ಕರ್ನಾಟಕದಲ್ಲಿ ಕೊರೋನಾ ಎಷ್ಟಿದೆ? ಜ.15ರ ಅಂಕಿ-ಸಂಖ್ಯೆ ಇಲ್ಲಿದೆ...!

By Suvarna NewsFirst Published Jan 15, 2021, 10:02 PM IST
Highlights

ನಾಳೆ ಅಂದ್ರೆ  ಜನವರಿ16ರಿಂದ ದೇಶಾದ್ಯಂತ ಕೊರೋನಾ ಲಸಿಕೆ ಪ್ರಾರಂಭವಾಗಿದೆ. ಇದರ ಮಧ್ಯೆ ಜನವರಿ 15ರ ಕರ್ನಾಟಕದ ಕೊರೋನಾ ಅಂಕಿ-ಸಂಖ್ಯೆ ತಿಳಿಯಿರಿ.

ಬೆಂಗಳೂರು, (ಜ.15): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.

ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯಂತೆ ಇಂದು (ಶುಕ್ರವಾರ) ಒಂದೇ ದಿನ ಮೂವರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 12,158ಕ್ಕೆ ಏರಿದೆ.

ಇನ್ನು ರಾಜ್ಯದಲ್ಲಿ 643 ಮಂದಿ ಗುಣಮುಖವಾಗಿದ್ದಾರೆ. ಇದರೊಂದಿಗೆ ಒಟ್ಟು ಇದುವರೆಗೆ 9,09,701 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇಂದಿನ 15/01/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/oPQL7CqF6T pic.twitter.com/ZusgqghRgv

— K'taka Health Dept (@DHFWKA)

ಪ್ರಸ್ತುತ  ರಾಜ್ಯದಲ್ಲಿ  8,790 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 183 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

click me!