ಐಐಎಸ್‌ಸಿ, ಚಿನ್ನಸ್ವಾಮಿ, ಚರ್ಚ್‌ಸ್ಟ್ರೀಟ್‌ ಈಗ ರಾಮೇಶ್ವರಂ ಕೆಫೆ... ನಮ್ಮ ಸರ್ಕಾರಗಳು ಪಾಠ ಕಲಿಯೋದ್ಯಾವಾಗ?

By Santosh Naik  |  First Published Mar 1, 2024, 6:58 PM IST


ಉದ್ಯಾನನಗರಿ ಬೆಂಗಳೂರಿನ ಪಾಲಿಗೆ ಬಾಂಬ್‌ ಬ್ಲಾಸ್ಟ್‌ಗಳು ಆತಂಕ ಮೂಡಿಸಿದ್ದು ಮೊದಲೇನಲ್ಲ. ಆದರೆ, ದೊಡ್ಡ ಮಟ್ಟದ ಪರಿಣಾಮ ಉಂಟಾಗದ ಕಾರಣ ಬೆಂಗಳೂರಿನಲ್ಲಾಗುವ ಭಯೋತ್ಪಾದಕ ಘಟನೆಗಳ ಬಗ್ಗೆ ಹೆಚ್ಚಿನ ಸರ್ಕಾರಗಳು ತಾತ್ಸಾರ ಮನೋಭಾವವನ್ನೇ ಹೊಂದಿವೆ. ಇಂಥ ಘಟನೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ದೊಡ್ಡ ಮಟ್ಟದ ವೈಫಲ್ಯ ಕಾಣುತ್ತಿದೆ.
 


ಬೆಂಗಳೂರು (ಮಾ.1):  ಉದ್ಯಾನ ನಗರಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಬಾಂಬ್‌ ಬ್ಲಾಸ್ಟ್‌ ಘಟನೆಗಳು ನಡೆದಿದೆ. ಆದರೆ, ಬೆಂಗಳೂರು ಬಾಂಬ್‌ ಬ್ಲಾಸ್ಟ್‌ಗಳ ಇತಿಹಾಸದಲ್ಲಿ ರಾಮೇಶ್ವರಂ ಕಫೆ ಬ್ಲಾಸ್ಟ್‌ ಹೊಸ ಸೇರ್ಪಡೆಯಷ್ಟೇ. ಬೆಂಗಳೂರನಲ್ಲಿ ಮೊಟ್ಟಮೊದಲ ಬಾಂಬ್‌ ಬ್ಲಾಸ್ಟ್‌ ನಡೆದಿದ್ದು 2005ರಲ್ಲಿ. ಭಾರತೀಯ ವಿಜ್ಞಾನ ಸಂಸ್ಥೆಯ ದೊಡ್ಡ ಆವರಣದಲ್ಲಿ ನಡೆದಿದ್ದ ಆತಂಕಕಾರಿ ಘಟನೆ ಇಡೀ ನಗರವನ್ನು ಬೆಚ್ಚಿ ಬೀಳಿಸಿತ್ತು. ಆ ನಂತರ ಚಿನ್ನಸ್ವಾಮಿ ಸ್ಟೇಡಿಯಂನ ಎದುರು ನಡೆದ ಬಾಂಬ್‌ ಬ್ಲಾಸ್ಟ್‌, ಬಿಜೆಪಿ ಕಚೇರಿ ಎದುರು ನಡೆದ ಬಾಂಬ್‌ ಬ್ಲಾಸ್ಟ್‌ಗಳು ಸುದ್ದಿಯಾಗಿದ್ದವು.  ವಿಶ್ವಮಟ್ಟದಲ್ಲಿ ಸಿಲಿಕಾನ್‌ ಸಿಟಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರು, ನಿರಂತರ ಹೂಡಿಕೆಯಿಂದಾಗಿ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಆದರೆ, ಬೆಂಗಳೂರು ಪಾಲಿಗೆ ಇಂಥ ಬಾಂಬ್‌ ಬ್ಲಾಸ್ಟ್‌ಗಳು, ಭಯೋತ್ಪಾದನಾ ಘಟನೆಗಳು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ವಿವಿಧ ಸರ್ಕಾರಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ವಿವರಗಳು.

