ಧರ್ಮಸ್ಥಳ ವಿರೋಧಿ ವಿಡಿಯೋ ಮಾಡಲು ನನಗೂ ಆಫರ್ ಬಂದಿತ್ತು: ಯೂಟ್ಯೂಬರ್ ಸುಮಂತ್ ಶಾಕಿಂಗ್ ಹೇಳಿಕೆ

Published : Sep 05, 2025, 09:40 AM IST
ಧರ್ಮಸ್ಥಳ ವಿರೋಧಿ ವಿಡಿಯೋ ಮಾಡಲು ನನಗೂ ಆಫರ್ ಬಂದಿತ್ತು: ಯೂಟ್ಯೂಬರ್ ಸುಮಂತ್ ಶಾಕಿಂಗ್ ಹೇಳಿಕೆ

ಸಾರಾಂಶ

ಧರ್ಮಸ್ಥಳ ವಿರುದ್ಧ ವಿಡಿಯೋ ಮಾಡುವಂತೆ ನನಗೂ ಆಫರ್ ಬಂದಿತ್ತು. ನನ್ನ ಸ್ನೇಹಿತ ಯುನೈಟೆಡ್ ಮೀಡಿಯಾ ಅಭಿಷೇಕ್ ಆಫರ್ ಮಾಡಿದ್ದ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಗೋಲ್ಡನ್ ಕನ್ನಡಿಗ ಯೂಟ್ಯೂಬರ್ ಸುಮಂತ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮಂಡ್ಯ (ಸೆ.05): ಧರ್ಮಸ್ಥಳ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಅಪಪ್ರಚಾರ ನಡೆಸಲು ಯೂಟ್ಯೂಬರ್ ಹಾಗೂ ಕ್ರಿಯೇಟರ್‌ಗಳಿಗೆ ಫಂಡಿಂಗ್ ಆಗಿದೆ. ಧರ್ಮಸ್ಥಳ ವಿರುದ್ಧ ವಿಡಿಯೋ ಮಾಡುವಂತೆ ನನಗೂ ಆಫರ್ ಬಂದಿತ್ತು. ನನ್ನ ಸ್ನೇಹಿತ ಯುನೈಟೆಡ್ ಮೀಡಿಯಾ ಅಭಿಷೇಕ್ ಆಫರ್ ಮಾಡಿದ್ದ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಗೋಲ್ಡನ್ ಕನ್ನಡಿಗ ಯೂಟ್ಯೂಬರ್ ಸುಮಂತ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಎರಡು ವರ್ಷದಿಂದ ಯೂಟ್ಯೂಬರ್ ಅಭಿಷೇಕ್ ನನಗೆ ಪರಿಚಯ. 5 ತಿಂಗಳ ಹಿಂದೆ ಚಂದನ್‌ಗೌಡರ ಬಟ್ಟೆ ಅಂಗಡಿ ಉದ್ಘಾಟನೆಯಲ್ಲಿ ಅಭಿ ಸಿಕ್ಕಿದ್ದ.

ನಾನು ಸಮೀರ್ ವಿಡಿಯೋ ಹೇಗೆ ಇಷ್ಟು ವೈರಲ್ ಆಯ್ತು ಎಂದು ಕುತೂಹಲದಿಂದ ಕೇಳಿದೆ. ಬರೀ ವಿಡಿಯೋ ವೈರಲ್ ಆಗಿರೋದು ನೋಡ್ತಾ ಇದ್ದೀಯಾ, ಅದರ ಹಿಂದೆ ಇರೋದು ನೀನು ಗೊತ್ತಿಲ್ಲ. 300-400 ಟ್ರೋಲ್ ಪೇಜ್‌ಗಳು, 50-60ಕ್ರಿಯೆಟರ್‌ಗಳು ಕೆಲಸ ಮಾಡಿದ್ದಾರೆ ಎಂದು ಅಭಿ ಹೇಳಿದ್ದ. ಅಂದು ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಿದ್ರೆ ಹಣ ಕೊಡ್ತೀವಿ ಅಂದಿದ್ದ. ನಾವು ಕೊಡುವ ಕಂಟೆಂಟ್‌‌‌ಗಳನ್ನು ನಿನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಬೇಕು. ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟು, ಊಟ ತಿಂಡಿ ದುಡ್ಡು ಸಹ ಕೊಡುವುದಾಗಿ ಹೇಳಿದ್ದ.

