ಏಪ್ರಿಲ್ 21ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ

By Suvarna NewsFirst Published Apr 8, 2022, 6:16 PM IST
Highlights

* ಏಪ್ರಿಲ್ 21ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ
* ಕರ್ನಾಟಕದಲ್ಲಿ ಕೃಷಿ ಕಾಯ್ದೆಗಳನ್ನು ಶಾಸನ ಬದ್ಧವಾಗಿ ವಾಪಸ್ ಪಡೆಯುವಂತೆ ಒತ್ತಾಯ
* ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್  ಹೇಳಿಕೆ

ಬೆಳಗಾವಿ, (ಏ.08): ಕರ್ನಾಟಕದಲ್ಲಿ ಕೃಷಿ ಕಾಯ್ದೆಗಳನ್ನು ಶಾಸನ ಬದ್ಧವಾಗಿ ವಾಪಸ್ ಪಡೆಯುವಂತೆ ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದೇ ಏಪ್ರಿಲ್ 21ರಂದು ಬೆಂಗಳೂರಿನ ಬಸವಣಗುಡಿ ನ್ಯಾಷನಲ್‍ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ನಡೆಯಲಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಇಂದು(ಶುಕ್ರವಾರ) ಬೆಳಗಾವಿಯ ಸಾಹಿತ್ಯ ಭವನದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ, ಜಾನುವಾರು ಹತ್ಯೆ ಕಾಯ್ದೆ, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಯಾಗಿದ್ದು, ಇವುಗಳನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.

Farm Laws Withdrawn: ಅಷ್ಟಕ್ಕೂ ಮೋದಿ ಹಿಂಪಡೆದ ಕೃಷಿ ಕಾಯ್ದೆಯಲ್ಲಿ ಏನಿತ್ತು? ರೈತರಲ್ಲಿ ಆತಂಕ ಯಾಕಿತ್ತು?

 ಏಪ್ರಿಲ್ 21ರಂದು ಬಸವಣಗುಡಿ ನ್ಯಾಷನಲ್‍ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ನಡೆಯಲಿದೆ. ಇದರ ಪ್ರಮುಖ ಉದ್ದೇಶ ಭಾರತ ಸರ್ಕಾರ ತಂದಂತಹ ಕೃಷಿ ಕಾಯ್ದೆಗಳನ್ನು ಶಾಸನ ಬದ್ಧವಾಗಿ ವಾಪಸ್ ಪಡೆದಾಯಿತು. ಕರ್ನಾಟಕದಲ್ಲಿ ಆ ಕಾಯ್ದೆಗಳನ್ನು ತಳಮಟ್ಟದಲ್ಲಿ ಸುಧಾರಣೆ ಮಾಡಲು ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ, ಜಾನುವಾರು ಹತ್ಯೆ ಕಾಯ್ದೆ, ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಾಗಿದೆ. ಇದನ್ನು ವಾಪಾಸ್ ಪಡೆಯಬೇಕೆಂದು ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಕುರಿತು ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಕೃಷಿ ಕಾಯ್ದೆಯನ್ನು ಆದಷ್ಟು ಬೇಗನೆ ವಾಪಾಸ್ ಪಡೆಯದಿದ್ದರೆ ಸಮಾವೇಶದಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿರು.

ಅಧಿವೇಶನ ಸಂದರ್ಭದಲ್ಲಿ ಇಡೀ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಕೃಷಿ ಮಾರುಕಟ್ಟೆಯ ಕಾಯ್ದೆಯ ತಿದ್ದುಪಡಿ ಅಪಾಯ ಯಾವ ರೀತಿ ಆಗುತ್ತದೆ ಎಂಬ ವಿಷಯ ಈಗಾಗಲೇ ತಿಳಿಸಲಾಗಿದೆ. ಕೃಷಿ ಮಾರುಕಟ್ಟೆಯು ಸುಮಾರು 90ರಷ್ಟು ಕಳೆದುಹೋಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಳ್ಳಲಾಗಿದೆ. ಆದರೂ ಕೂಡ ಸರ್ಕಾರದ ಚಟುವಟಿಕೆಗಳು ಇದರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದು, ನಾಗರಿಕರಾದ ನಾವು ಹೇಗೆ ಸುಮ್ಮನೆ ಇರಬೇಕು ಎಂದು ಪ್ರಶ್ನಿಸಿದರು.

ವಾಪಸ್ ಪಡೆದ ಮೋದಿ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಒಂದು ವರ್ಷದ ಬಳಿಕ ಆ ಮೂರು ಕೃಷಿ ಮಸೂದೆಗಳನ್ನು  ವಾಪಸ್(Repealed Farm Laws) ಪಡೆದುಕೊಂಡಿದ್ದಾರೆ.  ವಿಪಕ್ಷ ಮತ್ತು ರೈತ (Farmers) ಸಂಘಟನೆಗಳ  ಪ್ರತಿಭಟನೆಯ ನಡುವೆ ಲೋಕಸಭೆಯ ಮುಂಗಾರು ಅಧಿವೇಶನವು ಮೂರು ಕೃಷಿ ಕ್ಷೇತ್ರದ ಮಸೂದೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿತ್ತು.  ಕಳೆದ ಸೆ.14ರಂದು ಕೃಷಿ ಮಸೂದೆ (farm bills 2020) ಲೋಕಸಭೆಯಲ್ಲಿ ಮಂಡನೆಯಾಗಿತ್ತು, 17ಕ್ಕೆ ಮಸೂದೆಗೆ ಅಂಗೀಕಾರ ಲಭಿಸಿತ್ತು. ಸೆ.20ಕ್ಕೆ ರಾಜ್ಯಸಭೆಯಲ್ಲಿಯೂ ಅಂಗೀಕಾರ ಲಭಿಸಿ, 27ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಮೂರು ಮಸೂದೆಗಳಿಗೂ ಅಂಕಿತ ಹಾಕಿದ್ದರು. ಆ ಮೂಲಕ ಈ ಮಸೂದೆಗಳು ಕಾಯ್ದೆಗಳಾಗಿ ಚಾಲ್ತಿಗೆ ಬಂದ್ದವು.

ರೈತರ ಆತಂಕ ಏನಿತ್ತು?
* ಹೊಸ ಕೃಷಿ ಕಾಯ್ದೆಗಳ ಸದ್ಯ ಜಾರಿಯಲ್ಲಿರುವ ಕನಿಷ್ಠ ಬೆಂಬಲ ಬೆಲ ವ್ಯವಸ್ಥೆಯನ್ನು ಕಿತ್ತು ಹಾಕುತ್ತವೆ.
* ಸ್ವಾಮಿನಾಥನ್ ವರದಿ ಉಲ್ಲೇಖ ಇಲ್ಲ
* ಈ ಕಾಯ್ದೆಗಳ ನಿಯಮಗಳ ಅನ್ವಯ ಮುಂದೊಂದು ದಿನ ಕಾರ್ಪೋರೇಟ್ ಕಂಪನಿಗಳು ರೈತರ ಮೇಲೆ ಸರ್ವಾಧಿಯಾಗುತ್ತವೆ.
* ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ.
* ಸಾಲ ನೀಡುತ್ತಿರುವ ಕಮಿಷನ್ ಏಜೆಂಟ್‌ಗಳು ಸಹ ಮರೆಯಾಗುತ್ತಾರೆ ಎಂಬುದು ರೈತರ ಆತಂಕವಾಗಿತ್ತು.

click me!