ಬೆಂಗಳೂರು: ಬಿಎಮ್ಎನ್ ಕಬಡ್ಡಿ ತಂಡ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

Published : Sep 20, 2025, 06:18 PM IST
Bengaluru BMN Kabaddi team selected for national level

ಸಾರಾಂಶ

ಬೆಂಗಳೂರಿನ ಬಿಎಂಎನ್ ಪಬ್ಲಿಕ್ ಸ್ಕೂಲ್ ಕಬಡ್ಡಿ ತಂಡವು ರಾಜ್ಯ ಮಟ್ಟದ ಸಿಬಿಎಸ್ಇ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದು, ಶಾಲೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಈ ಗೆಲುವಿನೊಂದಿಗೆ, ತಂಡವು ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ 2025ರ ರಾಷ್ಟ್ರಮಟ್ಟದ ಸಿಬಿಎಸ್ಇ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದೆ.

ಬೆಂಗಳೂರು(ಸೆ.20): ಬೆಂಗಳೂರಿನ ಮಾಕಳಿಯ ಬಿಎಂಎನ್ ಪಬ್ಲಿಕ್ ಸ್ಕೂಲ್(BMN Public school) ಕಬಡ್ಡಿ ತಂಡವು ರಾಜ್ಯ ಮಟ್ಟದ ಸಿಬಿಎಸ್ಇ ಕಬಡ್ಡಿ ಚಾಂಪಿಯನಶಿಪ್(CBSE Kabaddi Championship) ಗೆಲ್ಲುವ ಮೂಲಕ ಶಾಲೆಯಲ್ಲಿ ವಿಜಯೋತ್ಸವಕ್ಕೆ ಕಾರಣವಾಯಿತು.

ಚಾಂಪಿಯನ್ಗಳು ಟ್ರೋಫಿಯೊಂದಿಗೆ ಮರಳುತ್ತಿದ್ದಂತೆ ಶಾಲೆಯ ಆವರಣದಲ್ಲಿ ಹೆಮ್ಮೆ, ಸಂಭ್ರಮ ಮುಗಿಲು ಮುಟ್ಟಿತು. ಕರ್ನಾಟಕದಾದ್ಯಂತ 55 ಸಿಬಿಎಸ್ಇ ಶಾಲೆಗಳ ಕಠಿಣ ಸ್ಪರ್ಧೆಯ ನಡುವೆ ಕಬಡ್ಡಿ ತಂಡವು ಟ್ರೋಫಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಘನ ವಿಜಯದೊಂದಿಗೆ ಜುಲೈ 2025 ಈ ಯುವ ಕ್ರೀಡಾಪಟುಗಳ ನೆನಪಿನಲ್ಲಿ ವೈಭವದ ಮಾಸವಾಗಿ ಉಳಿಯಲಿದೆ.

ಅವರ ಈ ವಿಜಯದ ಪ್ರಯಾಣ ಸುಲಭವಾಗಿರಲಿಲ್ಲ - ಬೆಂಗಳೂರಿನ ಸುಡು ಬಿಸಿಲಿನಲ್ಲಿ ಸುರಿವ ಬೆವರನ್ನೂ ಲೆಕ್ಕಿಸದ ನಿರಂತರ ಅಭ್ಯಾಸ ಮತ್ತು ಪರಿಪೂರ್ಣತೆಯನ್ನು ಸಾಧಿಸಲು ಬಳಸಿದ ತಂತ್ರಗಾರಿಕೆಯು ಈ ಗೆಲುವಿಗೆ ದಾರಿ ಮಾಡಿಕೊಟ್ಟವು. ತಂಡದ ಶಿಸ್ತು, ದೃಢ ನಿಶ್ಚಯ ಮತ್ತು ಕ್ರೀಡಾ ಮನೋಭಾವವು ಬಿಜಾಪುರದ ಕವಳಗಿಯ ಸಂಗನಬಸವ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಎಲ್ಲರ ಗಮನವನ್ನು ಸೆಳೆಯಿತು.