ಆಗ ನಾನು ನಿಮಗೆ ಯಾರು ಗುರು ಫಂಡ್ ಮಾಡೋದು ಎಂದು ಕೇಳ್ದೆ. ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ನಮ್ಮ ಬಾಸ್. ಎಲ್ಲಾ ಅವರು ನೋಡಿ ಕೊಳ್ತಾರೆ ಬಾ ಎಂದು ಕರೆದರು. ನಾನು ಆಗಲ್ಲ ಎಂದು ಬಂದು ಬಿಟ್ಟೆ. ನ್ಯೂಸ್ ಅಲರ್ಟ್ ಯೂಟ್ಯೂಬರ್ ಚಂದನ್‌ಗೌಡಗೂ ಸಹ ಫಂಡ್ ಆಗಿದೆ. ಯುನೈಟೆಡ್ ಮೀಡಿಯಾ ಅಭಿಷೇಕ್ ಚಂದನ್‌ಗೌಡಗೆ ಎಡಿಟರ್ ಆಗಿದ್ದ. ಎಲೆಕ್ಷನ್‌ಗೆ ಸ್ಪರ್ಧೆ ಮಾಡಿದಾಗ ದುಡ್ಡಿಲ್ಲದೆ ಚೈನ್ ಅಡವಿಟ್ಟ. ಚಂದನ್‌ಗೌಡ 50ಲಕ್ಷದ ಬಟ್ಟೆ ಅಂಗಡಿ ಮಾಡಲು ದುಡ್ಡು ಎಲ್ಲಿಂದ ಬಂತು? ಬರೀ ಯೂಟ್ಯೂಬ್ ವಿಡಿಯೋಗಳಿಂದ ಅಷ್ಟೊಂದು ಸಂಪಾದನೆ ಮಾಡಲು ಸಾಧ್ಯಾನ?

ಸಮೀರ್‌ಗೂ ಸಹ ಫಂಡ್ ಆಗಿದೆ. AI ವಿಡಿಯೋ ಮಾಡಲು ಲಕ್ಷಾಂತರ ರೂಪಾಯಿ ಹಣ ಬೇಕು. ಇವರಿಗೆಲ್ಲಾ ಎಲ್ಲಿಂದ ಹಣ ಬರುತ್ತಿದೆ? ಇದು ಎಲ್ಲವೂ ಸಹ ಪ್ರೀ ಪ್ಲಾನ್ ಆಗಿದೆ. ನಾನು ಇದನ್ನು ಎಲ್ಲಿ ಬೇಕಿದ್ದರೂ ಹೇಳ್ತೀನಿ. ಎಸ್‌ಐಟಿ ವಿಚಾರಣೆಗೂ ನಾನು ರೆಡಿ ಇದ್ದೀನಿ. ಸಾಕ್ಷಿ ಸಹಿತ ನಾನು ಅವರಿಗೆ ಎಲ್ಲಾ ಹೇಳ್ತೀನಿ. ಧರ್ಮಸ್ಥಳ ವಿರುದ್ಧ ಷಡ್ಯಂತ್ರದಲ್ಲಿ ಭಾಗಿಯಾದ ಯೂಟ್ಯೂಬರ್‌ಗಳ ವಿರುದ್ಧ ಕ್ರಮ ಆಗಬೇಕು. ದುಡ್ಡಿಗಾಗಿ ಕೋಟ್ಯಾಂತರ ಭಕ್ತರ ಭಾವನೆಗಳ ಜೊತೆ ಆಟವಾಡಿದವರಿಗೆ ಶಿಕ್ಷೆ ಆಗಬೇಕು. ಸಮೀರ್, ಮಟ್ಟಣ್ಣ ವಿರುದ್ಧ ವಿಡಿಯೋ ಮಾಡಿದ್ದಕ್ಕೆ ಇನ್‌ಸ್ಟಾಗ್ರಾಮ್ ಅಕೌಂಟ್ ರಿಪೋರ್ಟ್ ಮಾಡಿಸಿದ್ದಾರೆ. ಅವರು ಹೇಳುವ ಕಥೆಗಳನ್ನು ಪ್ರಶ್ನಿಸಿದ್ರೆ ಕಾಪಿರೈಟ್ ಕೊಟ್ಟು ಡಿಲೀಟ್ ಮಾಡಿಸುತ್ತಾರೆ ಎಂದು ಯೂಟ್ಯೂಬರ್ ಸುಮಂತ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!
ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು