
ಬೆಂಗಳೂರು(ಏ.09): ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಆತ್ಮ ನಿರ್ಭರ ಭಾರತ(India) ಯೋಜನೆ ಅಡಿ ಸ್ವದೇಶಿ ಉತ್ಪನ್ನಕ್ಕೆ ಆದ್ಯತೆ ನೀಡಿದ್ದು ದೇಶದ ರಕ್ಷಣಾ ಇಲಾಖೆಗೆ ಬೇಕಾದ ಶಸ್ತ್ರಾಸ್ತ್ರ, ಯುದ್ಧೋಪಕರಣಗಳ ಪೈಕಿ ಶೇ.60 ರಷ್ಟನ್ನು ನಾವೇ ತಯಾರು ಮಾಡಲು ಸಾಧ್ಯವಾಗಿದೆ. ಇದರಲ್ಲಿ ಬೆಂಗಳೂರಿನ(Bengaluru) ಪಾಲು ಶೇ.40 ರಷ್ಟುಇರುವುದು ವಿಶೇಷವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಂತಸ ವ್ಯಕ್ತಪಡಿಸಿದರು.
ಸ್ವದೇಶಿ ಜಾಗರಣ ಮಂಚ್‌ನಿಂದ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಏರ್ಪಡಿಸಿರುವ ‘ಸ್ವದೇಶಿ ಮೇಳ’ದ ಮೂರನೇ ದಿನವಾದ ಶುಕ್ರವಾರ ಮೇಳಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.
ರಕ್ಷಣಾ ಇಲಾಖೆಗೆ(Department of Defense) ಬೇಕಾದ ಶಸ್ತ್ರಾಸ್ತ್ರ(Arms), ಯುದ್ಧೋಪಕರಣಗಳಲ್ಲಿ ಶೇ.60 ರಷ್ಟನ್ನು ದೇಶಿಯವಾಗಿಯೇ ತಯಾರು ಮಾಡಲಾಗುತ್ತಿದೆ. ತಯಾರಿಕಾ ವಲಯದಲ್ಲಿ ಮೇಕ್ ಇನ್ ಇಂಡಿಯಾ(Make in India) ದೊಡ್ಡ ಬದಲಾವಣೆ ತಂದಿದೆ. ಮುದ್ರಾ ಯೋಜನೆ ಮೂಲಕ ಲಕ್ಷಾಂತರ ಯುವಕರಿಗೆ ಸಾಲ ನೀಡಲಾಗುತ್ತಿದೆ ಎಂದು ವಿವರಿಸಿದರು.
ಉದ್ದಿಮೆಗೆ ಗಾಳ ಕೀಳು ಅಭಿರುಚಿ: ನೆರೆ ರಾಜ್ಯಗಳ ಮೇಲೆ ಬೊಮ್ಮಾಯಿ ಗರಂ
ಸ್ವದೇಶಿ ವಸ್ತುಗಳ ತಯಾರಿಕೆಗೆ ಸಂಬಂಧಿಸಿದಂತೆ ದೇಶದಲ್ಲಿ ಅಂತರ್ಗತ ಶಕ್ತಿ ಇದ್ದು ಇದನ್ನು ಉಳಿಸಿ, ಬೆಳೆಸಬೇಕು. ಸ್ವದೇಶಿ ವಸ್ತುಗಳನ್ನು ಬಳಸಬೇಕು. ಮೇಳ ಆಯೋಜಿಸುವ ಮೂಲಕ ಸ್ವದೇಶಿ ಜಾಗರಣ ಮಂಚ್‌ನವರು ಬಹಳ ಅದ್ಭುತವಾದ ಕೆಲಸ ಮಾಡಿದ್ದಾರೆ. ಇಂತಹ ಮೇಳವನ್ನು ಬೆಂಗಳೂರು ಸೇರಿದಂತೆ ಎಲ್ಲಡೆ ಆಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಅವರು ಮಳಿಗೆಗಳಿಗೆ ಭೇಟಿ ನೀಡಿ ಸ್ವದೇಶಿ ವಸ್ತುಗಳನ್ನು ವೀಕ್ಷಿಸಿದರು. ಮೂರು ಸಾವಿರ ರು. ನೀಡಿ ಶಾಲು ಖರೀದಿಸಿದರು.
ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ಶಾಸಕ ರವಿ ಸುಬ್ರಹ್ಮಣ್ಯ, ಸ್ವದೇಶಿ ಜಾಗರಣ ಮಂಚ್ ಕ್ಷೇತ್ರೀಯ ಸಂಘಟಕ ಕೆ.ಜಗದೀಶ ಮತ್ತಿತರರು ಹಾಜರಿದ್ದರು.
