* ಸರ್ಕಾರಿ ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿ ಹೆರಿಗೆ.!
* ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ IAS ಅಧಿಕಾರಿ
* ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಗುವಿಗೆ ಜನ್ಮ ನೀಡಿ ಮಾದರಿ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಳ್ಳಾರಿ, (ಮಾ.17): ಸರ್ಕಾರಿ ಆಸ್ಪತ್ರೆ (Government Hospital) ಅಂದ್ರೆ ಮೂಗು ಮುರಿಯೋರೆ ಜಾಸ್ತಿ.. ಸರಿಯಾದ ವ್ಯವಸ್ಥೆ ಇರೋದಿಲ್ಲ ಇಲ್ಲಿ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚು ಅನ್ನೋ ಮಾತು ಕೇಳಿ ಬರುತ್ತದೆ. ಆದರೆ, ಇಲ್ಲೊಬ್ಬರು ಐಎಎಸ್ ಅಧಿಕಾರಿ(IAS officer) ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಗುವಿಗೆ ಜನ್ಮ ನೀಡಿ ಮಾದರಿಯಾಗಿದ್ದಾರೆ.
ಹೌದು....ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಓ ಆಗಿರುವ ಐಎಎಸ್ ಅಧಿಕಾರಿ ಕೆ ಆರ್ ನಂದಿನಿ ಅವರು (Bellary ZP CEO IAS KR Nandini) ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ (Bellary District Hospital) ಮಾಡಿಸಿಕೊಂಡಿದ್ದು, ನಾರ್ಮಲ್ ಡೆಲಿವರಿ (normal delivery) ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
undefined
Nykaa ಸ್ಥಾಪಕಿ ಫಲ್ಗುಣಿ ನಾಯರ್: ಬಿಲಿಯನೇರ್ ಉದ್ಯಮಿಯ ಯಶೋಗಾಥೆ
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳವು ಮಮೂಲಕ ಈ ಐಎಎಸ್ ಅಧಿಕಾರಿ ಕೆ ಆರ್ ನಂದಿನಿ ಮಾದರಿಯಾಗಿದ್ದಾರೆ.ಬಳ್ಳಾರಿಯ ಗೋಷಾಸ್ಪತ್ರೆ ( ಜಿಲ್ಲಾಸ್ಪತ್ರೆ ) ಬ್ರಿಟಿಷರ ಕಾಲದ್ದು, ಕಾಲಕಾಲಕ್ಕೆ ಮಾರ್ಪಾಡು ಮಾಡೋ ಮೂಲಕ ಸದ್ಯ ಸುಸಜ್ಜಿತ ಆಸ್ಪತ್ರೆಯಾಗಿದೆ. ಈ ಐಎಎಸ್ ಅಧಿಕಾರಿ ತಮ್ಮ ಹೆರಿಗೆಯನ್ನು ಮಾಡಿಸಿಕೊಳ್ಳುವ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಹೆಣ್ಣು ಮಗುವಿಗೆ ಜನ್ಮ
ಹೆರಿಗೆ ನೋವಿನಿಂದ ನಿನ್ನೆ (ಮಾ.16) ತಡರಾತ್ರಿ ಗೋಷಾಸ್ಪತ್ರೆಗೆ ದಾಖಲಾದ ನಂದಿನಿ ಅವರಿಗೆ ಇಂದು (ಗುರುವಾರ) ಬೆಳಿಗ್ಗೆ ಸ್ವಾಭಾವಿಕ ( ನಾರ್ಮಲ್) ಹೆರಿಗೆ ಆಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಸುರಕ್ಷಿತರಾಗಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ. ಬಸರೆಡ್ಡಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ ಕೆ.ಸುಧಾಕರ್ ಹಾಗೂ ಆಯುಕ್ತ ರಂದೀಪ್.ಡಿ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಐಎಎಸ್ ಅಧಿಕಾರಿ ಕೆ ಆರ್ ನಂದಿನಿ ನಡೆ ಪ್ರಶಂಸನೀಯ ಎಂದಿದ್ದಾರೆ.
2016ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ರ‍್ಯಾಂಕ್ ಪಡೆದು ಕರ್ನಾಟಕದ ಗರಿಮೆ ಹೆಚ್ಚಿಸಿದ್ದ ಕೋಲಾರದ ಚಿನ್ನದ ಹುಡುಗಿ ಕೆ.ಆರ್.ನಂದಿನಿ ಅವರು ಈಗ ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಯನ್ನು ಆಯ್ದುಕೊಳ್ಳುವ ಮೂಲಕ ಮತ್ತೊಮ್ಮೆ ಸಮಾಜಕ್ಕೆ ಮಾದರಿಯಾಗಿದ್ದಾರೆ. pic.twitter.com/nkxhIWC1Is
— Dr Sudhakar K (@mla_sudhakar)ಬಳ್ಳಾರಿಯ ಜಿಲ್ಲಾ ಪಂಚಾಯತ್ ಸಿ.ಇ.ಒ
ಶ್ರೀಮತಿ. ನಂದಿನಿ. ಕೆ.ಆರ್. ಐ.ಎ.ಎಸ್ ಇವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾರೆ. ತಮ್ಮ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಯನ್ನು ಆಯ್ದುಕೊಂಡ ಇವರ ನಡೆ ಪ್ರಶಂಸನೀಯ. pic.twitter.com/02ZilZ0VJA
ಐಎಎಸ್ ಅಧಿಕಾರಿ ಬಗ್ಗೆ
ಇನ್ನೂ ನಂದಿನಿ ಅವರು 2016ನೇ ಐಎಎಸ್ ಬ್ಯಾಚಿನ ದೇಶದ ಟಾಪರ್ ಆಗಿದ್ದು, ಕಳೆದ ಎರಡು ವರ್ಷದಿಂದ ಬಳ್ಳಾರಿಯಲ್ಲಿ ಸಿಇಓ ಅಗಿ ಕೆಲಸ ನಿರ್ವಹಣೆ ಮಾಡ್ತಿದ್ದಾರೆ. ಎರಡು ವರ್ಷಗಳ ಹಿಂದೆ ಬಳ್ಳಾರಿಗೆ ಬಂದಿರುವ ಇವರು, ಮೊದಲು ತಿಪಟೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದರು. ಮೂಲತಃ ಕೋಲಾರದ ಕೆಂಬೋಡಿ ಗ್ರಾಮದವರು ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿ ಬೆಳಗಾವಿಯ ವಿಟಿಯು ನಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೇಡಲ್ ಪಡೆದಿದ್ದಾರೆ..
ಇತಿಹಾಸ ಇರೋ ಆಸ್ಪತ್ರೆ
ಈ ಹಿಂದೆ ಇದೇ ಗೋಷಾಸ್ಪತ್ರೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಎಸ್.ಎಸ್. ನಕುಲ್, ಡಾ. ರಾಜೇಂದ್ರ ಇವರ ಪತ್ನಿಯರು, ಜಿಲ್ಲಾಮುಖ್ಯ ನ್ಯಾಯಾಧೀಶ ಬಿರಾದರ್ ಅವರ ಪುತ್ರಿ, ಮಾಜಿ ಮೇಯರ್ ಉಮಾದೇವಿರವರ ಮಕ್ಕಳ ಹೆರಿಗೆಯು ಸಹ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.