ಧರ್ಮಸ್ಥಳ ಬುರುಡೆ ಕೇಸ್‌: ಪೊಲೀಸರಿಲ್ಲದೆ ಹೆಣ ಹೂಳಲಾಗುತ್ತಿತ್ತು ಎಂದ ಚಿನ್ನಯ್ಯ!

Published : Sep 20, 2025, 10:54 AM IST
Chinnayya

ಸಾರಾಂಶ

ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ ಕೇಸಿಗೆ ಸಂಬಂಧಿಸಿದಂತೆ ಅವರ ವಿಚಾರಣೆ ನಡೆಸಲು ಬೆಳ್ತಂಗಡಿ ಪೊಲೀಸರು ಶುಕ್ರವಾರ ಅವರ ಮನೆಗೆ ತೆರಳಿದ್ದರು. ಆದರೆ, ಆ ವೇಳೆ ತಿಮರೋಡಿ ಮನೆಯಲ್ಲಿ ಇರಲಿಲ್ಲ.

ಬೆಳ್ತಂಗಡಿ/ ಮಂಗಳೂರು (ಸೆ.20): ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ನ ಪ್ರಮುಖ ಆರೋಪಿ ಚಿನ್ನಯ್ಯ, ತನ್ನ ಪತ್ನಿ ಜೊತೆ ಎರಡು ವರ್ಷದ ಹಿಂದೆ ಸೌಜನ್ಯಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮನೆಗೆ ಭೇಟಿ ನೀಡಿದ್ದ. ಭೇಟಿ ವೇಳೆ, ಆತ ತಾನು ಶವಗಳನ್ನು ಹೂತ ಬಗ್ಗೆ ತಿಮರೋಡಿಗೆ ಮಾಹಿತಿ ನೀಡಿದ್ದ. ಈ ಭೇಟಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2023ರ ಆಗಸ್ಟ್‌ನಲ್ಲಿ ಚಿನ್ನಯ್ಯ, ತನ್ನ ಪತ್ನಿ ಜೊತೆ ತಿಮರೋಡಿ ಮನೆಗೆ ಭೇಟಿ ನೀಡಿದ್ದ. ಸೌಜನ್ಯಳ ಮಾವ ವಿಠಲ ಗೌಡ ಆತನನ್ನು ತಿಮರೋಡಿ ಮನೆಗೆ ಕರೆದುಕೊಂಡು ಹೋಗಿದ್ದ. ಭೇಟಿ ವೇಳೆ ಚಿನ್ನಯ್ಯ ಶವಗಳನ್ನು ಹೂತ ಬಗ್ಗೆ ತಿಮರೋಡಿಗೆ ಮಾಹಿತಿ ನೀಡಿದ್ದ.

‘ನಾನು ಗುಂಡಿ ತೆಗೆದು ಹೆಣ ಹೂಳುತ್ತಿದ್ದೆ. ಒಂದು ಹೆಣ ಹೂಳುವಾಗ ಡಾಕ್ಟರ್‌ ಇರಲಿಲ್ಲ. ಕಾಂಪೌಂಡರ್ ಮರಣೋತ್ತರ ಪರೀಕ್ಷೆ ನಡೆಸಿದ್ದ. ಅಲ್ಲಿಗೆ ಪೊಲೀಸರು ಯಾರೂ ಬರೋದಿಲ್ಲ. ಹೆಣ ಹೂಳುವಾಗ ಯಾವ ಸಂಪ್ರದಾಯವನ್ನೂ ಪಾಲಿಸುತ್ತಿರಲಿಲ್ಲ. ನನ್ನಷ್ಟಕ್ಕೆ ನಾನು ಹೆಣ ಹೂತು ಬರಬೇಕು ಅಷ್ಟೇ. ನನ್ನ ಕೈಯಲ್ಲೇ ಎರಡು ಹೆಣ ಕೊಯಿಸಿದ್ರು. ನಾನು ಅಷ್ಟು ವರ್ಷ ಕೆಲಸ ಮಾಡಿದ್ದಕ್ಕೆ ಧರ್ಮಸ್ಥಳದವರು ಸುಮಾರು ₹3 ಲಕ್ಷಕ್ಕೂ ಹೆಚ್ಚು ಹಣ ಕೊಡಬೇಕಿತ್ತು. ಆದರೆ, ಸ್ವಲ್ಪಮಾತ್ರ ಕೊಟ್ಟು ಕಳಿಸಿದ್ರು. ಸೌಜನ್ಯ ವಿಚಾರ ಮಾತನಾಡುತ್ತೇವೆ ಎಂದು ನಮ್ಮನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದ್ರು’ ಎಂದು ಚಿನ್ನಯ್ಯ ಹೇಳಿದ್ದಾನೆ.

ತಿಮರೋಡಿ ಮನೆಯ ಗೋಡೆಗೆ ನೋಟಿಸ್‌

ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ ಕೇಸಿಗೆ ಸಂಬಂಧಿಸಿದಂತೆ ಅವರ ವಿಚಾರಣೆ ನಡೆಸಲು ಬೆಳ್ತಂಗಡಿ ಪೊಲೀಸರು ಶುಕ್ರವಾರ ಅವರ ಮನೆಗೆ ತೆರಳಿದ್ದರು. ಆದರೆ, ಆ ವೇಳೆ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಸೆ.21ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿ, ಅವರ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ತೆರಳಿದ್ದಾರೆ. ಧರ್ಮಸ್ಥಳ ಗ್ರಾಮದ ತಲೆಬುರುಡೆ ಪತ್ತೆ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದಲ್ಲಿ ವಿಶೇಷ ಪೊಲೀಸ್‌ ತಂಡ (ಎಸ್ಐಟಿ) ತಿಮರೋಡಿ ಮನೆಗೆ ತೆರಳಿ ಮಹಜರು ನಡೆಸಿತ್ತು.

ಈ ವೇಳೆ, ಅವರ ಮನೆಯಲ್ಲಿ ಅಕ್ರಮ ತಲವಾರು ಮತ್ತು ಬಂದೂಕು ಪತ್ತೆಯಾಗಿತ್ತು. ಈ ಬಗ್ಗೆ ಎಸ್ಐಟಿ ತಂಡ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿತ್ತು. ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಬಗ್ಗೆ ಕೇಸು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ತಿಮರೋಡಿ ಮನೆಗೆ ವಿಚಾರಣೆಗೆ ತೆರಳಿದ್ದರು. ಈ ವೇಳೆ ತಿಮರೋಡಿ ಮನೆಯಲ್ಲಿ ಇರದ ಕಾರಣ ಸೆ.21ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಗೋಡೆಗೆ ನೋಟಿಸ್‌ ಅಂಟಿಸಿ ತೆರಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್