ಬೆಂಗಳೂರು Airport ನಲ್ಲಿ ನಿದ್ರೆ ಟೆನ್ಷನ್ ಬೇಡ, ಎಂಟ್ರಿಕೊಟ್ಟಿದೆ Sleeping Pods

Published : Nov 27, 2025, 01:53 PM IST
Sleeping Pod

ಸಾರಾಂಶ

Bengalore Airport Sleeping Pod : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೈಂ ಪಾಸ್ ಮಾಡೋದು ಕಷ್ಟ ಎನ್ನುವವರು ಇನ್ಮುಂದೆ ಟೆನ್ಷನ್ ಫ್ರೀಯಾಗಿ ಇರ್ಬಹುದು. ನಿದ್ರೆಗೊಂದು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆರಾಮವಾಗಿ ನಿದ್ರೆ ಮಾಡಿ ನಿಮ್ಮ ಸುಸ್ತು ಕಡಿಮೆ ಮಾಡಲು ಬಂದ ಸೂಪರ್ ವ್ಯವಸ್ಥೆ ಏನು ಗೊತ್ತಾ?

ಏರ್ಪೋರ್ಟ್ (Airport) ನಲ್ಲಿ ಸಮಯ ಕಳೆಯೋದು ಬಹಳ ಕಷ್ಟ. ಫ್ಲೈಟ್ ವಿಳಂಬವಾದ್ರೆ ಮತ್ತಷ್ಟು ಕಿರಿಕಿರಿ. ಎಲ್ಲ ಕಡೆ ಪ್ರಯಾಣಿಕರಿರೋದ್ರಿಂದ ಟೈಂ ಪಾಸಾಗೋದಿಲ್ಲ. ಓವರ್ ನೈಟ್ ಫ್ಲೈಟ್ ಗೆ ಕಾಯ್ಬೇಕು ಅನ್ನೋರು ಇಲ್ಲ ಒಂದ್ಕಡೆಯಿಂದ ಇನ್ನೊಂದು ಕಡೆ ಫ್ಲೈಟ್ ಬದಲಿಸುವ ಅನಿವಾರ್ಯ ಇರೋರು ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲೇ ಮಲಗುವ ವ್ಯವಸ್ಥೆಗೆ ಹುಡುಕಾಟ ನಡೆಸ್ತಾರೆ. ಒಂಟಿಯಾಗಿ ಪ್ರಯಾಣ ಬೆಳೆಸುವಾಗ ಬೋರ್ ಆಗೋದು ಸಹಜ. ಒಂದಿಷ್ಟು ಲಗೇಜ್ ಭಾರ ಹೊತ್ತುಕೊಂಡು, ಅತ್ತಿಂದಿತ್ತ ಎಷ್ಟು ಓಡಾಡಿದ್ರೂ ಟೈಂ ಪಾಸ್ ಆಗೋದಿಲ್ಲ. ಸ್ವಲ್ಪ ಸಮಯ ಎಲ್ಲಾದ್ರೂ ತಲೆಕೊಟ್ಟು ನಿದ್ರೆ ಮಾಡಿದ್ರೆ ಸಾಕು ಅನ್ನಿಸ್ತಿರುತ್ತೆ. ಜನನಿಬಿಡಿ ಪ್ರದೇಶದಲ್ಲಿ ನಿದ್ರೆ ಬರೋದು ಕಷ್ಟ ಎನ್ನುವವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈಗ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಏರ್ ಪೋರ್ಟ್ ನಲ್ಲಿ ನಿಮಗೆ ಸ್ಲೀಪಿಂಗ್ ಪಾಡ್ ಲಭ್ಯವಿದೆ.

ಬೆಂಗಳೂರು ವಿಮಾನ ನಿಲ್ದಾಣ (Bengalore Airport )ದಲ್ಲಿ ಸ್ಲೀಪಿಂಗ್ ಪಾಡ್ (Sleeping Pod) :

mr.swashbuckler ಹೆಸರಿನ ಇನ್ಸ್ಟಾ ಖಾತೆಯಲ್ಲಿ, ವ್ಲಾಗರ್ ಶಿವ ರೈ, ಸ್ಲೀಪಿಂಗ್ ಪಾಡ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ಲೀಪಿಂಗ್ ಪಾಡ್ ಹೇಗಿದೆ, ಅದ್ರಲ್ಲಿ ಏನೆಲ್ಲ ಸೌಲಭ್ಯವಿದೆ ಅನ್ನೋದನ್ನು ಅವರು ತೋರಿಸಿದ್ದಾರೆ. ಇದನ್ನು ನೋಡಿದ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿದ್ರೆ, ವಿಶ್ರಾಂತಿಗೆ ಇದು ಸೂಕ್ತ ಎನ್ನುವವರು ರೇಟ್ ಹೆಚ್ಚಾಯ್ತು ಎನ್ನುವ ಕಮೆಂಟ್ ಮಾಡಿದ್ದಾರೆ. ವಿಮಾನ ಹಾರಾಟದ ಮೊದಲು ಅಥವಾ ಲೇಓವರ್ ಸಮಯದಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆಯಲು ಇದನ್ನು ಬಳಸಬಹುದು. ಈ ಸ್ಲೀಪಿಂಗ್ ಪ್ಯಾಡ್ ಗೆ ನೀವು ಶುಲ್ಕ ಪಾವತಿ ಮಾಡ್ಬೇಕು. ಇದು KIA ಟರ್ಮಿನಲ್ 1 ರಲ್ಲಿರುವ 080 ಲೌಂಜ್ ಒಳಗೆ ಇದೆ.