ಈ ಗೆಲುವಿನೊಂದಿಗೆ ಮತ್ತೊಂದು ದೊಡ್ಡ ಸವಾಲಿಗೆ ತಂಡ ಸಜ್ಜಾಗಿದೆ. ಅದೇ - ʻಸಿಬಿಎಸ್ಇ ರಾಷ್ಟ್ರೀಯ ಕಬಡ್ಡಿ ಚಾಂಪಿಯನಶಿಪ್ 2025(CBSE National Kabaddi Championship 2025) ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಕಸೌಲಿಯ ಸುಂದರವಾದ ಬೆಟ್ಟಗಳ ನಡುವೆ ಇರುವ ʻಕಸೌಲಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್(Kasauli International Public School)ʼನಲ್ಲಿ 2025ರ ಸೆಪ್ಟೆಂಬರ್ 29 ರಂದು ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ನಿಗದಿಯಾಗಿದ್ದು , ಕರ್ನಾಟಕ ಈ ಪ್ರತಿನಿಧಿಗಳು ಮಿಂಚಲು ಅಲ್ಲಿ ವೇದಿಕೆ ಸಿದ್ಧಗೊಂಡಿದೆ.

ಈ ವೇದಿಕೆಯಲ್ಲಿ ʻಬಿಎಂಎನ್ ಪಬ್ಲಿಕ್ ಸ್ಕೂಲ್ʼನ ಕಬಡ್ಡಿ ತಂಡವು ತೀವ್ರ ಪೈಪೋಟಿ ನೀಡಲು ಸಿದ್ದಗೊಂಡಿದೆ.

ʻಬಿಎಂಎನ್ ಪಬ್ಲಿಕ್ ಸ್ಕೂಲ್ʼನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ಈ ವಿಚಾರದಲ್ಲಿ ಅತೀವ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅದ್ಭುತ ಸಾಧನೆಗಾಗಿ ಆಟಗಾರರನ್ನು ಅಭಿನಂದಿಸಿದ ಅವರು, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಂಡದ ಅಮೋಘ ಯಶಸ್ಸಿಗಾಗಿ ಹಾರೈಸಿದ್ದಾರೆ. "ಕನಸು ಕಾಣು. ಧೈರ್ಯ ಮಾಡು. ಮುನ್ನುಗ್ಗು" ಎಂಬ ಶಾಲೆಯ ಮಂತ್ರವು ಈ ಯುವ ಕಬಡ್ಡಿ ಯೋಧರಿಗೆ ಹೇಳಿ ಮಾಡಿಸಿದಂತಿದೆ.

ಧೈರ್ಯಶಾಲಿ ಮತ್ತು ಶಕ್ತಿಶಾಲಿ ವಿದ್ಯಾರ್ಥಿನಿಯರು ಸಿದ್ಧರಾಗಿದ್ದಾರೆ. ಬೆಂಗಳೂರಿನ ಬೀದಿಗಳಿಂದ ಹಿಮಾಚಲದ ಬೆಟ್ಟಗಳವರೆಗೆ ಅವರು ಕರ್ನಾಟಕದ ಹೆಮ್ಮೆಯನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. 'ಹೋಗಿ ನಮ್ಮನ್ನು ಹೆಮ್ಮೆಪಡುವಂತೆ ಮಾಡಿ!' ಎಂಬ ಅಭಿಲಾಷೆ ಮನೆಗೆ ಮರಳಿದ ಎಲ್ಲರ ಭಾವನೆಗಳಲ್ಲೂ ಪ್ರತಿಧ್ವನಿಸಿತು.

ಶಾಲೆಯ ಮಕ್ಕಳು ದೇಶದ ಶ್ರೇಷ್ಠ ಆಟಗಾರರನ್ನು ಎದುರಿಸಲು ಸಿದ್ಧರಾಗಿರುವ ಈ ಸಮಯದಲ್ಲಿ ಅವರ ಮನದಲ್ಲಿ 'ಉತ್ಸಾಹದಿಂದ ಪ್ರತಿನಿಧಿಸುವುದು, ಹೆಮ್ಮೆಯಿಂದ ಆಟವಾಡುವುದು ಮತ್ತು ಹೃದಯಪೂರ್ವಕವಾಗಿ ಕಬಡ್ಡಿಯಲ್ಲಿ ತಲ್ಲೀನರಾಗುವುದು ಎಂಬ ಮಂತ್ರವು ಸ್ಪಷ್ಟವಾಗಿದೆ.

ಇಡೀ ತಂಡದ ಸದಸ್ಯರಿಗೆ ಮತ್ತು ತರಬೇತುದಾರರನ್ನು ಬಿಎಮ್ಎನ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಡಾ.ವನಿತಾ ಲೋಕೇಶ್ ಮತ್ತು ಸಿಬ್ಬಂದಿವರ್ಗ, ಶಾಲಾ ಆಡಳಿತ ಮಂಡಳಿಯು ಶುಭಕೋರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!