ಬೆಂಗಳೂರು ಬಾಂಬ್‌ ಸ್ಫೋಟ, ರಾಮೇಶ್ವರಂ ಕೆಫೆಯೇ ಟಾರ್ಗೆಟ್‌ ಯಾಕೆ?

By Suvarna News  |  First Published Mar 1, 2024, 7:23 PM IST

ಬಾಂಬ್ ಸ್ಫೋಟಕ್ಕೆ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದೆ.  ಇದೆಲ್ಲದ ನಡುವೆ ಈಗ ಎದ್ದಿರುವ ಪ್ರಶ್ನೆ ಸುಪ್ರಸಿದ್ಧ ರಾಮೇಶ್ವರಂ ಕೆಫೆಯನ್ನೇ ಸ್ಫೋಟಗೊಳಿಸುವ ಟಾರ್ಗೆಟ್‌ ಯಾಕೆ ಮಾಡಲಾಯ್ತು ಎಂಬುದು. ಈ ಬಗ್ಗೆ ಇಲ್ಲಿ ಸಂಭಾವನೀಯ ಕಾರಣಗಳನ್ನು ಇಲ್ಲಿ ನೀಡಲಾಗಿದೆ.


ಬೆಂಗಳೂರು (ಮಾ.1):  ಬೆಂಗಳೂರಿನ ಕುಂದಲಹಳ್ಳಿ ಗೇಟ್‌ ಸಮೀಪ ಇರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣ ದಲ್ಲಿ ಐಇಡಿ ( ಸುಧಾರಿತ ಸ್ಪೋಟಕ ಸಾಮಾಗ್ರಿ) ಬಳಕೆ ಮಾಡಿರುವುದನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಬಾಂಬ್ ಸ್ಫೋಟಕ್ಕೆ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದೆ.  ಈ ಸ್ಫೋಟದ  ಬಗ್ಗೆ ಎಲ್ಲಾ ಕಡೆಯಿಂದಲೂ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯ, ಸ್ಥಳ ಪರಿಶೀಲನೆ, ಪತ್ಯಕ್ಷದರ್ಶಿಗಳ ಹೇಳಿಕೆ ಎಲ್ಲವನ್ನೂ ತನಿಖಾಧಿಕಾರಿಗಳು ಪಡೆದುಕೊಂಡಿದ್ದಾರೆ.

ಇದೆಲ್ಲದ ನಡುವೆ ಈಗ ಎದ್ದಿರುವ ಪ್ರಶ್ನೆ ಸುಪ್ರಸಿದ್ಧ ರಾಮೇಶ್ವರಂ ಕೆಫೆಯನ್ನೇ ಸ್ಫೋಟಗೊಳಿಸುವ ಟಾರ್ಗೆಟ್‌ ಯಾಕೆ ಮಾಡಲಾಯ್ತು ಎಂಬುದು. ಹೊಟೇಲ್ ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ರಾಮೇಶ್ವರಂ ಕೆಫೆಯಲ್ಲಿ ಪ್ರತಿನಿತ್ಯ ಸಾವಿರಾರು ಗ್ರಾಹಕರು ಬಂದು ಇಲ್ಲಿ ವಿವಿಧ ಖಾದ್ಯಗಳನ್ನು ಸೇವಿಸಿ ಹೋಗುತ್ತಾರೆ. ದಿನಾಲು ಜನಜಂಗುಳಿಯಿಂದ ಕೂಡಿರುವ ಪ್ರದೇಶವಾಗಿ ಬೆಂಗಳೂರಿನ ಪ್ರತಿಯೊಂದು ರಾಮೇಶ್ವರಂ ಕೆಪೆಗಳು ಮಾರ್ಪಟ್ಟಿದೆ. ಇಂತಹ ಪ್ರಸಿದ್ಧ ಕೆಫೆಗೆ ಸುಮಾರು 11 ಗಂಟೆಗೆ ಬಂದ ವ್ಯಕ್ತಿ ಬ್ಯಾಗ್  ತಂದಿಟ್ಟು ಹೋಗಿದ್ದಾನೆ. ಮಧ್ಯಾಹ್ನ ಊಟದ ಸಮಯ ಅಂದರೆ 1 ಗಂಟೆ ಸುಮಾರಿಗೆ ಸ್ಫೋಟವಾಗಿ 9 ಜನರಿಗೆ ಗಾಯವಾಗಿದೆ. ಸದ್ಯ ಈ ಬಗ್ಗೆ ಎನ್‌ಐಎ ತನಿಖೆ ಕೈಗೆತ್ತಿಕೊಂಡಿದೆ.