ಜೀವನಶೈಲಿ ಬದಲಾದರೆ ಒತ್ತಡ ನಿವಾರಣೆ
ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ಒತ್ತಡ ನಿವಾರಣೆಯಾಗುತ್ತದೆ. ಅಡುಗೆ ಮನೆಯಲ್ಲಿ ದೇಶೀಯ ವಸ್ತುಗಳನ್ನು ಉಪಯೋಗಿಸಬೇಕು. ರಾಸಾಯನಿಕಗಳನ್ನು ಬಳಕೆ ಮಾಡಬಾರದು ಎಂದು ರಾಜ್ಯ ವಿಜ್ಞಾನ ಪರಿಷತ್ ಸಂಯೋಜಕಿ ಮಂಜುಳಾ ಭೀಮರಾವ್ ಸಲಹೆ ನೀಡಿದರು.
ಶುಕ್ರವಾರ ಬೆಳಿಗ್ಗೆ ಸ್ವದೇಶಿ ಮೇಳದಲ್ಲಿ ಏರ್ಪಡಿಸಿದ್ದ ‘ನಿತ್ಯ ಬಳಕೆ ವಸ್ತು ತಯಾರಿಕಾ ಶಿಬಿರ’ದಲ್ಲಿ ಮಾತನಾಡಿದ ಅವರು, ಋುತುಮಾನಕ್ಕೆ ತಕ್ಕಂತೆ ಪದಾರ್ಥಗಳನ್ನು ಬಳಸಿದರೆ ಆರೋಗ್ಯವೃದ್ಧಿಗೆ ಸಹಾಯಕವಾಗುತ್ತದೆ. ನಮ್ಮಲ್ಲಿರುವ ದೇಶೀಯ ವಸ್ತುಗಳನ್ನು ಬಳಸಿಕೊಂಡು ಪದಾರ್ಥಗಳನ್ನು ತಯಾರು ಮಾಡಬೇಕು. ಆರೋಗ್ಯಕ್ಕೆ ಮಾರಕವಾದ ರಾಸಾಯನಿಕಗಳನ್ನು ಬಳಸಬಾರದು ಎಂದು ಮನವಿ ಮಾಡಿದರು.
ಸರ್ಕಾರ ಮಾಡುವ ಕೆಲಸ ಮಾಡುತ್ತಿರುವ ಶಕ್ತಿಧಾಮ: ಸಿಎಂ ಬೊಮ್ಮಾಯಿ
ದೇಶೀಯ ಕ್ರೀಡೆ ಆಯೋಜನೆ
ಶುಕ್ರವಾರ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವದೇಶಿ ಮೇಳದಲ್ಲಿ ದೇಶೀಯ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಸ್ವದೇಶಿ ಜಾಗರಣ ಮಂಚ್ ಕ್ಷೇತ್ರೀಯ ಸಂಘಟಕ ಕೆ.ಜಗದೀಶ ಅವರು ‘ಉದ್ಯೋಗ ಆಧಾರಿತ ವಿಕಾಸ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ರಾತ್ರಿ ದಾಕ್ಷಾಯಿಣಿ ಭಟ್ ಮತ್ತು ತಂಡದಿಂದ ರಕ್ತಧ್ವಜ ನಾಟಕ ಪ್ರದರ್ಶಿಸಲಾಯಿತು.
ಇಂದಿನ ಕಾರ್ಯಕ್ರಮ
ಶನಿವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಮೈಸೂರಿನ ಆಯುರ್ವೇದ ವೈದ್ಯ ಅರುಣ್‌ಕುಮಾರ್ ಅವರು ಆಯುರ್ವೇದ ಶಿಬಿರ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ವೈದ್ಯ ಡಿ.ಪಿ.ರಮೇಶ್ ಅವರು ಪಂಚಗವ್ಯ ಚಿಕಿತ್ಸಾ ಶಿಬಿರದಲ್ಲಿ ಮಾಹಿತಿ ನೀಡಲಿದ್ದಾರೆ. ಸಂಜೆ 5.45ರಿಂದ 6.45ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ‘ನಿತ್ಯ ಜೀವನದಲ್ಲಿ ಸ್ವದೇಶಿ’ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 7.15ರಿಂದ 9ರವರೆಗೆ ಲಯ ಲಹರಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಏರ್ಪಡಿಸಿರುವ ಸ್ವದೇಶಿ ಮೇಳದ ಮೂರನೇ ದಿನವಾದ ಶುಕ್ರವಾರ ಮೇಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