'ಪುಡಿ ರಾಜಕಾರಣಿ' ಯಾರು ಅನ್ನೋದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೂ ಗೊತ್ತಿದೆ; ಬಿಕೆ ಹರಿಪ್ರಸಾದ ವಿರುದ್ಧ ಹರೀಶ್ ಪೂಂಜಾ ಕಿಡಿ

By Ravi Janekal  |  First Published Oct 28, 2024, 11:00 AM IST

ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ವಿಶೇಷ ಗೌರವ ಇದೆ. ಗುರುಗಳನ್ನು ನಿಂದಿಸಿ ಹಿಂದೂಗಳ ಭಾವನೆಗೆ ಘಾಸಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹರಿಹಾಯ್ದರು.


ಮಂಗಳೂರು (ಅ.28): ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ವಿಶೇಷ ಗೌರವ ಇದೆ. ಗುರುಗಳನ್ನು ನಿಂದಿಸಿ ಹಿಂದೂಗಳ ಭಾವನೆಗೆ ಘಾಸಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹರಿಹಾಯ್ದರು.

ಪೇಜಾವರ ಶ್ರೀಗಳ ವಿರುದ್ಧ 'ಪುಡಿ ರಾಜಕಾರಣಿ' ಎಂಬ ಬಿಕೆ ಹರಿಪ್ರಸಾದ್ ಹೇಳಿಕೆ ಕುರಿತಂತೆ ಇಂದು ಮಂಗಳೂರಿನಲ್ಲಿ ಮಾದ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಸಕರು, ಪೇಜಾವರಶ್ರೀಗಳ ವಿರುದ್ಧ ಹೇಳಿದಂತೆ ಬಿಕೆ ಹರಿಪ್ರಸಾದ್‌ಗೆ ತಾಕತ್ ಇದ್ರೆ ಮುಸಲ್ಮಾನ ಧರ್ಮ ಗುರುಗಳು, ಕ್ರೈಸ್ತ ಪಾದ್ರಿಗಳ ಬಗ್ಗೆ ಅವಹೇಳನ ಮಾಡಲಿ ನೋಡೋಣ, ಸೌಮ್ಯ ಸ್ವಭಾವದ ಹಿಂದೂ ಧಾರ್ಮಿಕ ಗುರುಗಳ ಮೇಲೆ ಏನು ಮಾತಾಡಿದ್ರೂ ನಡೆಯುತ್ತೆ ಎಂದುಕೊಂಡಿದ್ದೀರ? ಎಂದು  ಪ್ರಶ್ನಿಸಿದರು.

Tap to resize

Latest Videos

undefined

ಮಾತಾಡುವ ಹಕ್ಕಿರೋದು ರಾಜಕಾರಣಿಗಳಿಗೆ ಮಾತ್ರವಾ?; 'ಪುಡಿ ರಾಜಕಾರಣಿ' ಎಂದ ಬಿಕೆ ಹರಿಪ್ರಸಾದ್ ವಿರುದ್ಧ ಪೇಜಾವರಶ್ರೀ ವಾಗ್ದಾಳಿ

ಬಿಕೆ ಹರಿಪ್ರಸಾದ್ ಡಿಎನ್‌ಎ ಟೆಸ್ಟ್ ಮಾಡಬೇಕು:

ಹಿಂದೂ ಮತ್ತು ಮುಸಲ್ಮಾನರ ಡಿಎನ್‌ಎ ಒಂದೇ ಆಗಿದೆ ಅಂತಾ ಹಿಂದೊಮ್ಮೆ ಬಿಕೆ ಹರಿಪ್ರಸಾದ್ ಹೇಳಿದ್ರು. ಇದನ್ನ ನಾವು ಒಪ್ಪುವುದಿಲ್ಲ ಹಿಂದೂಗಳ ಡಿಎನ್‌ಎ ರಾಮನ ಹಾಗೂ ಕೃಷ್ಣನ ಡಿಎನ್‌ಎ  ಆಗಿದೆ. ನಿಮ್ಮ ಡಿಎನ್‌ಎ ಯಾವುದು ಮೊದಲು ಚೆಕ್ ಮಾಡಿಸಿಕೊಳ್ಳಿ. ನಿಮ್ಮದು ಹಿಂದೂ ಡಿಎನ್‌ಎ ಆಗಿದ್ರೆ ಹಿಂದೂ ಸ್ವಾಮೀಜಿಗಳ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಕೇಸರಿಯ, ಕಾವಿಯ ಬಗ್ಗೆ ಹರಿಪ್ರಸಾದ್ ಗೆ ಯಾಕೆ ಗೌರವ  ಇಲ್ಲ? ಅವರ ಡಿಎನ್‌ಎಯಲ್ಲಿ ಕೇಸರಿ ಇದೆಯಾ, ಹಸಿರು ಬಣ್ಣ ಇದೆಯೇ ನೋಡಬೇಕು ಅಥವಾ ಬಿಳಿ ಇದೆಯಾ ನೋಡಬೇಕು. ಮೊದಲು ಅವರ ಡಿಎನ್‌ಎ ಟೆಸ್ಟ್ ಮಾಡಿಸಬೇಕು. ಎಂದು ತಿರುಗೇಟು ನೀಡಿದರು.