Latest Videos

undefined

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ, ಐಇಡಿ ಬಳಕೆ ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ

ಸದ್ಯ ಬೆಂಗಳೂರಿನಲ್ಲಿರುವ ಟಾಪ್‌ ಕೆಫೆಗಳಲ್ಲಿ ಒಂದಾಗಿರುವ ರಾಮೇಶ್ವರಂ ಕೆಫೆಯನ್ನು ಟಾರ್ಗೆಟ್‌ ಮಾಡಿಯೇ ಈ ಕೃತ್ಯ ಎಸಗಲಾಯ್ತಾ ಎಂಬುದು ಸದ್ಯಕ್ಕಿರುವ ಅನುಮಾನ. ಏಕೆಂದರೆ 2021ರಲ್ಲಿ ಆರಂಭವಾದ ಈ ಕೆಫೆ. ಅತೀ ಕಮ್ಮಿ ಸಮಯದಲ್ಲಿ ಸಾಕಷ್ಟು ಗ್ರಾಹಕರ ನೆಚ್ಚಿನ ಕೆಫೆಯಾಗಿ ಮಾರ್ಪಟ್ಟಿತು. ಹೀಗಾಗಿ ಬೇಕೆಂದೇ ರಾಮೇಶ್ವರಂ ಕೆಫೆಯನ್ನು ಟಾರ್ಗೆಟ್‌ ಮಾಡಿರುವ ಸಾಧ್ಯತೆಗಳು ಕೂಡ ಇರಬಹುದು ಎನ್ನಲಾಗುತ್ತಿದೆ. ಏಕೆಂದರೆ ಬೆಂಗಳೂರಿನಲ್ಲಿ ಈ ಕೆಫೆ ಮಾತ್ರವಲ್ಲದೆ ಅದೆಷ್ಟೋ ಹೊಟೇಲ್‌ ಗಳು ತುಂಬಿ ತುಳುಕುತ್ತಿರುತ್ತವೆ. ಆದರೆ ರಾಮೇಶ್ವರಂ ಕೆಫೆಯನ್ನೇ ಯಾಕೆ ಟಾರ್ಗೆಟ್‌ ಮಾಡಲಾಯ್ತು? ಇದಕ್ಕೆ ಕಾರಣ ಹುಡುಕ ಹೊರಟಾಗ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅತೀ ಕಮ್ಮಿ ಸಮಯದಲ್ಲಿ ಫೇಮಸ್‌ ಆಗಿದ್ದಕ್ಕೆ ವೈಯಕ್ತಿಕ ದ್ವೇಷ ಇರಬಹುದು. ಬೆಳೆದು ಬಿಟ್ಟರಲ್ಲಾ ಎಂಬ ಅಸೂಯೆ ಕೂಡ ಇರಬಹುದು. ವ್ಯವಹಾರಿಕ ಸ್ಪರ್ಧೆ ಕೂಡ ಕಾರಣವಾಗಿರಬಹುದು. ಗ್ರಾಹಕರನ್ನು ಕಳೆದುಕೊಂಡ ಇತರ ಹೊಟೇಲ್‌ ಗಳು ಟಾರ್ಗೆಟ್‌ ಮಾಡಿರಬಹುದು ಎಂಬ ಬಗೆಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆರಂಭವಾಗಿದೆ.

ರಾಮೇಶ್ವರಂ ಕೆಫೆ ಮಾಲೀಕರು ನನಗೆ ಹೇಳಿದಂತೆ ಗ್ರಾಹಕರ ಬ್ಯಾಗ್‌ನಿಂದ ಸ್ಫೋಟ: ತನಿಖೆಗೆ ತೇಜಸ್ವಿ ಸೂರ್ಯ ಒತ್ತಾಯ

