ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬರ್‌ನ ಸಹಚರ ಬಳ್ಳಾರಿ ಶಬ್ಬೀರ್‌ ಎನ್‌ಐಎ ವಶಕ್ಕೆ!

By Sathish Kumar KH  |  First Published Mar 13, 2024, 1:08 PM IST

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬರ್ ಸಹಚರ ಶಬ್ಬೀರ್ ಎನ್ನುವ ಆರೋಪಿಯನ್ನು ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಬಂಧಿಸಿದ್ದಾರೆ.


ಬಳ್ಳಾರಿ (ಮಾ.13): ಬೆಂಗಳೂರು ರಾಮೇಶ್ವರಂ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ಬಳ್ಳಾರಿಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದವನಿಗೂ ಹಾಗೂ ಬಳ್ಳಾರಿಯಲ್ಲಿ ಬಂಧಿತವಾದ ವ್ಯಕ್ತಿಗೂ ಲಿಂಕ್‌ ಇರುವುದನ್ನು ಎನ್‌ಐಎ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಬಳ್ಳಾರಿಯಲ್ಲಿ ಒಬ್ಬನನ್ನ ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳು. ಇಂದು ಬೆಳಗ್ಗೆ 4 ಗಂಟೆಗೆ ಶಬ್ಬಿರ್ ಎನ್ನುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಯುವಕನನ್ನ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಯುವಕನಿಗೂ ಇದ್ಯಾ ಲಿಂಕ್ ಅನುಮಾನದ ಮೇಲೆ ಯುವಕನ ತನಿಖೆ ಮಾಡಲಾಗುತ್ತಿದೆ. ಬಂಧಿತ ಯುವಕ ಮೂಲತಃ ಬಳ್ಳಾರಿಯವನೃ ಅಥವಾ ಇಲ್ಲಿಗೆ ಬಂದಿದ್ದನೆ ಎನ್ನುವ ಬಗ್ಗೆ ಖಚಿತತೆ ಇಲ್ಲ. 

Latest Videos

undefined

ಬಿಎಂಟಿಸಿ ಬಸ್‌ ಸಿಸಿಟಿವಿ ಕ್ಯಾಮರಾದಲ್ಲಿ ಅಚಾನಕ್ ಸೆರೆಸಿಕ್ಕ ರಾಮೇಶ್ವರಂ ಕೆಫೆ ಬಾಂಬರ್!

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿ ಬಳ್ಳಾರಿಯ ಟ್ಯಾಂಕ್ ಬಂಡ್‌ ರಸ್ತೆಯ ಗಲ್ಲಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಶಬ್ಬೀರ್ ತೋರಣಗಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಟ್ಯಾಂಕ್ ಬಂಡ್ ರಸ್ತೆಯ ಬಳಿಯ ಬುಡಾ ಕಾಂಪ್ಲೆಕ್ಸ್ ಬಳಿ ಶಂಕಿತ ಉಗ್ರನನ್ನ ಬೇಟಿ ಮಾಡಿದ್ದ ಎಂಬ ಅನುಮಾನದ ಹಿನ್ನೆಲೆ ವಶಕ್ಕೆ ಪಡೆದಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಉಗ್ರ ಬಳ್ಳಾರಿಗೆ ಬಂದ ಸಮಯದಲ್ಲಿ  ಟ್ಯಾಂಕ್ ಬಂಡ್ ಏರಿಯಾ ನಿವಾಸಿ ಶೆಬ್ಬಿರ್ ನನ್ನು ಭೇಟಿ ಮಾಡಿದ್ದನು. ಅಲ್ಲದೇ ಬಾಂಬರ್‌ನನ್ನು ಹೈದ್ರಾಬಾದ್ ಗೆ ಹೋಗಲು ಸಹಾಯ ಮಾಡಿದ್ದನು ಎಂದು ಕೇಳಿಬಂದಿದೆ. ಶಂಕಿತ ಉಗ್ರ ಹೈದರಾಬಾದ್‌ಗೆ ಹೋದ ಸಮಯದಲ್ಲಿ ಬಳ್ಳಾರಿಯ ಶಬ್ಬೀರ್ ಆತನನ್ನು ಭೇಟಿ ಮಾಡಿ ಬಂದಿದ್ದನು. ಹೈದ್ರಾಬಾದ್ ನಲ್ಲಿ ತಲೆ ಮರೆಸಿಕೊಂಡ ಶಂಕಿತ ಉಗ್ರ ತಲೆ ಕರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.

click me!