ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಿಂದ ಅನತಿ ದೂರದಲ್ಲಿರುವ ಬಾಲಬ್ರೂಹಿ ಗೆಸ್ಟ್ ಹೌಸ್ ಅನ್ನು ಶಾಸಕರ ಕ್ಲಬ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ.
ಬೆಂಗಳೂರು (ಜ.29): ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಿಂದ ಅನತಿ ದೂರದಲ್ಲಿರುವ ಬಾಲಬ್ರೂಹಿ ಗೆಸ್ಟ್ ಹೌಸ್ ಅನ್ನು ಶಾಸಕರ ಕ್ಲಬ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಆದರೆ, ಇದನ್ನು ಎಂಎಲ್‌ಎ ಕ್ಲಬ್ ಎನ್ನದೇ ಕರ್ನಾಟಕ ವಿಧಾನಸಭಾ ಇನ್ಸ್ಟಿಟ್ಯೂಟ್ ಎಂದು ಹೆಸರಿಡುತ್ತೇವೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ.
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಬಾಲಬ್ರೂಹಿ ಗೆಸ್ಟ್ ಹೌಸ್ ನಲ್ಲಿ ಕರ್ನಾಟಕ ವಿಧಾನಸಭಾ ಇನ್ಸ್ಟಿಟ್ಯೂಟ್ ಅಂತ ಮಾಡುತ್ತಿದ್ದೇವೆ. ಈಗಾಗಲೇ ಸಂಸದರಿಗೆ ಮೀಸಲಾಗಿ ಸಂವಿಧಾನ ಕ್ಲಬ್ ಇದೆ. ಎಲ್ಲ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳಿಗೆ IAS ಆಫೀಸರ್ಸ್ ಕ್ಲಬ್ ಇದೆ. ಇನ್ನು ಮಾಧ್ಯಮದವರಿಗೆ ಪ್ರೆಸ್ ಕ್ಲಬ್ (Press Club) ಇದೆ. ಸರ್ಕಾರಿ ನೌಕರರಿಗೆ ಸರ್ಕಾರಿ ನೌಕರರ ಕ್ಲಬ್ ಅಂತಲೂ ಇದೆ. ಆದರೆ, ನಾವು ಈಗ ಬಾಲಬ್ರೂಹಿ ಗೆಸ್ಟ್ ಹೌಸ್ ಅನ್ನು ಶಾಸಕರ ಕ್ಲಬ್ ಅಂತ ಮಾಡಲು ಹೋಗೋದಿಲ್ಲ. ಅದರ ಬದಲಾಗಿ ಕರ್ನಾಟಕ ಶಾಸಕಾಂಗ ಸಂಸ್ಥೆ (Karnataka Legislature Institute) ಅಂತ ಮಾಡ್ತೀವಿ ಎಂದು ಮಾಹಿತಿ ನೀಡಿದರು.
ಹನುಮಂತನ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು, ಈಗ ಹನುಮಧ್ವಜ ತೆಗೆದವರ ಅವನತಿಯೂ ಆಗುತ್ತೆ: ಹೆಚ್.ಡಿ. ಕುಮಾರಸ್ವಾಮಿ
ಇದು ಶಾಸಕರು ಬಹುಪಯೋಗಿಯಾಗಿ (Multipurpose) ಬಳಕೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಲೈಬ್ರರಿ ಇರುತ್ತದೆ. ಶಾಸಕರು ಬಂದು ಚೆಸ್, ಕೇರಂ ಆಡಬಹುದು. ಕುಳಿತು ಮಾತನಾಡುವುದಕ್ಕೆ ಲಾಂಜ್ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ, ಶಾಸಕರು ಇಲ್ಲಿ ಕಾಫೀ ಟೀ ಕುಡಿಯಲು ರೆಸ್ಟೋರೆಂಟ್ ಅನ್ನು ಕೂಡ ಮಾಡಲಾಗುತ್ತದೆ. ವಿಧಾನಸೌಧದ ಬಳಿಯ ಶಾಸಕರ ಭವನದಲ್ಲಿ ಶಾಸಕರು ಉಳಿಯಲು ಮಾತ್ರ ಇದೆ. ಶಾಸಕರ ಭವನದಲ್ಲಿ ಮೀಟಿಂಗ್ ಮಾಡಲು ಸಭೆ ಮಾಡಲು ಆಗಲ್ಲ. ಅಲ್ಲಿ ಶಾಸಕರಿಗಿಂತ ಹೆಚ್ಚಾಗಿ ಸಾರ್ವಜನಿಕರು ತುಂಬಿರುತ್ತಾರೆ. ಶಾಸಕರ ಭವನದಲ್ಲಿ ಒಂದೊಳ್ಳೆ ರೆಸ್ಟೋರೆಂಟ್ ಇಲ್ಲ. ಅಲ್ಲಿ ಊಟ ಅಥವಾ ತಿಂಡಿಗೆ ಹೋದರೆ ಶಾಸಕರೇ ಕ್ಯೂ ನಿಂತಿಕೊಳ್ಳುವಷ್ಟು ಜನರು ಅಲ್ಲಿಗೆ ಬರ್ತಾರೆ ಎಂದರು.
ರಾಜ್ಯದ ಪಾರಂಪರಿಕ ಬಾಲಬ್ರೂಹಿ ಕಟ್ಟಡದಲ್ಲಿ ಕೆಲವೊಂದು ವರ್ಷಗಳಿಂದ ಯಾರ್ ಬರ್ತಾರ ಯಾರ್ ಹೊಗ್ತಾರೆ ಗೊತ್ತಿಲ್ಲ. ಈಗ ನಮ್ಮ ಸಂಸ್ಥೆ ಪಡೆದುಕೊಂಡ ನಂತರ ಇಲ್ಲಿನ ವ್ಯವಸ್ಥೆ ಸುಚಿತ್ವ ಭದ್ರತಾ ಎಲ್ಲವೂ ಆಗಲಿದೆ. ಈ ಕಟ್ಟಡದ ಮೂಲ ಸ್ವರೂಪ ಇಟ್ಟುಕೊಂಡೇ ಯಾವುದೇ ತೊಂದರೆ ಆಗದ ರೀತಿಯಲ್ಲಿ ಅಕ್ಕಪಕ್ಕದಲ್ಲಿ ಯಾವುದೇ ಕಟ್ಟಡ ಕಟ್ಟದೇ ಸದುಪಯೋಗ ಪಡೆಯುವ ಪ್ರಯತ್ನ ಮಾಡ್ತೀವಿ. ಇದಕ್ಕೆ ನಾವು ಜಾಸ್ತಿ ವೆಚ್ಚ ಮಾಡೋದಿಲ್ಲ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡುತ್ತೇವೆ. ಶೀಘ್ರದಲ್ಲೇ ಮಾಡಲು ಪ್ರಯತ್ನ ಪಡ್ತೀವಿ ಎಂದು ಹೇಳಿದರು.
ಬಿಡಿಎ ಅಧ್ಯಕ್ಷರಾಗಿ ಮೊದಲು ಈ ಕೆಲಸ ಮಾಡೋದಾಗಿ ಶಪಥ ಮಾಡಿದ ಶಾಸಕ ಎನ್.ಎ.ಹ್ಯಾರಿಸ್!
ಎಲ್ಲರಿಗೂ ಕ್ಲಬ್ ಇರುವಾಗ ಶಾಸಕರಿಗೆ ಕ್ಲಬ್ ಅಂದಾಗ ಮಾತ್ರ ಯಾಕೆ ಚರ್ಚೆ ಮಾಡಲಾಗುತ್ತಿದೆ ತಿಳಿಯುತ್ತಿಲ್ಲ. ಮಾದ್ಯಮದವರಿಗೆ, IAS, ಸರ್ಕಾರಿ ನೌಕರರು ಸೇರಿಕೊಂಡು ಎಲ್ಲರಿಗೂ ಕ್ಲಬ್ ಇದೆ. ಶಾಸಕರಿಗೆ ಅಂದಾಗ ಮಾತ್ರ ಯಾಕೆ ಚರ್ಚೆ ಹೆಚ್ಚಾಗುತ್ತಿದೆ ತಿಳಿಯುತ್ತಿಲ್ಲ. ಶಾಸಕರನ್ನ ವೈರಿಗಳ ರೀತಿ ನೋಡಬೇಡಿ, ಪ್ರೀತಿ ವಿಶ್ವಾಸದಿಂದ ಸೋದರ ಬಾವದಿಂದ ನೋಡಿ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮನವಿ ಮಾಡಿದರು.