ಒಂದು ಚುನಾವಣೆ ಗೆಲ್ಲುವ ಯೋಗ್ಯತೆ ಇಲ್ಲ:

ಜಾತಿಗಣತಿ ಕುರಿತಂತೆ ಸ್ವಾಮೀಜಿ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವ ಹಕ್ಕು ಇದೆ. ಅದೇ ರೀತಿ ಜಾತ್ಯಾತೀತ ಭಾರತದಲ್ಲಿ ಜಾತಿಗಣತಿ ಅಗತ್ಯವೇನಿದೆ ಎಂದು ಪ್ರಶ್ನಿಸಿರುವುದರಲ್ಲಿ ತಪ್ಪೇನಿದೆ?  ಪೇಜಾವರಶ್ರೀಗಳು ಎಲ್ಲ ಜಾತಿಗಳನ್ನು ಮೀರಿ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹ ಸ್ವಾಮೀಜಿಗಳಿಗೆ ಪುಡಿ ರಾಜಕಾರಣಿ ಅಂತೀರಾ? ಪುಡಿ ರಾಜಕಾರಣಿ ಯಾರು ಎಂದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೆ ಗೊತ್ತಿದೆ. ಬಿಕೆ ಹರಿಪ್ರಸಾದ್ ಯೋಗ್ಯತೆಗೆ ಒಂದು ಚುನಾವಣೆ ಗೆಲ್ಲೋ ಯೋಗ್ಯತೆ ಇಲ್ಲ.

ಜಾತಿಗಣತಿ ವರದಿಯಿಂದ ವೈಷಮ್ಯ ಸೃಷ್ಟಿ ಸಾಧ್ಯತೆ: ಪೇಜಾವರ ಶ್ರೀ

ಪುಡಿ ರಾಜಕಾರಣಿಯಂತೆ ಬಾಯಿಗೆ ಬಂದಾಗೆ ಮಾತಾಡೋದೇ ಅವರ ಸಾಧನೆ. ರಾಜಕಾರಣದಲ್ಲಿ ಬಿಕೆ ಹರಿಪ್ರಸಾದ್ ಸಾಧನೆ ಏನೂ ಇಲ್ಲ, ಹಿಂಬಾಗಿಲ ಮೂಲಕ ಗಾಂಧಿ ಕುಟುಂಬಕ್ಕೆ ಆತ್ಮೀರಾಗಿದ್ದುಕೊಂಡು ಅದನ್ನೇ ಬಂಡಾವಳ ಮಾಡಿಕೊಂಡು ರಾಜಕಾರಣ ಮಾಡಿಕೊಂಡು ಬಂದವರು ಬಿಕೆ ಹರಿಪ್ರಸಾದ್. ನಿಮ್ಮ ಬಳಿ ರಾಜಕಾರಣ ಮಾಡುವ ಯೋಗ್ಯತೆಯೂ ಇಲ್ಲ, ಚುನಾವಣೆ ಗೆಲ್ಲುವ ಯೋಗ್ಯತೆಯೂ ಇಲ್ಲ. ಹೀಗಾಗಿ ನಿಮ್ಮನ್ನು ನಿಮ್ಮದೇ ಪಕ್ಷದಲ್ಲಿ ಮೂಲೆಗುಂಪು ಮಾಡಿರುವುದು ಎಂದು ವಾಗ್ದಾಳಿ ನಡೆಸಿದರು.

ಲವ್ ಜಿಹಾದ್ ಕೇಸ್ ಎನ್‌ಐಗೆ ವಹಿಸಬೇಕು:

ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಲವ್ ಜಿಹಾದ್ ಪ್ರಕರಣಗಳು ಕಾಂಗ್ರೆಸ್ ಸರ್ಕಾರದಲ್ಲಿ ಸಮರ್ಪಕವಾಗಿ ತನಿಖೆ ನಡೆಯುವುದು ಅಸಾಧ್ಯ. ಸುರತ್ಕಲ್ ಬ್ಲಾಕ್ ಮೇಲ್ ಪ್ರಕರಣದಲ್ಲಿ ಸ್ಟೇಷನ್ ಬೇಲ್ ಆಗೋ ಸೆಕ್ಷನ್ ಹಾಕಿದ್ದಾರೆ. ಲವ್ ಜಿಹಾದ್ ಪ್ರಕರಣಗಲ್ಲಿ ರಾಜ್ಯ ಪೊಲೀಸರಿಂದ ಸಮರ್ಪಕ ತನಿಖೆ ನಿರೀಕ್ಷಿಸುವಂತಿಲ್ಲ. ಹೀಗಾಗಿ ಲವ್ ಜಿಹಾದ್ ಪ್ರಕರಣಗಳನ್ನು ಎನ್‌ಐಎ ತನಿಖೆಗೆ ವಹಿಸಬೇಕು. ಲವ್ ಜಿಹಾದ್ ವಿರುದ್ಧ ಪ್ರತ್ಯೇಕ ಕಾನೂನು ಜಾರಿಯಾಗಬೇಕು. ಎನ್‌ಐಎದ ಒಂದು ಶಾಖೆ ಮಂಗಳೂರಿನಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

click me!