
ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಾಗಲೇ ಕೋಟಿ ಕೋಟಿ ದರೋಡೆ ಪ್ರಕರಣದಲ್ಲಿ ಇದೀಗ ಹಲವು ಅನುಮಾನಗಳು ವ್ಯಕ್ತವಾಗಿದೆ. ಹಣ ತುಂಬಿಕೊಂಡಿದ್ದ ಸಿಎಂಎಸ್ ಚಾಲಕನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ 7 ಕೋಟಿ 11ಲಕ್ಷ ರಾಬರಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಶಂಕಿತರ ಫೋಟೋ ಬಿಡುಗಡೆ ಮಾಡಿದೆ. ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳ ಪತ್ತೆಗೆ ಖಾಕಿ ಹೈ ಅಲರ್ಟ್ ಆಗಿದ್ದು, ಪ್ರಾಥಮಿಕ ಮಾಹಿತಿ ಅನುನಾರ ಒಟ್ಟು 6 ಮಂದಿ ಆರೋಪಿಗಳ ಪೋಟೋ ಬಿಡುಗಡೆ ಮಾಡಿದೆ. ಹಳೆ ಆರೋಪಿಗಳು ಹಾಗು ಕೆಲ ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದ್ದು, ನಾಕ ಬಂದಿಯಲ್ಲಿ ಈ ಫೋಟೋ ದಲ್ಲಿರೋ ವ್ಯಕ್ತಿಗಳ ಫೋಟೋ ಮ್ಯಾಚ್ ಮಾಡುವಂತೆ ಎಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ
ಬೆಚ್ಚಿಬೀಳಿಸುವ ದರೋಡೆ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ನಾಕಾಬಂಧಿ ಹಾಕಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಮತ್ತು ಡಿಸಿಪಿಯಿಂದ ತನಿಖೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಸಿಎಂಎಸ್ ಸಿಬ್ಬಂದಿಯ ಮೇಲೂ ಅನುಮಾನವಿದೆ. ಘಟನೆ ನಡೆದ ಬಳಿಕ ತಡವಾಗಿ ಮಾಹಿತಿ ನೀಡಿದ್ದಾರೆ. ಅವ್ರ ಬಳಿ ಇದ್ದ ಗನ್ ಯಾಕೆ ಬಳಕೆ ಮಾಡಿಲ್ಲ ಎನ್ನುವ ಪ್ರಶ್ನೆ ಇದೆ. ಈ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಸದ್ಯ ಚಾಲಕ, ಇಬ್ಬರು ಗನ್ ಮೆನ್ ಗಳು ಹಾಗೂ ಓರ್ವ ಹಣ ಡೆಪಾಸಿಟ್ ಮಾಡುವ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಸಿಬ್ಬಂದಿಯನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂದಿಸ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸಿಂಮತ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಪಕ್ಕಾ ಪ್ಲಾನ್ ಮಾಡಿ ಈ ದರೋಡೆ ಮಾಡಲಾಗಿದೆ. ಅಶೋಕ ಪಿಲ್ಲರ್ ನಿಂದ ಸಿದ್ಧಾಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಸಿಸಿಟಿವಿ ಇಲ್ಲದೇ ಇರುವ ಜಾಗದಲ್ಲೇ ಎಟಿಎಂ ವಾಹನ ನಿಲ್ಲಿಸಿರುವ ಚಾಲಕ, ಅದಾದ ನಂತರ ಕಾರಿನಲ್ಲಿ ಬಂದ ಮೂವರು ರಾಬರ್ಸ್ ಜೊತೆಗೆ ಮಾತುಕತೆ. ಅದಾದ ನಂತರ ಎಟಿಎಂ ವಾಹನ zen ಕಾರ್ ಫಾಲೋ ಮಾಡಿದೆ. ಡೈರಿ ಸರ್ಕಲ್ ಫ್ಲೈ ಓವರ್ ನಲ್ಲಿ ರಾಬರಿ ಮಾಡಲಾಗಿದ್ದು, ಇಲ್ಲಿ ಜನರ ಓಡಾಟ ಇರೋದಿಲ್ಲ. ವಾಹನಗಳು ವೇಗವಾಗಿ ತೆರಳ್ತಾ ಇರುತ್ತೆ. ವಾಹನ ನಿಂತರು ಅನುಮಾನ ಬರೋದಿಲ್ಲ. ಅಲ್ಲದೇ ಸಿಸಿಟಿವಿ ದೃಶ್ಯ ಕೂಡ ಇಲ್ಲಿ ಇಲ್ಲ. ಚಾಲಕ ಓಡಿಹೋಗಲು ಇಲ್ಲಿಂದ ಕಷ್ಟ. ಹಾಗಾಗಿಯೇ ಆರೋಪಿಗಳು ಡೈರಿ ಸರ್ಕಲ್ ಫ್ಲೈ ಓವರ್ ಫಿಕ್ಸ್ ಮಾಡಿಕೊಂಡಿದ್ದರು. ಇನ್ನು ಘಟನೆ ನಡೆದು 45 ರಿಂದ 1 ಗಂಟೆ ತಡವಾಗಿ ಪೊಲೀಸರಿಗೆ ಮಾಹಿತಿ ತಲುಪಿಸಿರುವುದು ಕೂಡ ಹಲವು ಅನುಮಾನ ಹುಟ್ಟಿಸಿದೆ.
