನು ಯಾರನ್ನೂ ಕರೆದಿಲ್ಲ. ಬಿಜೆಪಿ ನಾಯಕರೇ ಸ್ವಇಚ್ಛೆಯಿಂದ ನನ್ನ ಸಂಪರ್ಕ ಮಾಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರು ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದ ಡಿವಿ ಸದಾನಂದಗೌಡರನ್ನು ನಾನು ಕರೆದಿಲ್ಲ, ಅವರೇ ಬಂದು ಭೇಟಿ ಮಾಡಿದ್ದಾರೆ ಎಂದರು.
ಹುಬ್ಬಳ್ಳಿ (ಅ.16) : ನಾನು ಯಾರನ್ನೂ ಕರೆದಿಲ್ಲ. ಬಿಜೆಪಿ ನಾಯಕರೇ ಸ್ವಇಚ್ಛೆಯಿಂದ ನನ್ನ ಸಂಪರ್ಕ ಮಾಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರು ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದ ಡಿವಿ ಸದಾನಂದಗೌಡರನ್ನು ನಾನು ಕರೆದಿಲ್ಲ, ಅವರೇ ಬಂದು ಭೇಟಿ ಮಾಡಿದ್ದಾರೆ ಎಂದರು.
ಪಂಚರಾಜ್ಯ ಚುನಾವಣೆ, ಲೋಕಸಭೆ ಚುನಾವಣೆಗೆ 1000 ಕೋಟಿ ಸಂಗ್ರಹ ಮಾಡ್ತೀದಾರೆ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೋಶಿ ಅವರು ಬಹಳ ದೊಡ್ಡ ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಐಟಿ ರೇಡ್ ಇದೆಲ್ಲ ಮೋದಿ ಅವರ ಕೈಯಲ್ಲಿದೆ. ಹೀಗಿರುವಾಗ ಜೋಶಿ ಇಂತಹ ಗಂಭೀರ ಆರೋಪ ಮಾಡಿದ್ದಾರೆ.ಇದು ಅವರಿಗೆ ಶೋಭೆ ತರುವಂತದಲ್ಲ.ಇದು ಬಹಳ ಸೂಕ್ಷ್ಮ ವಿಚಾರವಾಗಿ ಐಟಿ ರೇಡ್ ವೇಳೆ ಸಿಕ್ಕ ಹಣ ಕಾಂಗ್ರೆಸ್‌ನದ್ದು ಅನ್ನೋಕೆ ಸಾಕ್ಷ್ಯ ಏನಿದೆ ಎಂದು ಪ್ರಶ್ನಿಸಿದರು.
ಬಿಜೆಪಿ ತೊರೆಯುವವರೆಲ್ಲರೂ ವೇಸ್ಟ್ ಬಾಡಿಗಳು: ಶಾಸಕ ಬಸನಗೌಡ ಯತ್ನಾಳ
ರಾಜಕೀಯ ವ್ಯವಸ್ಥೆ ಕುಲಗೆಟ್ಟ ಹೋಗಿದೆ. ಕೇಂದ್ರ ಸರ್ಕಾರ ಬಂದ ಮೇಲೆ ಎಷ್ಟು ಐಟಿ ರೇಡ್ ಆಗಿದೆ ಎಂಬುದನ್ನು ಇಲ್ಲಿವರೆಗೆ ಬಹಿರಂಗಪಡಿಸಿಲ್ಲ. ನಾಲ್ಕು ದಿನ ಸುದ್ದಿಯಾಗತ್ತೆ ಮುಂದೆ ಏನು? ಕೊನೆಯ ರಿಸಲ್ಟ್ ಏನ್ ಅದು ಯಾರಿಗೂ ಗೊತ್ತಾಗಲ್ಲ.ಇದನ್ನು ಬಹಿರಂಗ ಮಾಡ್ತೀರಾ? ಚುನಾವಣೆಯಲ್ಲಿ ನೀವು ಯಾವ ಹಣ ಖರ್ಚು ಮಾಡ್ತೀರಿ? ನಿಮಗೆ ಆತ್ಮಸಾಕ್ಷಿ ಇದ್ರೆ ಹೇಳಿ. CBI ತನಿಖೆ ಮಾಡಬೇಕು ಅಂತಾರೆ ಅಂದರೆ ನಿಮ್ಮ ಐಟಿ ಮೇಲೆ ನಿಮಗೆ ನಂಬಿಕೆ ಇಲ್ವಾ? ನೀವೇನು ನೂರಕ್ಕೆ ನೂರರಷ್ಟು ಸತ್ಯಹರಿಶ್ಚಂದ್ರರಾ? ಎಂದು ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿರುವ ಬಿಜೆಪಿಗೆ ನೈತಿಕತೆ ಇಲ್ಲ. ಯಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡ್ತೀರಿ? ನಿಮ್ಮ ರಾಜ್ಯಾಧ್ಯಕ್ಷ ಯಾರು, ವಿಪಕ್ಷ ನಾಯಕ ಯಾರು? ಯಾಕೆ ಪ್ರತಿಭಟನೆ ಮಾಡ್ತೀರಿ? ಕಳೆದ ವರ್ಷ ನಿಮ್ಮ ಸರ್ಕಾರದಲ್ಲಿ ನಡೆದ ಕಮಿಷನ್ ದಂಧೆಗೆ ಪೇ ಸಿಎಮ್ ಅಭಿಯಾನ ಆಯ್ತಲ್ಲ. ಜನ ನಿಮ್ಮನ್ನ ತಿರಸ್ಕಾರ ಮಾಡಿದ್ದಾರೆ. ಇದೀಗ ಯಾರ ನೇತೃತ್ವದಲ್ಲಿ ಯಾವ ನೈತಿಕತೆ ಮೇಲೆ ಪ್ರತಿಭಟನೆ ಮಾಡುತ್ತೀರಿ
ಇದೀಗ ಪ್ರತಿಭಟನೆ ಮಾಡ್ತೀರಿ ಯಾರ ನೇತೃತ್ವದಲ್ಲಿ? ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ನಿಮಗೆ ನೈತಿಕತೆ ಇದೆಯಾ? ಎಂದು ಕಿಡಿಕಾರಿದು.
