ಏರಿದ ಕಿಕ್- ಮೂರೇ ವರ್ಷದಲ್ಲಿ ದ್ವಿಗುಣವಾದ ಬಿಯರ್ ಮಾರಾಟ । ಕಳೆದ ಡಿಸೆಂಬರ್‌ಗಿಂತ ಈ ಸಲ 1.5 ಲಕ್ಷ ಕೇಸ್ ಅಧಿಕ ಬಿಯರ್ ಮಾರಾಟ. ಇನ್ನಿತರ ಮದ್ಯಗಳ ಮಾರಾಟವೂ ಗಣನೀಯ ಜಿಗಿತ । ರಾಜಸ್ವಕ್ಕೆ ಹೆಚ್ಚಿನ ‘ಕಾಣಿಕೆ’ ನೀಡುತ್ತಿರುವ ಅಬಕಾರಿ ಇಲಾಖೆ
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಜ.1): ದರ ಹೆಚ್ಚಳದ ನಡುವೆಯೂ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಬಿಯರ್ ಮಾರಾಟವಂತೂ ಶರವೇಗದಲ್ಲಿ ಮುನ್ನುಗ್ಗುತ್ತಿದೆ. 2020ರಲ್ಲಿ 226.21 ಲಕ್ಷ ಕೇಸ್ ಇದ್ದ ಬಿಯರ್ ಮಾರಾಟ, ಈ ವರ್ಷದ ಡಿಸೆಂಬರ್ 19ರವರೆಗೆ 430.25 ಲಕ್ಷ ಕೇಸ್ ಮಾರಾಟವಾಗಿದ್ದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಸಾಧ್ಯತೆ ಇದೆ.
2020ರಲ್ಲಿ ಬಿಯರ್ ಮಾರಾಟ 226.21 ಲಕ್ಷ ಕೇಸ್ (650 ಎಂಎಲ್‌ನ 12 ಬಾಟಲ್‌ನ ಒಂದು ಬಾಕ್ಸ್ ) ಇದ್ದಿದ್ದು ಮೂರೇ ವರ್ಷದಲ್ಲಿ ದ್ವಿಗುಣವಾಗಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಸೇರಿದಂತೆ ಇನ್ನಿತರ ಮದ್ಯಗಳೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು ಅಬಕಾರಿ ಇಲಾಖೆಯು ರಾಜಸ್ವಕ್ಕೆ ಹೆಚ್ಚಿನ ‘ಕಾಣಿಕೆ’ ನೀಡುತ್ತಿದೆ.
ಪ್ರತಿದಿನ ಸ್ವಲ್ಪ ಸ್ವಲ್ಪ ಬಿಯರ್ ಕುಡಿದ್ರೆ ಏನೂ ಆಗಲ್ಲ ಅಂತಾ ಅಂದ್ಕೊಡಿರೋರು ಇದನ್ನ ಓದಿ
2020ರಲ್ಲಿ 226.21 ಲಕ್ಷ ಕೇಸ್ ಇದ್ದ ಬಿಯರ್ ಮಾರಾಟ, 2021ರಲ್ಲಿ 265.92 ಲಕ್ಷಕ್ಕೆ ಬಂದಿತ್ತು. ಇದು 2022ರಲ್ಲಿ ಭಾರೀ ಹೆಚ್ಚಳ ಕಂಡು 365.30 ಲಕ್ಷ ಕೇಸ್ ಬಿಕರಿಯಾಗಿತ್ತು. ಪ್ರಸಕ್ತ 2023ರಲ್ಲಂತೂ ಡಿ.29ರವರೆಗಿನ ಅಂಕಿ ಅಂಶಗಳಂತೆ 430.25 ಲಕ್ಷ ಕೇಸ್ ಮಾರಾಟವಾಗಿದ್ದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎರಡು ದಿವಸದಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಾಣಲಿದೆ.
13 ಲಕ್ಷ ಕೇಸ್ ಅಧಿಕ ಮಾರಾಟ:
ವಿಸ್ಕಿ, ಬ್ರಾಂದಿ, ರಮ್, ಜಿನ್ ಸೇರಿದಂತೆ ಇನ್ನಿತರ ಮದ್ಯಗಳ ಮಾರಾಟವೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2020 ರಲ್ಲಿ 562.93 ಲಕ್ಷ ಕೇಸ್ (180 ಎಂಎಲ್‌ನ 48 ಬಾಟಲ್‌ನ ಒಂದು ಬಾಕ್ಸ್ ) ಮಾರಾಟವಾದರೆ 2021 ರಲ್ಲಿ 650.68 ಲಕ್ಷ ಕೇಸ್ ಬಿಕರಿಯಾಗಿವೆ. 2022ರಲ್ಲಿ 694.36 ಲಕ್ಷ ಕೇಸ್ ಮಾರಾಟವಾದರೆ 2023ರ ಡಿ.29ರ ವೇಳೆಗೆ 707.42 ಲಕ್ಷ ಕೇಸ್ ಮದ್ಯ ಮಾರಾಟವಾಗಿತ್ತು.
ಕಳೆದ ಮೂರು ವರ್ಷದಲ್ಲಿ ಡಿಸೆಂಬರ್ ತಿಂಗಳಿನಲ್ಲಂತೂ ಬಿಯರ್ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. 2021 ಡಿಸೆಂಬರ್‌ನಲ್ಲಿ 26.69 ಲಕ್ಷ ಕೇಸ್, 2022 ಡಿಸೆಂಬರ್‌ನಲ್ಲಿ 36.03 ಲಕ್ಷ ಕೇಸ್, 2023 ಡಿಸೆಂಬರ್‌ನಲ್ಲಿ ಡಿ.29ಕ್ಕೇ 37.51 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ಹೊಸ ವರ್ಷಾಚರಣೆಯೇ ಮಾರಾಟ ಹೆಚ್ಚಳವಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.
‘ಬಿಯರ್ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಂಡುಬರುತ್ತಿದೆ. ಇನ್ನಿತರ ಮದ್ಯ ಮಾರಾಟವೂ ಪ್ರಸಕ್ತ ಸಾಲಿನಲ್ಲಿ ಇನ್ನಷ್ಟು ಹೆಚ್ಚಳವಾಗಬೇಕಿತ್ತಾದರೂ ಬರಗಾಲದ ಹಿನ್ನೆಲೆಯಲ್ಲಿ ಮಾರಾಟ ಪ್ರಮಾಣ ಆಂದುಕೊಂಡಷ್ಟು ಏರಿಲ್ಲ’ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇಸ್ಲಾಂನಲ್ಲಿ ಮದ್ಯ ನಿಷೇಧ, ಆದರೂ ದೇಶದಲ್ಲಿ ಮದ್ಯ ತಯಾರಿಕೆಗೆ ಒಪ್ಪಿಗೆ ನೀಡಿದ ಗಲ್ಫ್ ದೇಶ!
ಇಸವಿ ಮದ್ಯ ಮಾರಾಟ (ಲಕ್ಷ ಕೇಸ್) ಬಿಯರ್