
ಬೆಳಗಾವಿ (ಸೆ.05): ಇಲ್ಲಿನ ಬೀಮ್ಸ್ ಆಸ್ಪತ್ರೆಯಲ್ಲಿ ನಕಲಿ ನರ್ಸ್ ಹುಚ್ಚಾಟ ಮೆರೆದಿದ್ದು, ನಾನು ನರ್ಸಿಂಗ್ ವಿದ್ಯಾರ್ಥಿನಿ ಎಂದು ಆಸ್ಪತ್ರೆಯ ರೋಗಿಗಳಿಗೆ ಟ್ರೀಟ್ಮೆಂಟ್ ಕೊಡ್ತಿರುವ ಆರೋಪ ಕೇಳಿಬಂದಿದೆ. ಎರಡ್ಮೂರು ತಿಂಗಳಿಂದ ನರ್ಸಿಂಗ್ ವಿದ್ಯಾರ್ಥಿನಿ ಎಂದು ಹೇಳಿ ರೋಗಿಗಳಿಗೆ ಕಾರವಾರ ಮೂಲದ ಸನಾ ಶೇಖ್ ಎಂಬಾಕೆ ಚಿಕಿತ್ಸೆ ನೀಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ.
ಸದ್ಯ ಬೆಳಗಾವಿ ಕುಮಾರಸ್ವಾಮಿ ಲೇಔಟ್ ನಲ್ಲಿ ಸನಾ ವಾಸ ಇರೋ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ನರ್ಸ್ ವಿದ್ಯಾರ್ಥಿನಿ ವೇಷ ಧರಿಸಿ ಓಡಾಟದ ವೇಳೆ ಸಿಕ್ಕಿಬಿದ್ದಿದ್ದಾಳೆ. ಸರ್ಜಿಕಲ್ ವಾರ್ಡ್, ಓಪಿಡಿ ಹೀಗೆ ಆಸ್ಪತ್ರೆ ಎಲ್ಲ ವಿಭಾಗದಲ್ಲೂ ಓಡಾಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಬೀಮ್ಸ್ ನಲ್ಲಿ ಕಳೆದ ಮೂರು ತಿಂಗಳಿನಿಂದ ಪ್ರ್ಯಾಕ್ಟೀಸ್ ಮಾಡ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಸನಾ ಚಿಕಿತ್ಸೆ ಬಗ್ಗೆ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಬೀಮ್ಸ್ ನಿರ್ದೇಶಕರ ಹೆಸರೇಳಿ ನಕಲಿ ನರ್ಸ್ ಧಮ್ಕಿ ಹಾಕಿದ್ದಾಳೆ.
ಇದೀಗ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೆಕ್ಯೂರಿಟಿ ಗಾರ್ಡ್ ಕೈಗೆ ಆಗಿ ಸಿಕ್ಕಿಬಿದ್ದ ನಕಲಿ ನರ್ಸ್ ಅನ್ನು ತಕ್ಷಣವೇ ಬೆಳಗಾವಿ ಬೀಮ್ಸ್ ಸರ್ಜನ್, ಆರ್ ಎಂಓ ಗಮನಕ್ಕೆ ಬೀಮ್ಸ್ ಸೆಕ್ಯೂರಿಟಿ ತಂದಿದ್ದಾರೆ. ವಿಚಾರಣೆ ವೇಳೆ ಬೇರೊಂದು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡ್ತಿರೋದು ದೃಢವಾಗಿದ್ದು, ಆಸ್ಪತ್ರೆಯಲ್ಲಿರೋ ವಿಭಾಗವೊಂದರ ಹೆಡ್ ಕುಮ್ಮಕ್ಕಿಂದ ಪ್ರ್ಯಾಕ್ಟೀಸ್ ಮಾಡ್ತಿರೋ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಈ ಯಡವಟ್ಟಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಬೀಮ್ಸ್ ಆಡಳಿತ ಮಂಡಳಿ ನಕಾರ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