ಕಾಂಗ್ರೆಸ್ 'ಸಿಎಂ' ಕುರ್ಚಿ ಕಿತ್ತಾಟ, 'ಅದೇ ರಾಜಕೀಯ' ಎಂದು ನಕ್ಕ ನಟಿ ರಮ್ಯಾ!

ಸ್ಲೀಪಿಂಗ್ ಪಾಡ್ ಹೇಗಿದೆ? :

ಆಟೋಮೆಟಿಕ್ ಆಗಿ ಬಾಗಿಲು ತೆರೆದ ನಂತ್ರ, ವ್ಲಾಗರ್ ಒಳಗೆ ಹೋಗ್ತಾರೆ. ಸ್ಲೀಪಿಂಗ್ ಪಾಡ್ ಒಳಗೆ ಒಂದಿಷ್ಟು ಬಟನ್ ಗಳನ್ನು ನೀವು ಕಾಣ್ಬಹುದು. ಒಳಗೆ ಫ್ಯಾನ್, ಲೈಟ್, ಸೀಟ್ ರಿಕ್ಲೈನ್, ಮ್ಯೂಸಿಕ್, ಹೀಟರ್ ಸೇರಿದಂತೆ ಅನೇಕ ಸೌಲಭ್ಯ ಇದೆ. ಮಸಾಜ್ ಮತ್ತು ಝೀರೋ ಗ್ರಾವಿಟಿ (ಶೂನ್ಯ-ಗುರುತ್ವಾಕರ್ಷಣೆ )ಆಯ್ಕೆಗಳನ್ನೂ ನೀಡಲಾಗಿದೆ. ಎಮರ್ಜೆನ್ಸಿ ಬಟನ್ ಕೂಡ ಇದು ಹೊಂದಿದೆ. ತ್ವರಿತ ನಿದ್ರೆಗೆ ಇದು ಬೆಸ್ಟ್ ಆಯ್ಕೆಯಾಗಿದೆ. ನೀವು ಅರ್ಥ ಗಂಟೆ ವಿಶ್ರಾಂತಿ ಪಡೆಯಬೇಕು ಅಂದ್ರೆ ಈ ಸ್ಲೀಪಿಂಗ್ ಪಾಡ್ ಬಾಡಿಗೆ ಪಡೆಯಬಹುದು.

ವ್ಲಾಗರ್ ಪ್ರಕಾರ, ಈ ಪಾಡ್ಗಳಲ್ಲಿ ಎರಡು ಗಂಟೆಗಳ ಕಾಲ ವಿಶ್ರಾಂತಿ ಪಡೆಯಲು ಸುಮಾರು 1,300 ಖರ್ಚು ಮಾಡ್ಬೇಕು ಅಂತ ಹೇಳಲಾಗಿದೆ. ಪ್ರಯಾಣಿಕರು, ಸ್ಲೀಪರ್ ಪ್ಯಾಡ್ ಒಳಗೆ ಹೋಗುವ ಮೊದಲು ಬೂಟುಗಳನ್ನು ತೆಗೆಯಬೇಕು. ಆದ್ರೆ ಇದು ಎಲ್ಲರಿಗೂ ಸೂಕ್ತವಲ್ಲ. ಕ್ಲಾಸ್ಟ್ರೋಫೋಬಿಕ್ ವ್ಯಕ್ತಿಗಳಿಗೆ ಇದು ಸಮಸ್ಯೆ ತರಬಹುದು. ಒಂದು ಚಿಕ್ಕ ಗೂಡಿನಲ್ಲಿ ಮಲಗೋದು ಅನೇಕರಿಗೆ ಉಸಿರುಗಟ್ಟಿಸಿದ ಅನುಭವ ನೀಡುತ್ತದೆ. ಅಂಥವರಿಗೆ ಈ ಸ್ಲೀಪಿಂಗ್ ಪಾಡ್ ಯೋಗ್ಯವಲ್ಲ.

ಬೆಂಗಳೂರು 7 ಕೋಟಿ ದರೋಡೆ ಪ್ರಕರಣ: ಗರ್ಭಿಣಿ ಪತ್ನಿಯರ ಆರೋಗ್ಯ ವಿಚಾರಿಸಿ ಸಿಕ್ಕಿಬಿದ್ದ ಕಳ್ಳರು!

ವ್ಲಾಗರ್ ವಿಡಿಯೋ ನೋಡಿದ ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಎಂಟ್ರಿ ನೀಡಿರುವ ಈ ಸ್ಲೀಪಿಂಗ್ ಪಾಡ್ ಅನೇಕರಿಗೆ ಇಷ್ಟವಾಗಿದೆ. ಇದು ಕೂಲ್ ಆಗಿದೆ, ಒಳಗೆ ಮಲಗಿದ್ರೆ ಫ್ಲೈಟ್ ತಪ್ಪಿಸಿಕೊಳ್ಳೋದು ಗ್ಯಾರಂಟಿ, ಇಂಥ ಸ್ಲೀಪಿಂಗ್ ಪಾಡ್ ಆಫೀಸ್ ಗೂ ಅಗತ್ಯ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಇದು ಉಸಿರುಗಟ್ಟಿಸಿದ ಅನುಭವ ನೀಡ್ತಿದೆ, ಎಂಆರ್ ಐ ನೆನಪು ಮಾಡ್ತಿದೆ, ಎರಡು ಗಂಟೆಗೆ 1300 ದುಬಾರಿ ಆಯ್ತು, ಎರಡು ಜನ ಮಲಗೋಕೆ ಸಾಧ್ಯ ಇಲ್ವಾ ಅಂತೆಲ್ಲ ಕಮೆಂಟ್ ಮಾಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್