
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದೆ. ಸಿಎಂಎಸ್ ಕಂಪನಿಯ ವ್ಯಾನ್ ಅಡ್ಡಗಟ್ಟಿ ಹಣ ದರೋಡೆ ನಡೆದಿದ್ದು, ಈ ದರೋಡೆಯಿಂದ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಸುಮಾರು 7 ಕೋಟಿ 11 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ದರೋಡೆಕೋರರು ಪರಾರಿಯಾಗಿರುವ ಘಟನೆ ಜಯನಗರದ ಅಶೋಕ ಪಿಲ್ಲರ್ ಬಳಿ ನಡೆದಿದೆ.
ಮಾಹಿತಿಯ ಪ್ರಕಾರ, ಜೆಪಿ ನಗರದ ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಹಣವನ್ನು ತರಲಾಗುತ್ತಿದ್ದ ಸಿಎಂಎಸ್ ಕಂಪನಿಯ ಎಟಿಎಂ ಕ್ಯಾಷ್ ರಿಫಿಲ್ ವ್ಯಾನ್ ಅನ್ನು ದರೋಡೆಕೋರರು ಟಾರ್ಗೆಟ್ ಮಾಡಿಕೊಂಡಿದ್ದರು. ಶುಭ್ರ ಬಣ್ಣದ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಇನ್ನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರ ತಂಡ ಮಾರ್ಗದಲ್ಲೇ ಸಿಎಂಎಸ್ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದರು.
ದರೋಡೆಕೋರರು ತಮ್ಮನ್ನು ಸೆಂಟ್ರಲ್ ಗೌರ್ನಮೆಂಟ್ ಟ್ಯಾಕ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ವಾಹನ ಸಾಗಾಟಕ್ಕೆ ಸಂಬಂಧಿಸಿದ ಸೆಂಟ್ರಲ್ ಗೋವೆರ್ಮೆಂಟ್ ಟ್ಯಾಕ್ಸ್ ಆಫೀಸರ್ಸ್, ಡಾಕ್ಯುಮೆಂಟ್ ಪರಿಶೀಲನೆ ಮಾಡಬೇಕು ಎಂದು ಸಿಬ್ಬಂದಿಯನ್ನು ನಂಬಿಸಿದರು. ದರೋಡೆಕೋರರ ಮೇಲೆ ಶಂಕೆ ಬಾರದ ಹಿನ್ನೆಲೆಯಲ್ಲಿ ಸಿಎಂಎಸ್ ಸಿಬ್ಬಂದಿ ವಾಹನವನ್ನು ನಿಲ್ಲಿಸಿದರು.
ಸ್ಥಳದಲ್ಲಿದ್ದ 7 ಕೋಟಿ ರೂಪಾಯಿ ಮೊತ್ತದ ನಗದನ್ನು ತಮ್ಮ ವಶಕ್ಕೆ ಪಡೆದ ದರೋಡೆಕೋರರು, ಅಲ್ಲಿಂದಲೇ ಸಿಎಂಎಸ್ ಸಿಬ್ಬಂದಿಯನ್ನು ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಡೈರಿ ಸರ್ಕಲ್ ಕಡೆಗೆ ಕರೆದೊಯ್ದರು. ಅಲ್ಲಿ ಸಿಬ್ಬಂದಿಯನ್ನು ಇಳಿಸಿ, ನಗದಿನ ಸಮೇತ ಪರಾರಿಯಾದರು. ಸಂಪೂರ್ಣ ಘಟನೆಯು ಕೆಲವೇ ನಿಮಿಷಗಳಲ್ಲಿ ನಡೆದಿದ್ದು, ದರೋಡೆಕೋರರ ಫ್ಲಾನ್ ಮಾಡಿಯೇ ಇದನ್ನು ಮಾಡಿದ್ದಾರೆಂದು ಸ್ಪಷ್ಟವಾಗಿದೆ.
ಸದ್ಯ ದಕ್ಷಿಣ ವಿಭಾಗದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರದ ಎಲ್ಲಾ ಕಡೆ ಬಲೆ ಬೀಸಿದ್ದಾರೆ. ಸಿಸಿಟಿವಿ ಫೂಟೇಜ್‌ಗಳು, ವಾಹನದ ವಿವರಗಳು ಹಾಗೂ ಸಂಚಲನ ಮಾರ್ಗಗಳ ಪರಿಶೀಲನೆ ನಡೆಯುತ್ತಿದೆ. ನಗರದಲ್ಲಿ ಈಗಾಗಲೇ ಅಲರ್ಟ್ ಜಾರಿಗೆ ತಂದಿರುವ ಪೊಲೀಸರು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಟಿಎಂಗಳಿಗೆ ಹಣ ಸಾಗಾಟ ಮಾಡುವ ಕಂಪನಿಯ ವಾಹನವೇ ಗುರಿಯಾಗಿರುವುದರಿಂದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಹೆಚ್ಚು ಸಂಚಾರ ಇರುವ ಪ್ರದೇಶದಲ್ಲೇ ನಡೆದಿರುವ ದರೋಡೆ ನಗರದಲ್ಲಿ ಭದ್ರತಾ ವ್ಯವಸ್ಥೆಗಳ ಮೇಲೂ ಚರ್ಚೆ ಹುಟ್ಟಿಸಿದೆ.
