ಭಗವಂತ ನನಗೆ ಕೊಟ್ಟಿರುವ ಮೂರನೇ ಜನ್ಮವಿದು: ಮಾಜಿ ಸಿಎಂ ಕುಮಾರಸ್ವಾಮಿ ಭಾವುಕ ನುಡಿ

By Sathish Kumar KHFirst Published Sep 3, 2023, 11:38 AM IST
Highlights

ವೈಯಕ್ತಿಕವಾಗಿ ಭಗವಂತ ನನಗೆ ಕೊಟ್ಟಿರುವ ಮೂರನೆಯ ಜನ್ಮ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾವುಕವಾಗಿ ನುಡಿದರು.

ಬೆಂಗಳೂರು (ಸೆ.03): ಪ್ರತಿ ಕುಟುಂಬಗಳಲ್ಲೂ ಬಡವ ಶ್ರೀಮಂತ ಯಾರೇ ಆಗಿರಲಿ. ಆರೋಗ್ಯದ ವಿಚಾರದಲ್ಲಿ ಕಾಳಜಿ ಇರಲಿ. ಗೋಲ್ಡನ್ ಪಿರಿಯಡ್ ಬಗ್ಗೆ ಗಮನ ಇರಲಿ. ವೈಯಕ್ತಿಕವಾಗಿ ನನಗೆ ಇದು ಮೂರನೆಯ ಘಟನೆಯಾಗಿದೆ. ಭಗವಂತ ನನಗೆ ಕೊಟ್ಟಿರುವ ಮೂರನೆಯ ಜನ್ಮ ಇದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾವುಕವಾಗಿ ನುಡಿದರು.

ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಡೆದು ಚೇತರಿಕೆ ಕಂಡ ನಂತರ ಆಸ್ಪತ್ರೆಯಿಂದಲೇ ಸುದ್ದಿಗೋಷ್ಠಿಯನ್ನು ನಡೆಸುವ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕಳೆದ ಐದು ದಿನಗಳಿಂದ ಮಾದ್ಯಮ ಸ್ನೇಹಿತರು ಆತಂಕ, ಅನುಕಂಪದಿಂದ ಕಾಯುತ್ತಿದ್ದರು. ಪ್ರಥಮವಾಗಿ ಭಗವಂತನಿಗೆ, ತಂದೆತಾಯಿಗಳ ಆಶೀರ್ವಾದ, ಹಾಗೂ ಡಾಕ್ಟರ್ ಗಳಿಗೆ ಧನ್ಯವಾದ ಹೇಳುತ್ತೇನೆ. ವೈಯಕ್ತಿಕವಾಗಿ ನನಗೆ ಇದು ಮೂರನೆಯ ಘಟನೆಯಾಗಿದೆ. ಭಗವಂತ ನನಗೆ ಕೊಟ್ಟಿರುವ ಮೂರನೆಯ ಜನ್ಮ ಇದು ಎಂದು ಹೇಳಿದರು. 

Latest Videos

ಆಸ್ಪತ್ರೆಯಿಂದಲೇ ಕಾವೇರಿ ಹೋರಾಟಕ್ಕೆ ಕರೆಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ

ಆಪತ್ತಿಗಾದ ಆಪ್ತ ಸಹಾಯಕ ಸತೀಶ್‌:  ಅವತ್ತು ಸತೀಶ್( ಆಪ್ತ ಸಹಾಯಕ) ನನ್ನ ಜೊತೆಯಲ್ಲಿ ಇದ್ದರು. ಆರೋಗ್ಯ ದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿತು. ತಕ್ಷಣವೇ ಡಾ. ಮಂಜುನಾಥ್ ಅವರಿಗೆ ಕರೆ ಮಾಡಿ, ಅವರ ಮೂಲಕ ಡಾ.ಸತೀಶ್ ಚಂದ್ರ ಅವರನ್ನು ಸಂಪರ್ಕ ಮಾಡಲಾಯಿತು. ಬಿಡದಿ ತೋಟದ ಮನೆಯಿಂದ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಇಲ್ಲಿಗೆ ತಲುಪಿದೆ. ನಾನು ಇವತ್ತು ರಾಜಕೀಯ ಹೊರತು ಪಡಿಸಿ ಒಂದೆರಡು ಮಾತು ಹೇಳಬೇಕಿದೆ. ಪ್ರತಿ ಕುಟುಂಬಗಳಲ್ಲೂ ಬಡವ ಶ್ರೀಮಂತ ಯಾರೇ ಆಗಿರಲಿ. ಆರೋಗ್ಯದ ವಿಚಾರದಲ್ಲಿ ಕಾಳಜಿ ಇರಲಿ. ಗೋಲ್ಡನ್ ಪಿರಿಯಡ್ ಬಗ್ಗೆ ಗಮನ ಇರಲಿ ಎಂದು ಹೇಳಿದರು.

ಕರ್ನಾಟಕವನ್ನು ಕತ್ತಲೆಗೆ ತಳ್ಳಿದ ಕುಮಾರ ಕಾರ್ಯಕ್ರಮ ನೋಡಿ ಆಘಾತ: ನಾನು  ಮೊನ್ನೆ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದಿದ್ರೆ,ಇವತ್ತು ಇಷ್ಟು ಸರಾಗವಾಗಿ ಮಾತಾಡಲು ಆಗ್ತಾ ಇರಲಿಲ್ಲ. ವೈದ್ಯರು ಸಹಾ ಬಹಳ ಕಾಳಜಿ ವಹಿಸಿದ್ದಾರೆ. ವಿಷಯ ಗೊತ್ತಾದ ಮರುಘಳಿಗೆ ವೈದ್ಯರು ಸಹಾ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಆರಂಭ ಮಾಡಿದರು. ನಾನು ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಿತ್ತು. ಆದ್ರೆ ವೈದ್ಯರ ಶ್ರಮದಿಂದ ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದೇನೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಎರಡು ಸಲ ಹೃದಯ ಚಿಕಿತ್ಸೆಗೆ ಒಳಗಾಗಿದ್ದೇನೆ. ನಾನು ಎರಡನೇ ಸಲ ಸಿಎಂ ಆದಾಗಾ ವಾಲ್ಮೀಕಿ ಜಯಂತಿ ದಿನ ಮಾದ್ಯಮದಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು. ಕರ್ನಾಟಕವನ್ನು ಕತ್ತಲೆಗೆ ತಳ್ಳಿದ ಕುಮಾರ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಬರ್ತಾ ಇತ್ತು. ಆಗ ಮನಸ್ಸಿಗೆ ಆಘಾತ ಆಗಿ ಹೃದಯದ ಮೇಲೆ ಒತ್ತಡ ಉಂಟಾಗಿತ್ತು ಎಂದರು.

ನಾನು ನಿರ್ಲಕ್ಷ್ಯ ಮಾಡಿದ್ದರೆ ಜೀವನ ಪೂರ್ತಿ ಹಾಸಿಗೆ ಹಿಡಿಯಬೇಕಿತ್ತು: ನಾಡಿನ ಜನತೆಗೆ ಮನವಿ ಮಾಡ್ತೀನಿ. ಇಂತಾ ಲಕ್ಷಣಗಳು ಕಂಡು ಬಂದರೆ ವಿಳಂಬ ಮಾಡಬೇಡಿ. ಹಣದ ಬಗ್ಗೆ ಚಿಂತೆ ಮಾಡಬೇಡಿ. ಮೊದಲು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿ. ನಾನು ಬೆಳಿಗ್ಗೆ ಹೋಗೋಣ ಅಂತ ನಿರ್ಲಕ್ಷ್ಯ ಮಾಡಿದ್ದಿದ್ರೆ, ಜೀವನಪೂರ್ತಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬರ್ತಾ ಇತ್ತು. ಇವತ್ತು, ಚಂದ್ರಯಾನ, ಸೂರ್ಯಯಾನ ಎಲ್ಲಾ ಮಾಡಿ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೂಡಾ ಸಾಕಷ್ಟು ಮುಂದುವರೆದಿದ್ದೇವೆ. ಪರಿಣತಿ ಪಡೆದಿರುವ ವೈದ್ಯರು ಇದ್ದಾರೆ. ಎಲ್ಲರೂ ಜಾಗೃತರಾಗಿ ಇರಬೇಕು ಎಂದು ನನ್ನ ಮನವಿ ಎಂದರು.

ನೀವು ಜನಗಳ ಆಸ್ತಿ, ಆರೋಗ್ಯ ಕಾಪಾಡಿಕೊಳ್ಳಿ: ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ಸದ್ಯದ ಪರಿಸ್ಥಿತಿ ಬಗ್ಗೆ ತಂದೆಯವರು ಹೇಳಿದ್ದಾರೆ. ನಾನು ಇಲ್ಲಿನ ಎಲ್ಲ ವೈದ್ಯರಿಗೆ ಧನ್ಯವಾದಗಳು ಹೇಳ್ತೀನಿ. ತಂದೆ ತಾಯಿ ಮಾಡಿದ ಎಲ್ಲ ಕೆಲಸಗಳು ಅವರನ್ನು ಕಾಪಾಡಿವೆ. ನಾವು ಸಹಜವಾಗಿ ಒತ್ತಡದಲ್ಲಿ ಇದ್ದೆವು. ಹಾಗಾಗಿ ಮಾದ್ಯಮಗಳಿಗೆ ಮಾತಾಡಲು ಆಗಲಿಲ್ಲ. ಮಗನಾಗಿ ತಂದೆ ಬಳಿ ಕೇಳಿಕೊಳ್ತೀನಿ. ನೀವು ಜನಗಳ ಆಸ್ತಿ, ನೀವು ಹಲವಾರು ವರ್ಷಗಳ ಕಾಲ ನಮ್ಮ ಜೊತೆ ಇರಬೇಕು. ಮುಂದಿನ ದಿನಗಳಲ್ಲಿ ಜೀವನ ಶೈಲಿ ಬದಲಿಸಿಕೊಳ್ಳಿ. ಸರಿಯಾಗಿ ಊಟ-ನಿದ್ರೆ ಮಾಡಿ. ಮಾದ್ಯಮದ ಮುಂದೆ ಕುಮಾರಸ್ವಾಮಿಗೆ ಪುತ್ರ ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದರು. 

click me!