ಸಂಘಟಿತ ಅಪರಾಧ ತನಿಖೆ ಅನುಮತಿಗೆ ಎಚ್ಚರಿಕೆ ವಹಿಸಿ: ಹೈಕೋರ್ಟ್‌

Published : Mar 26, 2025, 12:19 PM ISTUpdated : Mar 26, 2025, 12:20 PM IST
ಸಂಘಟಿತ ಅಪರಾಧ ತನಿಖೆ ಅನುಮತಿಗೆ ಎಚ್ಚರಿಕೆ ವಹಿಸಿ: ಹೈಕೋರ್ಟ್‌

ಸಾರಾಂಶ

ಭಾರತೀಯ ನ್ಯಾಯ ಸಂಹಿತೆ ಅಡಿ ಸಂಘಟಿತ ಅಪರಾಧ ಕೃತ್ಯಗಳಲ್ಲಿ ತನಿಖೆಗೆ ಅನುಮತಿಸು ವಾಗ ವಿಚಾರಣಾ ನ್ಯಾಯಾಲಯಗಳು ಬಹಳ ಎಚ್ಚರಿಕೆಯಿಂದ ಇರಬೇಕು ಹೈಕೋರ್ಟ್‌ ಎಂದು ನಿರ್ದೇಶಿಸಿದೆ. 

ಬೆಂಗಳೂರು (ಮಾ.26): ಭಾರತೀಯ ನ್ಯಾಯ ಸಂಹಿತೆ ಅಡಿ ಸಂಘಟಿತ ಅಪರಾಧ ಕೃತ್ಯಗಳಲ್ಲಿ ತನಿಖೆಗೆ ಅನುಮತಿಸು ವಾಗ ವಿಚಾರಣಾ ನ್ಯಾಯಾಲಯಗಳು ಬಹಳ ಎಚ್ಚರಿಕೆಯಿಂದ ಇರಬೇಕು ಹೈಕೋರ್ಟ್‌ ಎಂದು ನಿರ್ದೇಶಿಸಿದೆ. ಸ್ನೇಹಿತನ ಸೂಚನೆಯಂತೆ ಆತನ ಎಟಿಎಂ ಕಾರ್ಡ್ ಬಳಸಿ ಒಂದು ಲಕ್ಷ ರು. ಡ್ರಾ ಮಾಡಿದ ಪ್ರಕರ ಣದಲ್ಲಿ ಬಂಧನಕ್ಕೆ ಒಳಗಾಗಿರುವ ಗೋವಾ ನಿವಾಸಿ ಅವಿನಾಶ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಈ ನಿರ್ದೇಶನ ನೀಡಿ ಜಾಮೀನು ಮಂಜೂರು ಮಾಡಿದೆ. 

ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧ ಸಂಘಟಿತ ಅಪರಾಧ ಸಂಬಂಧ ತನಿಖೆ ನಡೆಸಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಿದೆ. ಪ್ರಕರಣದಲ್ಲಿ 90 ದಿನದಲ್ಲಿ ತನಿಖೆ ಮುಗಿಸಿ ಅಂತಿಮ ವರದಿ ಸಲ್ಲಿಸಬೇಕು. ಇಲ್ಲವಾದರೆ ಆರೋಪಿ ಡಿಫಾಲ್ಟ್ ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ ಎಂದಿದೆ. ಸಂಘಟಿತ ಅಪರಾಧ ಪ್ರಕರಣ ಸಂಬಂಧ ತನಿಖೆ ನಡೆಸುವಾಗ ಆರೋಪಿ ಸಂಘಟಿತ ಅಪರಾಧಗಳ ಸಿಂಡಿಕೇಟ್ ಸದಸ್ಯನಾಗಿ ರಬೇಕು, ಅಪರಾಧ ಎಸಗಿರಬೇಕು. 10 ವರ್ಷಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರಬೇಕು. 

ಕಾನೂನು ಬಾಹಿರ ಅಪರಾಧ ಕೃತ್ಯಗಳನ್ನು ಎಸಗಿರಬೇಕು. ಈ ಅಂಶಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕು ಎಂದಿದೆ. ಪ್ರಕರಣದಲ್ಲಿ ಅರ್ಜಿದಾರನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ, ತನಿಖಾಧಿಕಾರಿ ದಾಖಲೆ ಸಂಗ್ರಹಿಸಿಲ್ಲ. ಅಂದರೆ ತನಿಖಾಧಿಕಾರಿ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಿವೇಚನಾ ರಹಿತವಾಗಿ ಪುರಸ್ಕರಿ ಸಿರುವುದು ತಿಳಿಯಲಿದೆ. ಆದ್ದರಿಂದ ಇನ್ನು ಮುಂದೆ ಸಂಘಟಿತ ಅಪರಾಧ ಕೃತ್ಯದ ಕುರಿತು ತನಿಖೆಗೆ ಅನುಮತಿ ನೀಡುವಾಗ ಎಚ್ಚರ ವಹಿಸಿ ಎಂದು ನಿರ್ದೇಶನ ನೀಡಿದೆ.

ದಾಸನಪುರ ಎಪಿಎಂಸಿಯಲ್ಲಿ ಅಘೋಷಿತ ಬಂದ್‌: ತುಕ್ಕಿಗೆ ತುತ್ತಾದ ಸೌಲಭ್ಯಗಳು!

ಕ್ರಿಮಿನಲ್‌ ಕೇಸು ಹಿಂಪಡೆಯಲ್ಲ: ರಾಜ್ಯದ ವಿವಿಧ ಸಂಘಟನೆಗಳ ಹೋರಾಟಗಾರರು, ರಾಜಕಾರಣಿಗಳು ಹಾಗೂ ಅತ್ಯಂತ ಪ್ರಭಾವಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಏ.8ರವರೆಗೆ ಹಿಂಪಡೆಯುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ. ಹೋರಾಟಗಾರರು, ರಾಜಕಾರಣಿಗಳು ಹಾಗೂ ಪ್ರಭಾವಿಗಳ ಮತ್ತಿತರರ ವಿರುದ್ಧ ದಾಖಲಾಗಿರುವ ವಿವಿಧ 43 ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ 2024ರ ಅ.10ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ನಗರದ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿರುವ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