ನನ್ನ ಸಿಡಿ ಕೇಸ್‌ನಲ್ಲಿಯೂ ಡಿ.ಕೆ. ಶಿವಕುಮಾರ್ ಅವರ ಆಡಿಯೋ ಇದೆ. ಇದರಲ್ಲಿ ನಮ್ಮವರೂ ಕೈ ಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ, ಗೃಹ ಸಚಿವರ ಸಿಡಿಗಳೂ ಬಿಡುಗಡೆ ಆಗಲಿವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ (ಮೇ 07): ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಅಶ್ಲೀಲ ವಿಡಿಯೋ ಕೇಸಿನಲ್ಲಿ ಮಹಾನ್ ನಾಯಕ ಡಿ.ಕೆ. ಶಿವಕುಮಾರ್ ಮಾತ್ರ ಭಾಗಿಯಾಗಿಲ್ಲ. ನಮ್ಮವರೂ ಈ ಕೇಸ್ ನಲ್ಲಿ ಇದ್ದಾರೆ. ಜೂನ್ 4ರ ನಂತರ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮತದಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಡಿ.ಕೆ. ಶಿವಕುಮಾರ್ ಆಡಿಯೋ ಸುತ್ತು ಹಾಕಿಕೊಂಡಿದೆ. ನನ್ನ ಕೇಸ್ ನಲ್ಲಿಯೂ ನೇರವಾಗಿ ಇರೋದು ಇದೆ. ಡಿ.ಕೆ.ಶಿವಕುಮಾರ್ ನೇರವಾಗಿ ಭಾಗಿಯಾದ ಬಗ್ಗೆ ನನ್ನ ಬಳಿ ಸಾಕ್ಷಿ ಇವೆ. ಅವರ ಬಳಿ ಅಲ್ಲಿ, ಇಲ್ಲಿ ಅಂತಾ ಸುತ್ತು ಹಾಕಿರೋದು ಇದ್ದರೆ, ನನ್ನ ಬಳಿ ನೇರವಾಗಿ ಮಾತನಾಡಿರುವುದೇ ಇದೆ. ನನ್ನ ಕೇಸ್ ನಲ್ಲಿ ಡಿಕೆ ಶಿವಕುಮಾರ್ ಮಾತಾಡಿರುವ ಆಡಿಯೋವನ್ನೇ ಕೊಡ್ತೇನೆ. ನನ್ನ ಬಗ್ಗೆ ಷಡ್ಯಂತ್ರ ಮಾಡಿದ್ದು ಇದೆ, ಆದ್ರೇ ಮಾಧ್ಯಮದ ಮುಂದೆ ಕೊಡಲ್ಲ. ಸಿಬಿಐಗೆ ಕೇಸ್ ಕೊಟ್ಟರೆ ಮಾತ್ರ ಸಾಕ್ಷಿ ಕೊಡ್ತೀನಿ ಎಂದು ತಿಳಿಸಿದರು.
LIVE: Chikkodi Lok sabha Elections 2024: ಜೊಲ್ಲೆ Vs ಜಾರಕಿಹೊಳಿ ; ಬೆಳಗ್ಗೆ 9 ಗಂಟೆಗೆ ಶೇ.10.81 ಮತದಾನ
ನನ್ನ ಕೇಸ್ ನಲ್ಲೂ ಎಸ್‌ಐಟಿ ವಿಶ್ವಾಸ ಇಲ್ಲ, ಈಗಲೂ ಎಸ್ಐಟಿ ಮೇಲೆ ವಿಶ್ವಾಸ ಇಲ್ಲ. ಸಿಬಿಐಗೆ ಕೇಸ್ ಕೊಟ್ರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿ ಮಾಡಬೇಕು. ಮಹಾನ್ ನಾಯಕ ಹಣದಲ್ಲಿ ಬಹಳಷ್ಟು ಪ್ರಭಾವಿ ಇದ್ದಾರೆ. ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡಬೇಕು ಅನ್ನೋ ಸೊಕ್ಕು ಇದೆ. ದೇಶದಲ್ಲಿ ಕಾನೂನು ಉಳಿಯಬೇಕು ಅಂದ್ರೆ, ಈ ಕೇಸ್ ನಲ್ಲಿ ಫಿಕ್ಸ್ ಆಗಬೇಕು. ನನ್ನ ಕೇಸ್ ನಲ್ಲಿ ಬರೀ ಡಿ.ಕೆ. ಶಿವಕುಮಾರ್ ಭಾಗಿಯಾಗಿಲ್ಲ. ನಮ್ಮವರೂ ಈ ಕೇಸ್ ನಲ್ಲಿ ಇದ್ದಾರೆ. ಜೂನ್ 4ರ ನಂತರ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದರು.
ಸಿಡಿ ಬಿಡುಗಡೆ ಪ್ರಕರಣದಲ್ಲಿ ಸತತ ನಾಲ್ಕು ವರ್ಷದಿಂದ ಕ್ವೆಶ್ಚನ್ ಮಾರ್ಕ್ ಇದೆ. ಇದೆಲ್ಲದಕ್ಕೂ ಜೂನ್ 4ರ ನಂತರ ಇತಿಶ್ರೀ ಹಾಡೋಣ. ಇನ್ನು ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಯಾರು ಹೆಮ್ಮೆ ಪಡುವ ವಿಷಯ ಅಲ್ಲ. ಎಲ್ಲರೂ ತಲೆ ತಗ್ಗಿಸುವ ವಿಷಯ, ಬಹಳ ಕೆಟ್ಟ ಪ್ರಮಾಣದಲ್ಲಿ ಆಗಿದೆ. ರೇವಣ್ಣ ಕಾನೂನು ರೀತಿ ಹೋರಾಟ ಮಾಡಲಿ ಎಂದು ಹೇಳಿದರು.
ಸಂಸದ ಪ್ರಜ್ವಲ್‌ರಂಥವರ ಬಗ್ಗೆ ಸಹಿಷ್ಣುತೆ ಇರಬಾರದು, ಕಠಿಣ ಕ್ರಮ ಕೈಗೊಳ್ಳಬೇಕು : ಮೋದಿ
ನಾಲ್ಕು ವರ್ಷಗಳ ಹಿಂದೆ ನನ್ನ ಸಿಡಿ ಬಂದಿದೆ. ಈಗ ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಬಂದಿದೆ. ಮುಂದೆ ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರದ್ದು ಸಿಡಿ ಬರಬಹುದು. ಮೊದಲಿನಿಂದ ಸಿಡಿ ವಿಚಾರದ ಕುರಿತು ಪದೇ ಪದೇ ಹೇಳಿಕೊಂಡು ಬಂದಿದ್ದೆ. ಆಗ ಎಲ್ಲರೂ ನನ್ನ ನೆಗ್ಲೆಟ್ ಮಾಡಿದ್ರೂ ನಗ್ತಾ ಕೂತಿದ್ರು. ಇವತ್ತು ಒಬ್ಬರಿಗೆ ಆಗಿದೆ, ಮುಂದೆ ಸಿದ್ದರಾಮಯ್ಯಗೂ ಹಾಗೂ ಪರಮೇಶ್ವರ ಅವರಿಗೂ ಬರಬಹುದು. ದಯವಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇದಕ್ಕೆ ಇತಿಶ್ರೀ ಹಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನವಿ ಮಾಡಿದರು.