
ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್‌ಗಳು ಪ್ರಯಾಣಿಕರನ್ನು ಸುಲಿಯಲು ಹೊಸ ದಾರಿ ಕಂಡುಕೊಂಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕರೊಬ್ಬರಿಗೆ ವಿಚಿತ್ರ ಅನುಭವವಾಗಿದೆ. ಆ್ಯಪ್‌ನಲ್ಲಿ ₹285 ಎಂದು ತೋರಿಸಿದ ಟ್ರಿಪ್‌ಗೆ, ಡ್ರೈವರ್ ತನ್ನ ಪರ್ಸನಲ್ ಫೋನ್‌ನಲ್ಲಿ ₹5,950 ಬಿಲ್ ತೋರಿಸಿ ಹಣಕ್ಕೆ ಪೀಡಿಸಿದ್ದಾನೆ. ಈ ಘಟನೆಯನ್ನು ಪ್ರಯಾಣಿಕರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲ ಚಾಲಕರು ಅಮಾಯಕ ಗ್ರಾಹಕರನ್ನು ಹೇಗೆ ವಂಚಿಸುತ್ತಿದ್ದಾರೆ ಎಂಬುದನ್ನು ಬಯಲು ಮಾಡಿದ್ದಾರೆ.
'ಹಿಂದೆ ನಾನು ಕೆಲವು ರೈಡ್‌ಗಳನ್ನು ಕ್ಯಾನ್ಸಲ್ ಮಾಡಿದ್ದೆ, ಆ ಹಣವನ್ನು ಈಗ ಕೊಡದಿದ್ದರೆ ತನ್ನ ಅಕೌಂಟ್‌ನಿಂದ ಕಟ್ ಆಗುತ್ತದೆ ಎಂದು ಡ್ರೈವರ್ ವಾದಿಸಿದ. ನನ್ನ ಆ್ಯಪ್‌ನಲ್ಲಿ ₹285 ಮಾತ್ರ ತೋರಿಸುತ್ತಿದೆ ಎಂದು ಹೇಳಲು ಪ್ರಯತ್ನಿಸಿದಾಗ, ಚಾಲಕ ರೇಗಾಡಲು ಶುರು ಮಾಡಿದ. ₹5950 ಕೊಡಲೇಬೇಕು ಎಂದು ಪದೇ ಪದೇ ಪಟ್ಟು ಹಿಡಿದ' ಎಂದು ಪ್ರಯಾಣಿಕರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಚಾಲಕ ಹೆಚ್ಚಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರಿಂದ, ಕನ್ನಡ ಬಾರದ ಪ್ರಯಾಣಿಕರಿಗೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಿ, ಒತ್ತಡದ ಸನ್ನಿವೇಶ ನಿರ್ಮಾಣವಾಗಿತ್ತು. ಈ ಬಗ್ಗೆ ಓಲಾ ಕಂಪನಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ತಕ್ಷಣ ಸಹಾಯ ಸಿಗಬಹುದೆಂದು ನಾನು ಆ್ಯಪ್ ಮೂಲಕ ಓಲಾದ ಎಮರ್ಜೆನ್ಸಿ ಸಪೋರ್ಟ್‌ಗೆ ಕರೆ ಮಾಡಿದೆ. ಆದರೆ, ಅಲ್ಲಿನ ಸಿಬ್ಬಂದಿಯ ಪ್ರತಿಕ್ರಿಯೆ ತುಂಬಾ ನಿರಾಶಾದಾಯಕವಾಗಿತ್ತು. ಅವರು ಉಡಾಫೆಯಿಂದ ವರ್ತಿಸಿದರು ಎಂದು ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪ್ರಯಾಣಿಕರ ಪರವಾಗಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ತಕ್ಷಣ ಪೊಲೀಸರಿಗೆ ಕರೆ ಮಾಡಬೇಕಿತ್ತು ಎಂದು ಹಲವರು ಸಲಹೆ ನೀಡಿದ್ದಾರೆ. 'ಈ ರೀತಿ ಆದಾಗ ತಕ್ಷಣ 112ಕ್ಕೆ ಕರೆ ಮಾಡಿ, ಅವರು 5 ರಿಂದ 10 ನಿಮಿಷದಲ್ಲಿ ಸ್ಥಳಕ್ಕೆ ಬರುತ್ತಾರೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.'ನನಗೂ ಹೀಗೆ ಆಗಿದೆ, ಅವರು 'ಇದು ಎಮರ್ಜೆನ್ಸಿ ಅಲ್ಲ' ಅಂತ ಹೇಳಿ ಫೋನ್ ಕಟ್ ಮಾಡುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ' ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಮೂರನೇಯವರು, 'ಈ ಕ್ಯಾಬ್ ಕಂಪನಿಗಳು ಹೆಚ್ಚೆಂದರೆ ಹಣ ವಾಪಸ್ ಕೊಡುತ್ತವೆ ಅಷ್ಟೇ. ಇಂತಹ ಚಾಲಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಇದು ಕಹಿ ಸತ್ಯ' ಎಂದು ಬರೆದಿದ್ದಾರೆ.
ನಾಲ್ಕನೇಯವರೊಬ್ಬರು, 'ಇಂಥ ಸಮಸ್ಯೆಗಳಿಗೆ ಒಂದು ಸಿಂಪಲ್ ಸೊಲ್ಯೂಷನ್ ಇದೆ. ನಿಮ್ಮ ಆ್ಯಪ್‌ನಿಂದ ಕ್ಯಾಶ್ ಟ್ರಿಪ್ ಆಯ್ಕೆಯನ್ನು ತೆಗೆದುಹಾಕಿ ಪ್ರಿಪೇಯ್ಡ್ ಮಾಡೆಲ್‌ಗೆ ಬದಲಿಸಿ. ಟ್ರಿಪ್ ಒಪ್ಪಿಕೊಂಡ ನಂತರ ಹಣ ಕಡಿತವಾಗಬೇಕು' ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