ಕಾಂಗ್ರೆಸ್ ಚುನಾವಣೆಗೆ ಹಣ ಸಂಗ್ರಹ ಮಾಡ್ತಿದೆ ಎಂದು ಆರೋಪಿಸಿದ್ದೀರಿ ಹಾಗೇ ಅಂದುಕೊಳ್ಳಿ. ಐಟಿ ನಿಮ್ಮ ಕಂಟ್ರೋಲ್ ನಲ್ಲೇ ಇದೆಯಲ್ಲ ತನಿಖೆ ನಡೆಸಿ ಬಹಿರಂಗ ಪಡಿಸಿ. ಇದರಲ್ಲಿ ರಾಜಕಾರಣ ಮಾಡೋದು ಬೇಡ ತನಿಖೆಯಾಗಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಮಳೆಯಾಗದ ಕಾರಣ ವಿದ್ಯುತ್ ಅಭಾವ ಉಂಟಾಗಿರವುದು ಸಹಜ. ಹೆಸ್ಕಾಂ, ಬೆಸ್ಕಾಂ ಬಿಜೆಪಿ ಸರ್ಕಾರದಲ್ಲೂ ಪ್ರಾಫಿಟ್ ಅಲ್ಲಿ ಇಲ್ಲ. ಎಲ್ಲ ಸರ್ಕಾರದಲ್ಲೂ ನಷ್ಟದಲ್ಲಿವೆ. ವಿದ್ಯುತ್ ಕೊರತೆ ಸರಿದೂಗಿಸಲು ಸರ್ಕಾರ ಬೇರೆ ಮಾರ್ಗದಿಂದ ವಿದ್ಯುತ್ ಖರೀದಿ ಮಾಡ್ತಿದೆ. ವಿದ್ಯುತ್ ಪೂರೈಕೆ ಆಗುತ್ತೆ ಎಂದರು.
ರಾಜ್ಯದಲ್ಲಿ ದುರ್ಬಲವಾದ ಎರಡು ಪಕ್ಷಗಳು ಒಂದಾಗಿವೆ; ಬಿಜೆಪಿ-ಜೆಡಿಎಸ್ ಮೈತ್ರಿಗೆ ಶೆಟ್ಟರ್ ವ್ಯಂಗ್ಯ
ಇನ್ನು ಇಸ್ರೇಲ್ ಯುದ್ಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಗಾಂಧೀಜಿ, ವಾಜಪೇಯಿ ಪ್ಯಾಲೆಸ್ತಿನ್ ಗೆ ಬೆಂಬಲ ನೀಡಿದ್ದರು. ಕೇಂದ್ರ ಮತ್ತು ವಿಪಕ್ಷಗಳು ಮೊದಲು ವಿದೇಶಾಂಗ ನೀತಿ ಚೆನ್ನಾಗಿ ಅರಿತುಕೊಳ್ಳಬೇಕು. ಕೇಂದ್ರ ಸರ್ಕಾರ ಒಂದು ಕಡೆ ವಿಪಕ್ಷಗಳು ಮತ್ತೊಂದು ಕಡೆ ಬೆಂಬಲ ನೀಡುತ್ತಿವೆ. ಇದು ಏನು ಸೂಚನೆ ನೀಡುತ್ತದೆ.
ವಿಪಕ್ಷಗಳ ಜೊತೆಗೆ ಪ್ರಧಾನಿ ಸಭೆ ನಡೆಸಿ ದೇಶ ನಿರ್ಣಯ ಪ್ರಕಟ ಮಾಡಬೇಕಿತ್ತು.ಆದರೆ ಮೋದಿ ಇದನ್ನು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.