2005: ಐಐಎಸ್‌ಸಿ ಶೂಟೌಟ್‌, ಗ್ರೇನೆಡ್‌ ದಾಳಿ

Tap to resize

Latest Videos

undefined

ಬೆಂಗಳೂರಿನಲ್ಲಿ ಮೊಟ್ಟಮೊದಲ ಭಯೋತ್ಪಾದನೆ ಘಟನೆ ನಡೆದಿದ್ದು 2005ರಲ್ಲಿ. ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ವಿಜ್ಞಾನಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶೂಟೌಟ್‌ ಮಾತ್ರವಲ್ಲದೆ, ಗ್ರೆನೇಡ್‌ ದಾಳಿ ಕೂಡ ನಡೆದಿತ್ತು. ಈ ಪ್ರಕರಣದಲ್ಲಿ ಆರು ಲಷ್ಕರ್‌ ಉಗ್ರರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

2008: ಸರಣಿ ಬಾಂಬ್‌ ಸ್ಫೋಟ
ಐಐಎಸ್‌ಎಸ್‌ ದಾಳಿ ಬಳಿಕ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದ್ದು 2008ರ ಸರಣಿ ಬಾಂಬ್‌ ಸ್ಫೋಟಕ್ಕೆ. 2008ರ ಜುಲೈ 25 ರಂದು ಈ ಘಟನೆ ನಡೆದಿತ್ತು. ಆಡುಗೋಡಿಯಿಂದ ಹಿಡಿದು, ಮೈಸೂರು ರಸ್ತೆಯ ತನಕ ಒಂದೇ ಮಾರ್ಗದಲ್ಲಿ ಬಾಂಬ್‌ಗಳನ್ನು ಇಟ್ಟಿದ್ದರು. ಬಾಂಬ್‌ಗಳು ಹೂವಿನ ಕುಂಡದ ಮಾದರಿಯಲ್ಲಿತ್ತು. ಕೋರಮಂಗಲದ ಫೋರಂ ಮಾಲ್‌ ಪಕ್ಕದಲ್ಲಿ ಒಂದು ಬಾಂಬ್‌ ಬ್ಲಾಸ್ಟ್‌ ಆಗದೇ ಸಿಕ್ಕಿತ್ತು.

2010: ಚಿನ್ನಸ್ವಾಮಿಯಲ್ಲಿ ಬಾಂಬ್‌ ಸ್ಫೋಟ
2010ರ ಏಪ್ರಿಲ್‌ 17 ರಂದು ಬೆಂಗಳೂರಿನಲ್ಲಿ ಐಪಿಎಲ್‌ ಪಂದ್ಯ ನಡೆಯುವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಹೊರಗೆ ಬಾಂಬ್‌ ಬ್ಲಾಸ್ಟ್‌ ಆಗಿತ್ತು. 10 ಜನರಿಗೆ ಗಂಭೀರ ಗಾಯವಾಗಿದ್ದವು. ಇಂದಿಗೂ ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್‌ ಬ್ಲಾಸ್ಟ್‌ ಎಂದೇ ಇದನ್ನು ಗುರುತಿಸಲಾಗುತ್ತದೆ.

2013: ಬಿಜೆಪಿ ಕಚೇರಿ ಎದುರು ಬ್ಲಾಸ್ಟ್‌ 
ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್‌ ಬ್ಲಾಸ್ಟ್‌ ಆಗಿ ಸರಿಯಾಗಿ ಮೂರು ವರ್ಷಕ್ಕೆ ಅಂದರೆ, 2013ರ ಏಪ್ರಿಲ್‌ 17 ರಂದು ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದುರು ಬಾಂಬ್‌ ಬ್ಲಾಸ್ಟ್‌ ಆಗಿತ್ತು. 12 ಜನ ಪೊಲೀಸರು ಸೆರಿದಂತೆ 17 ಮಂದಿಗೆ ಗಂಭೀರ ಗಾಯವಾಗಿದ್ದವು.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ, ಐಇಡಿ ಬಳಕೆ ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ

2014: ಚರ್ಚ್‌ಸ್ಟ್ರೀಟ್‌ ಸ್ಫೋಟ
ಇದಾದ ಒಂದು ವರ್ಷಕ್ಕೆ 2014ರ ಡಿಸೆಂಬರ್‌ 28 ರಂದು ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್‌ ಸ್ಫೋಟ ನಡೆದಿತ್ತು. ಇಲ್ಲಿನ ಕೊಕೊನಟ್‌ ಗ್ರೂವ್‌ ಅನ್ನೋ ಹೋಟೆಲ್‌ನ ಫುಟ್‌ಪಾತ್‌ನಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಿ ಮಹಿಳೆಯೊಬ್ಬರು ಮೃತಪಟ್ಟಿತ್ತು.

Exclusive: ರಾಮೇಶ್ವರಂ ಕಫೆಯಲ್ಲಿನ ಸ್ಪೋಟದ ಎಕ್ಸ್‌ಕ್ಲೂಸಿವ್‌ ಸಿಸಿಟಿವಿ ದೃಶ್ಯ!

click me!