ಬೆಂಗಳೂರು: ಟೆಕ್ಕಿಗೆ ಕೊರೊನಾ ವೈರಸ್, ಕಂಪನಿಗೆ ರಜೆ ಘೋಷಣೆ

Published : Mar 03, 2020, 04:15 PM ISTUpdated : Mar 04, 2020, 01:09 PM IST
ಬೆಂಗಳೂರು: ಟೆಕ್ಕಿಗೆ ಕೊರೊನಾ ವೈರಸ್, ಕಂಪನಿಗೆ ರಜೆ ಘೋಷಣೆ

ಸಾರಾಂಶ

ಜಗತ್ತನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್‌ ಸೋಂಕು ಕರ್ನಾಟಕಕ್ಕೂ ಪ್ರವೇಶಿಸಿದ್ದು, ಅಪಾಯ ಮನೆ ಬಾಗಿಲಿಗೆ ಬಂದಂತಾಗಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಟೆಕ್ಕಿಗೆ ಕೊರೊನಾ ವೈರಲ್ ತಗುಲಿರುವುದು ಸ್ಪಷ್ಟವಾಗಿದ್ದು, ಇದೀಗ ಟೆಕ್ಕಿ ಇದ್ದ ಕಂಪನಿಗೆ ತಾತ್ಕಾಲಿಕವಾಗಿ ರಜೆ ಘೋಷಿಸಲಾಗಿದೆ. 

ಬೆಂಗಳೂರು, (ಮಾ.03): ಬೆಂಗಳೂರಿನ ಕಂಪನಿಯೊದರಲ್ಲಿ ಉದ್ಯೋಗದಲ್ಲಿರುವ ಟೆಕ್ಕಿ ಕೊರೋನಾ ವೈರಸ್‍ಗೆ ತುತ್ತಾಗಿರುವುದು ಅಧಿಕೃತವಾಗಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಆ ಟೆಕ್ಕಿ ಇದ್ದ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಕೊರೋನಾ ಸೋಂಕಿತ ಟೆಕ್ಕಿ ದುಬೈನಿಂದ ಆಗಮಿಸಿ  ಮಾರತಳ್ಳಿಯ  ಪಿಜಿಯೊಂದರಲ್ಲಿ ನೆಲೆಸಿದ್ದ. ಇದೀಗ ತೆಲಂಗಾಣ ಮೂಲದ ಟೆಕ್ಕಿ ಉಳಿದುಕೊಂಡಿದ್ದ ಪಿಜಿಯ ರೂಮ್‌ಮೇಟ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. 

ಕೊರೋನಾ ಸೋಂಕಿತ ಟೆಕ್ಕಿ ಇದ್ದ ಪಿಜಿ ರೂಂ ಮೇಟ್ ಗೂ ಅನಾರೋಗ್ಯ

ಆತ ನೆಲೆಸಿದ್ದ ರೂಮ್ ನಲ್ಲಿಯೇ ಇದ್ದ ವ್ಯಕ್ತಿಯ ರಕ್ತದ ಮಾದರಿ ತೆಗೆದು ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಆತನಿಗೆ ಚಿಕಿತ್ಸೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಇಂಟೆಲ್ ಕಂಪನಿಗೆ ರಜೆ ಘೋಷಣೆ
ಹೌದು....ಕೊರೋನಾ ಶಂಕಿತ ಟೆಕ್ಕಿ ಬೆಂಗಳೂರಿನ ಇಂಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂಟೆಲ್ ಕಂಪನಿ ತನ್ನ ಉದ್ಯೋಗಿಗಳಿಗೆ ರಜೆ ನೀಡಿದೆ. ಈ  ಬಗ್ಗೆ ಇಂಟೆಲ್, ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದೆ.

2 ದಿನ ಬೆಂಗ್ಳೂರಲ್ಲೇ ಇದ್ದ ಕೊರೋನಾ ಸೋಂಕಿತ ವ್ಯಕ್ತಿ..!

ಅಷ್ಟೇ ಅಲ್ಲದೇ ಕೊರೋನಾ ವೈರಸ್ ಪೀಡಿತ ಚೀನಾ ಮತ್ತು ಇತರ ದೇಶಗಳಿಗೆ ವ್ಯವಹಾರ ಸಂಬಂಧಿತ ಪ್ರಯಾಣವನ್ನು ಈ ಕೂಡಲೇ ಮೊಟಕುಗೊಳಿಸುಂತೆ ಇಂಟೆಲ್ ಕಂಪನಿ ತಮ್ಮ ನೌಕರರಿಗೆ ತಿಳಿಸಿದೆ.

ಕೊರೋನಾ ಶಂಕಿತ ಟೆಕ್ಕಿಯಿಂದಾಗಿ ಬೆಂಗಳೂರಿನಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದ್ದು, ಟೆಕ್ಕಿ ಬಂದ ಕ್ಯಾಬ್‌ಗೆ ತೀವ್ರ ಶೋಧ ನಡೆದಿದೆ. ಅಷ್ಟೇ ಅಲ್ಲದೇ ಎರಡು ದಿನಗಳ ಕಾಲ ಟೆಕ್ಕಿ ಸಂಪರ್ಕದಲ್ಲಿದ್ದ ಎಲ್ಲಾ ಜನರನ್ನೂ ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲರ ಮೇಲೆಯೂ 14 ದಿನಗಳ ಕಾಲ ನಿಗಾ ಇಡಲಾಗಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!