ಮಧ್ಯಾಹ್ನದ ಸಮಯದಲ್ಲಿ ಎಟಿಂಎ ಗೆ ಹಣ ಹಾಕೊ ವಾಹನದಿಂದ ರಾಬರಿ ಮಾಡಲಾಗಿದೆ. ಒಟ್ಟು 7 ಕೋಟಿ 11 ಲಕ್ಷ ರಾಬರಿ ಮಾಡಿದ ಗ್ಯಾಂಗ್. ಸೌತ್ ಎಂಡ್ ಸರ್ಕಲ್ ಬಳಿ ಎಟಿಎಂ ಗೆ ಹಣ ಹಾಕಲು ಮುಂದಾಗಿದ್ದ ಸಿಬ್ಬಂದಿ, ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಏಳೆಂಟು ಜನರ ಗ್ಯಾಂಗ್. ನಾವು ಆರ್ ಬಿ ಐ ನವರು ಎಂದು ಹೆದರಿಸಿದ್ದಾರೆ. ಗನ್ ಮ್ಯಾನ್ ಸೇರಿದಂತೆ ಉಳಿದವರನ್ನೆಲ್ಲ ಅಲ್ಲೇ ಇಳಿಸಿದ್ದಾರೆ. ಡ್ರೈವರ್ ನನ್ನ ಡೈರಿ ಸರ್ಕಲ್ ಕಡೆಗೆ ಕರೆತಂದಿದ್ದಾರೆ. ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ವಾಹನ ನಿಲ್ಲಿಸಿದ್ದಾರೆ. ಅಲ್ಲಿಂದ ಹಣ ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಸುದ್ದಗುಂಟೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, CMS ಸಿಬ್ಬಂದಿ ಹಾಗೂ ಗನ್ ಮ್ಯಾನ್ ಸಿಬ್ಬಂದಿಗಳ ಫೋನ್ ಸೀಜ್ ಮಾಡಿದ್ದಾರೆ.
ಸೊಕೋ ಹಾಗೂ ಶ್ವಾನ ದಳದಿಂದ ಪರಿಶೀಲನೆ ನಡೆದಿದೆ. ಮೇಲ್ನೋಟಕ್ಕೆ ಸಿಎಂಎಸ್ ಚಾಲಕ, ಸಿಬ್ಬಂದಿ ಮೇಲೂ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಚಾಲಕನ ಪೂರ್ವಾಪರ ವಿಚಾರಣೆ ಮಾಡ್ತಿದ್ದಾರೆ. ಇದರ ಜೊತೆಗೆ ಸಿದ್ದಾಪುರ ಹಾಗೂ ಆಡುಗೋಡಿ ಪೊಲೀಸರು ಕೂಡ ಸ್ಥಳದಲ್ಲಿ ಪರಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯವಳಿಗಳನ್ನು ಚೆಕ್ ಮಾಡುತ್ತಿದ್ದಾರೆ. ಹಣದೊಂದಿಗೆ ಎಸ್ಕೇಪ್ ಆಗಿರೋ ಇನೋವಾ ಕಾರ್ ಮೂಮ್ಮೆಂಟ್ ಬಗ್ಗೆ ಎಲ್ಲಾ ವಿಭಾಗ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಟ್ರಾಫಿಕ್ ಪೊಲೀಸ್ರಿಗೂ ಮಾಹಿತಿ ನೀಡಿ ವಾಹನದ ಸಂಖ್ಯೆ ಹಾಗು ಕಾರಿನ ಬಣ್ಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ದಕ್ಷಿಣ ವಿಭಾಗ ,ಆಗ್ನೇಯ ವಿಭಾಗ ,ಎಲೆಕ್ಟ್ರಾನಿಕ್ ಸಿಟಿ ವಿಭಾಗ , ವೈಟ್ ಫೀಲ್ಡ್ ವಿಭಾಗ ಪೊಲೀಸರು ಸೇರಿ ಸಿಸಿಬಿ ತಂಡದಿಂದ ರಾಬರ್ಸ್ ಗಾಗಿ ಹುಡುಕಾಟ ನಡೆಯುತ್ತಿದೆ.
ರಾಬರಿ ಮಾಡಿರುವ ಗ್ಯಾಂಗ್ ಹೊಸೂರು ಕಡೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾಬರ್ಸ್ ಗಾಗಿ ಸಿಸಿಬಿ ತಂಡ ಕೂಡ ಹುಡುಕಾಟ ನಡೆಸುತ್ತಿದ್ದು, ಹೊಸೂರು ರಸ್ತೆಯ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗುತ್ತಿದೆ.
ಮಧ್ಯಾಹ್ನ 1.15 ರ ಸುಮಾರಿಗೆ ಅಶೋಕ ಪಿಲ್ಲರ್ ಬಳಿ ಈ ಘಟನೆ ನಡೆದಿದೆ. ಅಶೋಕ್ ಪಿಲ್ಲರ್ ಸಿದ್ಧಾಪುರ ಠಾಣಾ ವ್ಯಾಪ್ತಿಗೆ ಬರುತ್ತದೆ. ಎಟಿಎಂ ವಾಹನ ಪತ್ತೆಯಾಗಿದ್ದ ಡೈರಿ ಸರ್ಕಲ್ ಬಳಿ. ಇದು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಆ ಭಾಗದ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.ಹೊಸೂರು ರಸ್ತೆಗೆ ಅಂಟಿಕೊಂಡಂತೆ ಇರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಯ, ಪ್ರತಿಯೊಂದು ವಾಹನ ಚೆಕ್ ಮಾಡುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