ಪ್ರತ್ಯಕ್ಷದರ್ಶಿ ಪ್ರತಿಮೆ ವ್ಯಾಪಾರಿ ಸಂಜಯ್ ಹೇಳಿಕೆ ಪ್ರಕಾರ, Zen ಕಾರ್ ನಲ್ಲಿ ಮೊದಲಿಗೆ ಮೂರು ಜನರು ಬಂದಿದ್ದರು. ಎಟಿಮ್ ವಾಹನ ಅಡ್ಡಗಟ್ಟಿದ್ದರು. ಎಟಿಮ್ ವಾಹನದಲ್ಲಿ ಇದ್ದವರ ಜೊತೆ ಮಾತಾಡ್ತಿದ್ದರು. zen ಕಾರಿನಿಂದ ಮೂವರು ಇಳಿದರು. ಅಶೋಕ ಪಿಲ್ಲರ್ ಮಾರ್ಗವಾಗಿ ಎಟಿಮ್ ವೆಹಿಕಲ್ ಬರ್ತಿತ್ತು. ಎಟಿಎಂ ವಾಹನ zen ಕಾರ್ ಫಾಲೋ ಮಾಡಿಕೊಂಡು ಹೋಯ್ತು ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಪೂರ್ವ(ಇಂದಿರಾನಗರ) RTO ಕಚೇರಿಯಲ್ಲಿ ನೊಂದಣಿ. ಜನವರಿ 2018 ರಲ್ಲಿ ಈ ಕಾರು ನೊಂದಣಿಯಾಗಿದೆ. ದರೋಡೆ ಮಾಡೋಕೆ ಅಂತಾನೆ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಲಾಗಿದೆ. ದರೋಡೆ ಮಾಡಿ ಪರಾರಿಯಾಗುವಾಗ ಸಿಕ್ಕಿಕೊಳ್ಳಬಾರದೆಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾರೆ. ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ಅನ್ನು ಇನ್ನೋವಾ ಕಾರಿಗೆ ಬಳಕೆ ಮಾಡಲಾಗಿದೆ. ಪಿ.ಬಿ. ಗಂಗಾಧರನ್ ಅವರ ಹೆಸರಿನಲ್ಲಿ ಕಾರು ನೊಂದಣಿಯಾಗಿದೆ. ಬೆಂಗಳೂರಿನ ತಿಪ್ಪಸಂದ್ರ ವಿಳಾಸದಲ್ಲಿ ನೊಂದಣಿಯಾಗಿರುವ ಕಾರನ್ನು ಗರುಡಾ ಆಟೋ ಕ್ರಾಫ್ಟ್ ಲಿಮಿಟೆಡ್ ಶೋರೂಂನಿಂದ ಖರೀದಿ ಮಾಡಲಾಗಿದೆ. ಸ್ವಿಫ್ಟ್ VDI ಮಾಡೆಲ್ ನ ಸ್ವಿಫ್ಟ್ ಕಾರು. ಸಿಲ್ಕೀ ಬಣ್ಣದ ಭಾರತ್ ಸ್ಟೇಜ್ 4 ರ ಕಾರು. ಕಾರ್ ಮೇಲೆ ಗೌರ್ಮೆಂಟ್ ಆಫ್ ಇಂಡಿಯಾ ಅಂತ ಬರೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