ಇದಕ್ಕಿಂತಲೂ ಮುಖ್ಯವಾಗಿ ಅಂಬಾನಿ ಕುಟುಂಬದ ಐಷಾರಾಮಿ ವಿವಾಹವಾಗಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ಅದ್ಧೂರಿ ವಿವಾಹಕ್ಕೆ ರಾಮೇಶ್ವರಂ ಕೆಫೆ ಮಾಲೀಕರಿಗೆ ಕ್ಯಾಟರಿಂಗ್ ಆಫರ್‌ ನೀಡಲಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ ಮೂರು ದಿನಗಳ ಪೂರ್ವ ವಿವಾಹ ಸಂಭ್ರಮಾಚರಣೆ ನಡೆಯುತ್ತಿದ್ದು 2,500 ವೆರೈಟಿ ಖಾದ್ಯಗಳು ಇರಲಿದೆ. 100ಕ್ಕೂ ಹೆಚ್ಚು ಬಾಣಸಿಗರ ತಂಡ  ಇದರಲ್ಲಿದ್ದು, ಇದರಲ್ಲಿ ರಾಮೇಶ್ವರಂ ಕೆಫೆಗೂ ಮನ್ನಣೆ ನೀಡಲಾಗಿದೆ. 100 ತಂಡಗಳಲ್ಲಿ ರಾಮೇಶ್ವರಂ ಕೆಫೆ ಕೂಡ ಒಂದು ತಂಡ.  ಹೀಗಾಗಿ  ಇದು ಕೂಡ ರಾಮೇಶ್ವರಂ ಕೆಫೆಯ ಪ್ರಸಿದ್ಧತೆಯನ್ನು ಇನ್ನೂ ಕೂಡ ಹೆಚ್ಚಿಸಬಹುದು ಎಂಬ ದ್ವೇಷಕ್ಕೆ ಯಾರೋ ಈ ಬಗ್ಗೆ  ಡಿಲ್‌ ಕೊಟ್ಟು ಈ ಕೃತ್ಯ ಮಾಡಿಸಿರಬಹುದು ಎಂಬುದು ಸದ್ಯಕ್ಕೆ ಜನರಿಗಿರುವ ಅನುಮಾನವಾಗಿದೆ.

ಇದಲ್ಲದೆ ಉಗ್ರರ ಕೃತ್ಯದ ಬಗ್ಗೆ ತೀವ್ರ ಅನುಮಾನ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಹಲವು ಉಗ್ರರ ಬ್ಲಾಸ್ಟ್‌ಗಳು ಈ ಹಿಂದೆಯೂ ನಡೆದಿದ್ದು, ಜನರಲ್ಲಿ ಇಂದಿನ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನ ಜನ ಬೆಚ್ಚಿಬಿದ್ದಿದ್ದಾರೆ. ಸಿಸಿಟಿವಿಯಲ್ಲಿ ಇಂದಿನ ಸ್ಫೋಟದ ಭೀಕರತೆ ದಾಖಲಾಗಿದ್ದು, ಜನ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗುತ್ತಿರುವುದು. ಗಾಯಾಳುಗಳು ಬಿದ್ದಿರುವುದು ಕಂಡುಬಂದಿದೆ.

ಇನ್ನು 21ನೇ ವಯಸ್ಸಿಗೆ ಸಿಎ ಪೂರ್ಣಗೊಳಿಸಿದ ದಿವ್ಯಾ ಹಾಗೂ ಆಹಾರ ಉದ್ಯಮದಲ್ಲಿ  15ಕ್ಕೂ ಹೆಚ್ಚು ವರ್ಷಗಳ ಅನುಭವ ಇರುವ ರಾಘವ್ ದಂಪತಿ ತಮ್ಮ ಕನಸಿನ ರೆಸ್ಟೋರೆಂಟ್ ಗೆ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಗೌರವಾರ್ಥ 'ರಾಮೇಶ್ವರಂ ಕೆಫೆ' ಎಂಬ ಹೆಸರಿಟ್ಟರು.  ಬೆಂಗಳೂರು, ಚೆನ್ನೈದುಬೈ, ಹೈದರಾಬಾದ್‌ಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಕೆಫೆಯಲ್ಲಿ 700 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ಈ ಕೆಫೆಯಲ್ಲಿ  7,500 ಬಿಲ್ ಗಳು ಸೃಷ್ಟಿಯಾಗುತ್ತವೆ.   ತಿಂಗಳಿಗೆ 4.5 ಕೋಟಿ ವ್ಯವಹಾರ ನಡೆಸುವ ಈ ಕೆಫೆಯ  ವಾರ್ಷಿಕ ವಹಿವಾಟು 50 ಕೋಟಿ ರೂ.

click me!